ಮುಂಬೈ: ಬಾಲಿವುಡ್‌ನ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದಲ್ಲಿ ಮದುವೆ ಕಾರ್ಯಕ್ರಮ ಜರುಗಲಿದ್ದು, ಅದಕ್ಕೆಂದು ಸಕಲ ಸಿದ್ಧತೆಯೂ ನಡೆದಿದೆ. ಇದೀಗ ಈ ಜೋಡಿ ಬಗ್ಗೆ ನಟಿ ಕಂಗನಾ ರಣಾವತ್ (Kangana Ranaut) ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Kangana Ranaut | ಎಮರ್ಜೆನ್ಸಿ ಸಿನಿಮಾಗಾಗಿ ನನ್ನೆಲ್ಲ ಆಸ್ತಿ ಅಡವಿಟ್ಟಿದ್ದೇನೆ, ಇದು ನನಗೆ ಪುನರ್ಜನ್ಮ: ಕಂಗನಾ ರಣಾವತ್
ಕಿಯಾರಾ ಮತ್ತು ಸಿದ್ಧಾರ್ಥ್ ನಟನೆಯ ʼಶೇರ್ಶಾʼ ಸಿನಿಮಾದ ಪ್ರಚಾರದ ವೇಳೆ ಚಿತ್ರೀಕರಿಸಲಾಗಿರುವ ವಿಡಿಯೊವೊಂದನ್ನು ಕಂಗನಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಕಿಯಾರಾ ಹಾಗೂ ಸಿದ್ಧಾರ್ಥ್ ಒಬ್ಬರಿಗೊಬ್ಬರು ನೋಡಿಕೊಂಡು ಕ್ಯಾಮೆರಾದತ್ತ ನೋಡುವುದನ್ನು ಕಾಣಬಹುದು. ಈ ವಿಡಿಯೊಗೆ ಅವರದ್ದೇ ಚಿತ್ರದ ʼರಾತಾನ್ ಲಂಬಿಯಾನ್ʼ ಹಾಡನ್ನು ಹಾಕಲಾಗಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಕಂಗನಾ “ಈ ಜೋಡಿ ಅದೆಷ್ಟು ಸಂತೋಷವಾಗಿದೆ.. ಸಿನಿಮಾ ಕ್ಷೇತ್ರದಲ್ಲಿ ನಿಜವಾದ ಪ್ರೀತಿಯನ್ನು ಅಪರೂಪವಾಗಿ ಕಾಣಬಹುದು. ಇವರಿಬ್ಬರು ಒಟ್ಟಿಗೆ ದೈವಿಕವಾಗಿ ಕಾಣುತ್ತಾರೆ” ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಆ ಜೋಡಿಗೆ ದೃಷ್ಟಿಯಾಗದಿರಲಿ ಎನ್ನುವಂತೆ ಇಮೋಜಿ ಒಂದನ್ನೂ ಹಾಕಿದ್ದಾರೆ.
ಇದನ್ನೂ ಓದಿ: Kiara – Sidharth Wedding : ಕಿಯಾರಾ – ಸಿದ್ದಾರ್ಥ್ ಮದುವೆಗೂ ಶಾರುಖ್ ಖಾನ್‌ಗೂ ಇದೆ ಸಂಬಂಧ! ಏನದು?
ಕಿಯಾರಾ ಮತ್ತು ಸಿದ್ಧಾರ್ಥ್ ಮದುವೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗರ್ ಪ್ಯಾಲೇಸ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಫೆ.4ರಿಂದಲೇ ಮದುವೆ ಕಾರ್ಯಕ್ರಮ ಆರಂಭವಾಗಲಿದ್ದು, 6ರಂದು ವಿವಾಹ ಜರುಗಲಿದೆ. ಬಾಲಿವುಡ್‌ನ ಪ್ರಸಿದ್ಧ ಮೆಹಂದಿ ಕಲಾವಿದೆ ವೀಣಾ ನಗ್ದಾ ಕೂಡ ಈಗಾಗಲೇ ರಾಜಸ್ಥಾನಕ್ಕೆ ತಲುಪಿರುವುದಾಗಿ ವರದಿಯಾಗಿದೆ.