ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಯಾವಾಗಲೂ ಸುದ್ದಿಯಲ್ಲಿರುವ ನಟಿ. ರಾಜಕೀಯ, ಧರ್ಮ, ಬಾಲಿವುಡ್ ಹೀಗೆ ಹಲವಾರು ವಿಚಾರಗಳಲ್ಲಿ ಯಾರೂ ಹೇಳದಂತಹ ಅನೇಕ ವಿಚಾರಗಳನ್ನು ನಟಿ ನೇರವಾಗಿ ಹೇಳಿ ಅನೇಕರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಅಂದ ಹಾಗೆ ನಟಿ ದೇಶ ವಿರೋಧಿಗಳ ವಿರುದ್ಧ ಮಾತನಾಡಿದ್ದರಿಂದಲೇ ವರ್ಷಕ್ಕೆ 30-40 ಲಕ್ಷ ರೂ. ನಷ್ಟ ಮಾಡಿಕೊಳ್ಳುತ್ತಿದ್ದಾರಂತೆ. ಈ ಬಗ್ಗೆ ಅವರೇ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.
ನಟಿ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರ ಸಂದರ್ಶನವೊಂದರ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಆ ಕಾರ್ಯಕ್ರಮಕ್ಕೆ ʼಎಲಾನ್ ಮಸ್ಕ್: ನಾನು ನನಗೆ ಬೇಕಾಗಿದ್ದನ್ನು ಹೇಳುತ್ತೇನೆ, ಅದರ ಪರಿಣಾಮ ನಾನು ಹಣ ಕಳೆದುಕೊಳ್ಳಬಹುದು, ಆಗಲಿ ಬಿಡಿʼ ಎಂದಿತ್ತು. ಅದರ ವಿಡಿಯೊ ಹಂಚಿಕೊಂಡಿರುವ ನಟಿ, “ಇದು ನಿಜವಾದ ಕ್ಯಾರೆಕ್ಟರ್. ಯಶಸ್ಸಿನ ನಿಜವಾದ ಸ್ವಾತಂತ್ರ್ಯ. ಹಿಂದೂಗಳ ಪರವಾಗಿ, ರಾಜಕಾರಣಿಗಳು, ದೇಶ ದ್ರೋಹಿಗಳು, ತುಕ್ಡೆ ಗ್ಯಾಂಗ್ ವಿರುದ್ಧ ಮಾತನಾಡಿದ್ದರಿಂದ ಸುಮಾರು 20-25 ಬ್ರ್ಯಾಂಡ್‌ಗಳು ನನ್ನೊಂದಗಿನ ಒಪ್ಪಂದ ಮುರಿದುಕೊಂಡವು. ರಾತ್ರೋರಾತ್ರಿ ನನ್ನ ಒಪ್ಪಂದವನ್ನು ಮುರಿದುಕೊಂಡವು. ಅದು ನನಗೆ ವರ್ಷಕ್ಕೆ 30-40 ಕೋಟಿ ರೂ. ನಷ್ಟ ಉಂಟುಮಾಡಿದವು” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Urfi Javed: ಮಾಧುರಿ ದೀಕ್ಷಿತ್ ಕಾರಣಕ್ಕೆ ಉರ್ಫಿ ಜಾವೇದ್ ಗರಂ: ಕಂಗನಾ ರಣಾವತ್‌ರನ್ನು ಹೊಗಳಿದ್ಯಾಕೆ?
“ಆದರೆ ನಾನು ನನಗೆ ಬೇಕಾದದ್ದನ್ನು ಹೇಳುವುದಕ್ಕೆ ಸ್ವತಂತ್ರಳಾಗಿದ್ದೇನೆ. ನಾನು ಎಲಾನ್ ಅವರನ್ನು ಪ್ರಶಂಶಿಸುತ್ತೇನೆ. ಎಲ್ಲರೂ ದುರ್ಬಲತೆಯನ್ನೂ ತೋರಿಸಿಕೊಳ್ಳುತ್ತಾರೆ. ಕೊನೆಪಕ್ಷ ಶ್ರೀಮಂತರಾದರೂ ಹಣದ ಬಗ್ಗೆ ಯೋಚನೆ ಮಾಡಬಾರದು.
ಅಂದ ಹಾಗೆ ನಟಿ ಇತ್ತೀಚೆಗೆ ಭಾರತದಲ್ಲಿ ಸಿನಿಮಾ ಥಿಯೇಟರ್‌ಗಳು ಮುಚ್ಚುತ್ತಿರುವ ಬಗ್ಗೆ ಮಾತನಾಡಿದ್ದರು. “ನಮ್ಮ ದೇಶದಲ್ಲಿ ಇನ್ನಷ್ಟು ಚಿತ್ರಮಂದಿರಗಳು ಬೇಕಿವೆ. ಇನ್ನಷ್ಟು ಸ್ಕ್ರೀನ್‌ಗಳು ಬೇಕಾಗಿವೆ. ಈ ರೀತಿ ಥಿಯೇಟರ್‌ಗಳು ಬಾಗಿಲು ಮುಚ್ಚುತ್ತಿರುವುದು ಸಿನಿಮಾ ಕ್ಷೇತ್ರಕ್ಕೆ ಒಳ್ಳೆಯದಲ್ಲ. ಮಧ್ಯಮ ವರ್ಗದ ಕುಟುಂಬಗಳಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ನೋಡುವುದು ದೊಡ್ಡ ಹೊರೆಯಾಗಿದೆ. ದರ ಹೆಚ್ಚಾಗಿದೆ. ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: Kangna Sharma: ಕಂಗನಾ ಶರ್ಮಾ ಚರಿಷ್ಮಾಟಿಕ್ ಫೋಟೊಶೂಟ್
ಸದ್ಯ ಕಂಗನಾ ಅವರು ತಮ್ಮ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದ ಕೆಲಸ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ನಟಿ ರಾಘವ್ ಲಾರೆನ್ಸ್ ಅವರೊಂದಿಗೆ ಚಂದ್ರಮುಖಿ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.