ಬೆಂಗಳೂರು: ಇಡೀ ಬಾಲಿವುಡ್ ಚಿತ್ರರಂಗದಲ್ಲಿ ಕಂಗನಾ ರಣಾವತ್ (Kangana Ranaut) ಬಳಸುವ ವ್ಯಾನಿಟಿ ವ್ಯಾನ್ (ಕ್ಯಾರವಾನ್) ( vanity van) ಅತ್ಯಂತ ದುಬಾರಿ ಆಗಿದೆ ಎಂದು ಅವರಿಗಾಗಿ ತಯಾರಿಸಿದ ಕ್ಯಾರವಾನ್ ತಯಾರಕ ಕೇತನ್ ರಾವಲ್ ಬಹಿರಂಗಪಡಿಸಿದ್ದಾರೆ. ಕೇತನ್ ಅವರು 65 ವ್ಯಾನಿಟಿ ವ್ಯಾನ್‌ಗಳನ್ನು ಹೊಂದಿದ್ದಾರೆ, ಇದನ್ನು ವಿವಿಧ ನಟರು, ಅಂಬಾನಿ ಕುಟುಂಬ ಮತ್ತು ಮುಂಬೈ ಪೊಲೀಸರು ಬಳಸುತ್ತಾರೆ ಎಂದರು.
ʻನೇಹಾ ಧೂಪಿಯಾ ಅವರ ಶೋ ʻನೋ ಫಿಲ್ಟರ್ ವಿತ್ ನೇಹಾʼದಲ್ಲಿ (No Filter With Neha) ಕಂಗನಾ ರಣಾವತ್ ಕೆಲವು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ರಂಗೂನ್ (Rangoon) ಚಿತ್ರೀಕರಣದ ಸಮಯದಲ್ಲಿ ಅರುಣಾಚಲ ಪ್ರದೇಶದ ದೂರದ ಊರಿನಲ್ಲಿ ಯಾವುದೇ ರೂಮ್‌ಗಳಿಲ್ಲದೇ, ರೆಸ್ಟೋರೆಂಟ್‌ಗಳಿಲ್ಲಿದೆ ಇರುವಂತಹ ಪ್ರದೇಶದಲ್ಲಿ ಚಿತ್ರವನ್ನು ಚಿತ್ರೀಕರಿಸಲಾಯಿತು. ಆ ಸಮಯದಲ್ಲಿ ಶೌಚಕ್ಕೆ ಹೋಗುವುದು, ಬಟ್ಟೆಯನ್ನು ಬದಲಾಯಿಸುವುದು ಕಷ್ಟಕರವಾಗಿತ್ತು. ಶೂಟಿಂಗ್ ಸಮಯದಲ್ಲಿ ಬಂಡೆಗಳ ಹಿಂದೆ ಮೂತ್ರ ವಿಸರ್ಜಿಸಬೇಕಾಗಿತ್ತು ಎಂದು ಹೇಳಿದ್ದರು.
ಇದೀಗ ಕೇತನ್ ಮಾತನಾಡಿ, “ಕಂಗನಾ ಅವರಿಗೆ ವ್ಯಾನಿಟಿ ವ್ಯಾನ್ ಟ್ರಡಿಶನಲ್ ಲುಕ್‌ನೊಂದಿಗೆ ಇರಬೇಕೆಂದು ಬಯಸಿದ್ದರು. ವ್ಯಾನ್ ಅನ್ನು ತನ್ನ ಮನೆಯಂತೆಯೇ ವಿನ್ಯಾಸಗೊಳಿಸಬೇಕೆಂದು ಅವರು ಬಯಸಿದ್ದರು. ಅವರ ವ್ಯಾನ್‌ಗಳಲ್ಲಿ ಮರಗಳಿಂದ ಮಾಡಿದಂತಹ ಸೋಫಾ, ಕುರ್ಚಿಗಳು ಇವೆ. ಮನೆಯಲ್ಲೇ ಇರುವಂತೆ ಮಾಡುವುದು ನಮ್ಮ ಆದ್ಯತೆಯಾಗಿತ್ತು. ಅವರಿಗಾಗಿ ವ್ಯಾನ್‌ಅನ್ನು ಕಸ್ಟಮೈಸ್ ಮಾಡಲು ಸುಮಾರು 65 ಲಕ್ಷ ರೂ. ಬೇಕಾಗಿತ್ತುʼ ʼಎಂದು ಹೇಳಿದ್ದಾರೆ. ಶಾರುಖ್ ಖಾನ್ ಅವರ ವ್ಯಾನಿಟಿ ವ್ಯಾನ್ ಇನ್ನೂ ತುಂಬಾ ದೊಡ್ಡದಾಗಿದೆ ಎಂದು ಕೇತನ್ ಹೇಳಿಕೊಂಡಿದ್ದಾರೆ. ಆದರೆ ಅದು ಎಲ್ಲೆಂದರಲ್ಲಿ ಹೋಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Kangana Ranaut : ಕಿಯಾರಾ-ಸಿದ್ಧಾರ್ಥ್ ಜೋಡಿ ಬಗ್ಗೆ ಇನ್ಸ್ಟಾಗ್ರಾಂ ಸ್ಟೋರಿ ಹಾಕಿದ ಕಂಗನಾ ರಣಾವತ್
ಚಿತ್ರರಂಗದಲ್ಲಿ ವ್ಯಾನಿಟಿ ವ್ಯಾನ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿ ಪೂನಂ ಧಿಲ್ಲೋನ್ (Poonam Dhillon) ಎಂದು ವರದಿಯಾಗಿದೆ. ಆಗ ಶ್ರೀದೇವಿ, ಅನಿಲ್ ಕಪೂರ್ ಮತ್ತು ಅಮಿತಾಭ್ ಬಚ್ಚನ್ ವ್ಯಾನ್ ಅನ್ನು ಉದ್ಘಾಟಿಸಿದರು. ಪೂನಂ 2021 ರಲ್ಲಿ ಸಫಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ, ʻʻನಾನು ಮೊದಲು ನನ್ನ ಮೇಕಪ್ ವ್ಯಾನಿಟಿ ವ್ಯಾನ್ ಅನ್ನು ಪ್ರಾರಂಭಿಸಿದಾಗ ನಾನು ಚಿತ್ರರಂಗದಲ್ಲಿ ಇತಿಹಾಸವನ್ನು ಸೃಷ್ಟಿಸುತ್ತಿದ್ದೇನೆ ಎಂದು ನನಗೆ ಯಾವುದೇ ಸುಳಿವು ಇರಲಿಲ್ಲ. ಅನೇಕ ಕಲಾವಿದರು ನನ್ನನ್ನು ಅಭಿನಂದಿಸುತ್ತಾರೆ. ವ್ಯಾನಿಟಿ ವ್ಯಾನ್‌ಗಳ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ನನಗೆ ಧನ್ಯವಾದಗಳನ್ನು ಹೇಳುತ್ತಾರೆ,ʼʼಎಂದು ಬರೆದುಕೊಂಡಿದ್ದರು.