Site icon Vistara News

Kangana Ranaut: ಬಿಂದಿ, ಸಿಂಧೂರ, ಮಂಗಳಸೂತ್ರ ಧರಿಸಿದ ವಿಜ್ಞಾನಿಗಳನ್ನು ಶ್ಲಾಘಿಸಿದ ಕಂಗನಾ!

Kangana Ranaut

ಬೆಂಗಳೂರು: ನಟಿ ಕಂಗನಾ ರಣಾವತ್‌ (Kangana Ranaut) ಆಗಸ್ಟ್‌ 27ರ ಭಾನುವಾರ ತಮ್ಮ ಇನ್‌ಸ್ಟಾದಲ್ಲಿ ಮಹಿಳಾ ವಿಜ್ಞಾನಿಗಳ (women scientists of Chandrayaan-3) ಫೋಟೊವನ್ನು ಹಂಚಿಕೊಳ್ಳುವುದರ ಮೂಲಕ ಚಂದ್ರಯಾನ-3 ಯಶಸ್ಸಿಗೆ ಕಾರಣವಾದ ಮಹಿಳಾ ವಿಜ್ಞಾನಿಗಳ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಮಹಿಳಾ ಮಣಿಗಳ ಫೋಟೊದೊಂದಿಗೆ (female ISRO scientists) “ಭಾರತದ ಪ್ರಮುಖ ವಿಜ್ಞಾನಿಗಳು, ಅವರೆಲ್ಲರೂ ಬಿಂದಿ, ಸಿಂಧೂರ ಮತ್ತು ಮಂಗಳಸೂತ್ರವನ್ನು ಧರಿಸಿದ್ದಾರೆ. ಜತೆಗೆ ಸರಳ ಜೀವನ ಮತ್ತು ಉನ್ನತ ಚಿಂತನೆಯ ಸಾರಾಂಶ ಹೊಂದಿರುವವರು. ಇದು ಭಾರತೀಯತೆಯ ನಿಜವಾದ ಸಾರ” ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೂ ಮುನ್ನ, ‘ಚಂದ್ರಯಾನ-3’ ಯೋಜನೆಯಲ್ಲಿ ಭಾಗಿಯಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹಿಳಾ ವಿಜ್ಞಾನಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (PM Modi ) ಆಗಸ್ಟ್‌ 26ರಂದು ಸಂವಾದ ನಡೆಸಿದ್ದರು.

ಚಂದ್ರನ ದಕ್ಷಿಣ ಧ್ರುವದಲ್ಲಿ (Moon South Pole) ಈವರೆಗೂ ಯಾವುದೇ ರಾಷ್ಟ್ರವು ಇಂಥ ಸಾಧನೆ ಮಾಡಲು ಸಾಧ್ಯವಾಗದ್ದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಾಧಿಸಿ ತೋರಿಸಿದೆ. ಈ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹಾಗಾಗಿ, ಭಾರತದ ಈ ಸಾಧನೆಯು ವಿಶೇಷ ಮನ್ನಣೆಗೆ ಪಾತ್ರವಾಗಿದೆ. 

ಚಂದ್ರಯಾನ 2 ತಿರಂಗಾ ಪಾಯಿಂಟ್!‌ ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ

ಭಾರತದ ಚಂದ್ರಯಾನ 3 (Chandrayaan 3) ತಲುಪಿದ ಜಾಗವನ್ನು ಇನ್ನು ಮುಂದೆ ಭಾರತದ ಸಾಧನೆಯ ದ್ಯೋತಕವಾಗಿ ʼಶಿವಶಕ್ತಿ ಪಾಯಿಂಟ್‌ʼ (Shivashakthi point) ಎಂದು ಕರೆಯಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಈಗಾಗಲೇ ಘೋಷಿಸಿದ್ದಾರೆ. ಚಂದ್ರಯಾನ 3 ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್‌ 23ನ್ನು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನ (ಹಿಂದೂಸ್ತಾನ್‌ ನ್ಯಾಷನಲ್‌ ಸ್ಪೇಸ್‌ ಡೇ- Hindustan national space day) ಎಂದು ಕರೆಯಲಾಗುವುದು ಎಂದೂ ಅವರು ಘೋಷಿಸಿದರು.

