ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅವರು ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬಿಝಿ ಇದ್ದಾರೆ. ಭಾರತದ ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಕುರಿತಾದ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿರುವ ನಟಿ ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನೂ ಘೋಷಿಸಿದ್ದಾರೆ.
ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಕುರಿತಾಗಿನ ಕಥೆ ಈ ಸಿನಿಮಾದಲ್ಲಿದೆ. ಆ ಸಮಯದಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸಿದ್ದು, ಜನರು ಹೋರಾಟ ನಡೆಸಿದ್ದು, ಮಾಧ್ಯಮಗಳು ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಿದ್ದನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ. ಇಂದಿರಾ ಗಾಂಧಿ ಅವರು “ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ” ಎಂದು ಹೇಳುವ ಮೂಲಕ ಟ್ರೇಲರ್ ಮುಕ್ತಾಯವಾಗುತ್ತದೆ.
ಇದನ್ನೂ ಓದಿ: Viral Video: ಗುಜರಾತ್ ಮಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯರ ರಕ್ಷಣೆ: ಹ್ಯಾಪಿ ವೀಕೆಂಡ್ ಎಂದ ಮುಂಬಯಿ ಮಂದಿ
ಈ ಟ್ರೇಲರ್ ಅನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟಿ, “ಪ್ರೊಟೆಕ್ಟರ್ ಅಥವಾ ಡಿಕ್ಟೇಟರ್? ನಮ್ಮ ದೇಶದ ಜನರ ಮೇಲೆಯೇ ನಾಯಕಿ ಯುದ್ಧ ಸಾರಿದ ಕರಾಳ ಇತಿಹಾಸವನ್ನು ನೋಡೋಣ. ಎಮರ್ಜೆನ್ಸಿ ಈ ನವೆಂಬರ್ 24ರಂದು ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದಾರೆ. ನಟಿಯ ಟ್ವೀಟ್ ಅನ್ನು ಸಾಕಷ್ಟು ಜನರು ಮೆಚ್ಚಿಕೊಂಡು ಲೈಕ್ಗಳನ್ನು ಕೊಡಲಾರಂಭಿಸಿದ್ದಾರೆ ಹಾಗೆಯೇ ರಿಟ್ವೀಟ್ ಮಾಡಿದ್ದಾರೆ.
A protector or a Dictator? Witness the darkest phase of our history when the leader of our nation declared a war on it’s people.
— Kangana Ranaut (@KanganaTeam) June 24, 2023
🔗 https://t.co/oAs2nFWaRd#Emergency releasing worldwide on 24th November pic.twitter.com/ByDIfsQDM7
ವಿಶೇಷವೆಂದರೆ ಈ ಸಿನಿಮಾದಲ್ಲಿ ಕಂಗನಾ ನಟಿಯಾಗಿ ನಟಿಸಿರುವುದಷ್ಟೇ ಅಲ್ಲದೆ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಹಿಂದೆ ನಟಿ ತಲೈವಿ ಸಿನಿಮಾದಲ್ಲಿ ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ, ಜೆ.ಜಯಲಲಿತಾ ಅವರಾಗಿಯೂ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸಾಕಷ್ಟು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.