Site icon Vistara News

Kangana Ranaut: ಆಲಿಯಾ ಅತ್ಯುತ್ತಮ ನಟಿ; ಗಮನ ಸೆಳೆದ ಕಂಗನಾ ಕಮೆಂಟ್​  

Kangana Ranaut Alia Bhatt

ಬೆಂಗಳೂರು: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಕಂಗನಾ ರಣಾವತ್ (Kangana Ranaut) ಅಭಿನಂದನೆ ಸಲ್ಲಿಸಿದ್ದಾರೆ. ಆಗಸ್ಟ್‌ 24ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಘೋಷಿಸಲಾಯಿತು. ಆಲಿಯಾ ಭಟ್ (Alia Bhatt Wins National Film Award) ಮತ್ತು ಕೃತಿ ಸನೂನ್‌ (Kriti Sanon) ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡರೆ, ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಆರ್ ಮಾಧವನ್ ಅವರ ʻರಾಕೆಟ್ರಿ: ನಂಬಿ ಎಫೆಕ್ಟ್ʼ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ʻತಲೈವಿʼ (Thalaivii cinema) ಚಿತ್ರಕ್ಕಾಗಿ ಕಂಗನಾ ಪ್ರಶಸ್ತಿಯನ್ನು ಗೆಲ್ಲುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ತಲೈವಿ’ ಸಿನಿಮಾ ಯಾವುದೇ ಪ್ರಶಸ್ತಿ ಪಡೆದುಕೊಂಡಿಲ್ಲ. ಈ ಬಗ್ಗೆ ನಟಿ ಕಂಗನಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಂಗನಾ ʻʻ69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳು. ದೇಶದಾದ್ಯಂತ ಇರುವ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಅವಾರ್ಡ್ ಇದಾಗಿದೆ. ನನ್ನ ತಲೈವಿ ಸಿನಿಮಾ ಗೆಲ್ಲಲಿಲ್ಲ ಎಂದು ನಿರಾಶೆಗೊಂಡಿರುವ ನೀವೆಲ್ಲರೂ ದಯವಿಟ್ಟು ತಿಳಿದುಕೊಳ್ಳಿ. ಆದರೆ, ಭಗವಂತ ಕೃಷ್ಣ ಏನೇ ಕೊಟ್ಟರು ಮತ್ತು ಕೊಡದಿದ್ದರೂ ನಾನು ಅವನಿಎ ಚಿರಋಣಿ. ನನ್ನನ್ನು ನಿಜವಾಗಿಯೂ ಪ್ರೀತಿಸುವ ಮತ್ತು ಮೆಚ್ಚುವ ನೀವೆಲ್ಲರೂ ನನ್ನ ದೃಷ್ಟಿಕೋನವನ್ನು ಮೆಚ್ಚಲೇಬೇಕು. ಕಲೆ ವ್ಯಕ್ತಿನಿಷ್ಠ. ತೀರ್ಪುಗಾರರು ತಮ್ಮ ಕೈಲಾದಷ್ಟು ಮಾಡಿದ್ದಾರೆ,” ಎಂದು ಕಂಗನಾ ಬರೆದುಕೊಂಡಿದ್ದಾರೆ.

ತಲೈವಿ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಕನಿಷ್ಠವಾಗಿದ್ದರೂ ಅನೇಕರು ಚಿತ್ರದಲ್ಲಿ ಕಂಗನಾ ಅವರ ಅಭಿನಯವನ್ನು ಶ್ಲಾಘಿಸಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರನ್ನು ಆಧರಿಸಿದ ಚಿತ್ರ ಇದಾಗಿದೆ.

ಇದನ್ನೂ ಓದಿ: Kangana Ranaut: ಆ ಸೂಪರ್‌ ಸ್ಟಾರ್‌ ಸ್ರ್ತೀ ಲೋಲ, ಪ್ರಚಾರಕ್ಕಾಗಿ ಮಗು ಮಾಡಿಕೊಂಡ ಎಂದ ಕಂಗನಾ!

ಕಂಗನಾ ಅವರು ಸದ್ಯ ʼತೇಜಸ್‌ʼ ಸಿನಿಮಾದಲ್ಲಿ ವಾಯು ಪಡೆಯ ಪೈಲಟ್‌ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕಥೆಯನ್ನು ಸರ್ವೇಶ್‌ ಮೆವಾರಾ ಅವರು ಬರೆದಿದ್ದು, ಅವರೇ ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾ ಈ ವರ್ಷ ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ. ಇದಲ್ಲದೆ ಕಂಗನಾ ಅವರು ತಮ್ಮದೇ ನಿರ್ದೇಶನದಲ್ಲಿ ಬರುತ್ತಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Exit mobile version