ಇದನ್ನೂ ಓದಿ: Kangana Ranaut: ಆ ಸೂಪರ್‌ ಸ್ಟಾರ್‌ ಸ್ರ್ತೀ ಲೋಲ, ಪ್ರಚಾರಕ್ಕಾಗಿ ಮಗು ಮಾಡಿಕೊಂಡ ಎಂದ ಕಂಗನಾ!

ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ಗಳನ್ನು ಶಿವ ಮತ್ತು ಶಕ್ತಿಗೆ ಹೋಲಿಸಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನದ ಬಲದಿಂದ ಈ ಸಾಧನೆ ಸಾಧ್ಯವಾಗಿದೆ. ವಿಕ್ರಮ್‌ನ ವಿಶ್ವಾಸದ ಜತೆಗೆ ಪ್ರಗ್ಯಾನ್‌ನ ಪರಾಕ್ರಮ ಇದೆ. ಹೀಗಾಗಿ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗವನ್ನು ಶಿವಶಕ್ತಿ ಪಾಯಿಂಟ್‌ ಎಂದು ಕರೆಯೋಣ ಎಂದರು. ಹಾಗೆಯೇ ಚಂದ್ರಯಾನ 3 ಚಂದ್ರನಲ್ಲಿ ವಿಜಯಧ್ವಜ ಊರಿದ ದಿನವಾದ ಆಗಸ್ಟ್‌ 23ನ್ನು ಪ್ರತಿವರ್ಷವೂ ಸಂಭ್ರಮಿಸಲು ʼಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ದಿನ (ಹಿಂದೂಸ್ತಾನ್‌ ನ್ಯಾಷನಲ್‌ ಸ್ಪೇಸ್‌ ಡೇ) ಎಂದು ಕರೆಯೋಣ ಎಂದರು.

ಶಿವ- ಶಕ್ತಿಯಲ್ಲಿ ಶಕ್ತಿಯು ಪ್ರಮುಖವಾಗಿದೆ. ನಿರ್ಮಾಣದಿಂದ ಪ್ರಳಯದವರೆಗೆ ಎಲ್ಲವನ್ನೂ ಈಡೇರಿಸುವುದು ನಾರಿಶಕ್ತಿ. ಚಂದ್ರಯಾನದಲ್ಲಿ ಮಹಿಳಾ ವಿಜ್ಞಾನಿಗಳು ದೊಡ್ಡ ಭೂಮಿಕೆ ನಿರ್ವಹಿಸಿದ್ದಾರೆ. ಚಂದ್ರಮನ ಶಿವಶಕ್ತಿ ಪಾಯಿಂಟ್‌ ಭಾರತದ ನಾರಿಶಕ್ತಿಯ ಹಾಗೂ ದಾರ್ಶನಿಕ ಚಿಂತನೆಯ ನಿದರ್ಶನವಾಗಿರಲಿದೆ ಎಂದು ಅವರು ಶ್ಲಾಘಿಸಿದರು.

ನಾನು ನಿಮ್ಮ ಎಷ್ಟು ಗುಣಗಾನ ಮಾಡಿದರೂ ಕಡಿಮೆ. ಇದು ವಿಜ್ಞಾನದ ಪರಾಕ್ರಮದಂತೆಯೇ ಪ್ರಜ್ಞಾನದ ಪರಾಕ್ರಮ ಕೂಡ ಆಗಿದೆ. ನಮ್ಮ ಭಾರತದ ಚಿಹ್ನೆ ಅಲ್ಲಿ ಮೂಡಿದೆ. ಭೂಮಿಯ ಲಕ್ಷಾಂತರ ವರ್ಷಗಳ ಇತಿಹಾಸದಲ್ಲಿ ಅಮರವಾದ ಕ್ಷಣವನ್ನು ಭಾರತ ದಾಖಲಿಸಿದೆ. ಇದು ಪೂರ್ತಿ ಮಾನವತೆಯ ಸಫಲತೆ. ಇದರಿಂದ ಎಲ್ಲ ದೇಶಗಳಿಗೂ ಹೊಸ ರಸ್ತೆ ತೆರೆದಂತಾಗಿದೆ. ಇದು ಮನುಕುಲಕ್ಕೆ ಭಾರತ ನೀಡಿದ ಕೊಡುಗೆ ಎಂದರು.

Exit mobile version