Site icon Vistara News

Kangana Ranaut: ಈ ವರ್ಷ ಬಿಡುಗಡೆಯಾಗುತ್ತಿಲ್ಲ ಕಂಗನಾ ʻಎಮರ್ಜೆನ್ಸಿʼ ಸಿನಿಮಾ; ಕಾರಣ ಕೊಟ್ಟ ನಟಿ!

Kangana Ranaut's Emergency

ಬೆಂಗಳೂರು: ಕಂಗನಾ ರಣಾವತ್ (Kangana Ranaut) ಅವರು ತಮ್ಮ ನಿರ್ದೇಶನದ ʻಎಮರ್ಜೆನ್ಸಿʼ ಸಿನಿಮಾವನ್ನು ಮುಂದೂಡುವುದಾಗಿ ಘೋಷಿಸಿದ್ದಾರೆ. ಈ ಹಿಂದೆ ಈ ವರ್ಷ ನವೆಂಬರ್ 24ರಂದು ಎಮರ್ಜೆನ್ಸಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಲಾಗಿತ್ತು. ಇದೀಗ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

ತನ್ನ ಹೊಸ ಪೋಸ್ಟ್‌ನಲ್ಲಿ ಕಂಗನಾ, “ಆತ್ಮೀಯ ಸ್ನೇಹಿತರೇ, ನಾನು ಮಾಡಬೇಕಾದ ಪ್ರಮುಖ ಘೋಷಣೆ ಇದೆ. ಎಮರ್ಜೆನ್ಸಿ ಸಿನಿಮಾ ಕಲಾವಿದನಾಗಿ ನನ್ನ ಸಂಪೂರ್ಣ ಕಲಿಕೆ ಮತ್ತು ಗಳಿಕೆಯ ಪರಾಕಾಷ್ಠೆಯಾಗಿದೆ. ಎಮರ್ಜೆನ್ಸಿ ನನಗೆ ಕೇವಲ ಚಲನಚಿತ್ರವಲ್ಲ ಅದು ನನ್ನ ಯೋಗ್ಯತೆಯ ಪರೀಕ್ಷೆಯಾಗಿದೆ. ಮತ್ತು ವ್ಯಕ್ತಿಯ ಪಾತ್ರ. ನಮ್ಮ ಟೀಸರ್ ಮತ್ತು ಇತರ ಪೋಸ್ಟ್‌ಗಳಿಗೆ ಪ್ರತಿಯೊಬ್ಬರಿಂದ ಪಡೆದ ಅದ್ಭುತ ಪ್ರತಿಕ್ರಿಯೆಯು ನಮ್ಮೆಲ್ಲರನ್ನು ಪ್ರೋತ್ಸಾಹಿಸಿದೆ. ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ನಾನು ಎಲ್ಲಿಗೆ ಹೋದರೂ ಜನರು ಎಮರ್ಜೆನ್ಸಿ ಬಿಡುಗಡೆಯ ದಿನಾಂಕದ ಬಗ್ಗೆ ನನ್ನನ್ನು ