Site icon Vistara News

Kangana Ranaut: ಆ ಸೂಪರ್‌ ಸ್ಟಾರ್‌ ಸ್ರ್ತೀ ಲೋಲ, ಪ್ರಚಾರಕ್ಕಾಗಿ ಮಗು ಮಾಡಿಕೊಂಡ ಎಂದ ಕಂಗನಾ!

ಬೆಂಗಳೂರು: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut) ಬಾಲಿವುಡ್‌ ಸ್ಟಾರ್‌ಗಳನ್ನು ಟೀಕಿಸುವುದು ಇದೇನು ಮೊದಲನೇನಲ್ಲ. ಇದೀಗ ಇಬ್ಬರು ಸೂಪರ್‌ ಸ್ಟಾರ್‌ಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಬಳಸಿಕೊಂಡು ಸ್ಕ್ಯಾಮ್‌ ನಡೆಯುತ್ತಿದೆ ಎಂದಿದ್ದಾರೆ. ಫ್ಯಾನ್ಸ್‌ಗಳು ಕಳುಹಿಸಿದ ಸ್ಕ್ರೀನ್‌ ಶಾಟ್‌ ಶೇರ್‌ ಮಾಡಿ ಅಭಿಮಾನಿಗಳಿಗೆ ಎಚ್ಚರಿಕೆ ವಹಿಸಿ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅಚ್ಚರಿ ಸಂಗತಿಗಳ ಬಗ್ಗೆ ರಿವೀಲ್‌ ಮಾಡಿದ್ದಾರೆ.

ಕಂಗನಾ ಇನ್ಸ್‌ಸ್ಟಾ ಸ್ಟೋರಿಯಲ್ಲಿ ʻʻಫಿಲ್ಮ್ ಮಾಫಿಯಾ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಈ ಸೂಪರ್‌ಸ್ಟಾರ್ ನಾನು ಡೇಟಿಂಗ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆತ ನನ್ನೊಂದಿಗೆ ಚಾಟ್ ಮಾಡಲು ವಿವಿಧ ನಂಬರ್‌ ಮತ್ತು ಖಾತೆಗಳನ್ನು ಬಳಸುತ್ತಿದ್ದಾನೆ. ನನ್ನನ್ನೂ ಹ್ಯಾಕ್ ಮಾಡಲು ನೋಡಿದ್ದಾನೆʼʼಎಂದು ಪರೋ ಕ್ಷವಾಗಿ ಹೃತಿಕ್‌ ರೋಷನ್‌ ಮೇಲೆ ನಟಿ ಆರೋಪ ಮಾಡಿದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿಯೂ “ಫಿಲ್ಮ್ ಮಾಫಿಯಾ” ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ನಟಿ ಹೇಳಿಕೊಂಡಿದ್ದಾರೆ. ʻʻಮುಂಬೈ ಪೊಲೀಸರು ದಯವಿಟ್ಟು ಈ ಬಗ್ಗೆ ಕ್ರಮ ತೆಗೆದುಕೊಳ್ಳಿ, “ಎಂದು ಬರೆದುಕೊಂಡಿದ್ದಾರೆ.

ರಣಬೀರ್‌ ಮತ್ತು ಆಲಿಯಾ ಕುರಿತಾಗಿಯೂ ನಟಿ ಟೀಕಿಸಿದ್ದಾರೆ. ಇವರಿಬ್ಬರ ಮದುವೆ ಕೂಡ ಫೇಕ್‌ ಆಗಿದ್ದು, ಪ್ರಚಾರಕ್ಕಾಗಿ ಮಗು ಮಾಡಿಕೊಂಡಿದ್ದಾರೆ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ. ಈ ಬಗ್ಗೆ ನಟಿ ಬರೆದುಕೊಂಡಿದ್ದು ʻʻಸ್ರ್ತೀ ಲೋಲ ಆಗಿರುವ ಇನ್ನೊಬ್ಬ ಸೂಪರ್‌ಸ್ಟಾರ್ ನನ್ನ ಮನೆಗೆ ಬಂದು ಆತನೊಂದಿಗೆ ಡೇಟಿಂಗ್ ಮಾಡಲು ನನ್ನನ್ನು ಬೇಡಿಕೊಂಡರು. ಇದಕ್ಕೆ ನಾನು ಒಪ್ಪಲಿಲ್ಲ. ಬಳಿಕ ನನ್ನನ್ನು ಸಂಪರ್ಕಿಸಲು ಹಲವಾರು ನಂಬರ್‌ಗಳಿಂದ ಖಾತೆಗಳಿಂದ ಕಾಂಟ್ಯಾಕ್ಟ್‌ ಮಾಡಲು ಶುರು ಮಾಡಿದರು. ಆತನೇ ನನ್ನ ಎಲ್ಲ ಡಿವೈಸ್‌ಗಳನ್ನು ಹ್ಯಾಕ್‌ ಮಾಡಿದ್ದಾನೆ ಎಂದು ಅನ್ನಿಸುತ್ತಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; Kangana Ranaut : ಶ್ರಾವಣ ಮಾಸದ ಪ್ರಯುಕ್ತ ನಟಿ ಕಂಗನಾ ಮನೆಯಲ್ಲಿ ರುದ್ರಾಭಿಷೇಕ

ಅಷ್ಟೇ ಅಲ್ಲದೇ ಈ ಸೂಪರ್‌ ಸ್ಟಾರ್‌ ನನ್ನ ಬಳಿ ಹೇಳಿಕೊಂಡಿದ್ದು ಹೀಗೆ ʻʻನಮ್ಮ ಮದುವೆ ಫೆಕ್‌. ಮಗು ಕೂಡ ಪ್ರಚಾರ ಮಾಡುವ ತಂತ್ರಕ್ಕೆʼʼ ಎಂದು ಅವರು ಹೇಳಿದರು. ʻʻಇದನ್ನು ಕೇಳಿದಾಕ್ಷಣ ಆಶ್ಚರ್ಯಗೊಂಡೆ. ಯಾರಾದರೂ ನೈತಿಕವಾಗಿ ಭ್ರಷ್ಟರಾಗಲು ಸಾಧ್ಯವಾದರೆ ನಾನು ಇನ್ನೂ ನಂಬಲು ಸಾಧ್ಯವಿಲ್ಲ, ಅವರು ಮನುಷ್ಯರಲ್ಲ. ದೆವ್ವಗಳು. ಧರ್ಮದ ಮುಖ್ಯ ಉದ್ದೇಶವು ಅಧರ್ಮವನ್ನು ನಾಶಮಾಡುವುದು ಎಂದು ಶ್ರೀ ಕೃಷ್ಣ ಗೀತಾದಲ್ಲಿ ಹೇಳಿದ್ದಾನೆ.” ಎಂದು ಬರೆದುಕೊಂಡಿದ್ದಾರೆ.

ಕಂಗನಾ ಅವರು ಸದ್ಯ ʼತೇಜಸ್‌ʼ ಸಿನಿಮಾದಲ್ಲಿ ವಾಯು ಪಡೆಯ ಪೈಲಟ್‌ ಆಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕಥೆಯನ್ನು ಸರ್ವೇಶ್‌ ಮೆವಾರಾ ಅವರು ಬರೆದಿದ್ದು, ಅವರೇ ನಿರ್ದೇಶನವನ್ನೂ ಮಾಡಿದ್ದಾರೆ. ಈ ಸಿನಿಮಾ ಈ ವರ್ಷ ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ. ಇದಲ್ಲದೆ ಕಂಗನಾ ಅವರು ತಮ್ಮದೇ ನಿರ್ದೇಶನದಲ್ಲಿ ಬರುತ್ತಿರುವ ʼಎಮರ್ಜೆನ್ಸಿʼ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Exit mobile version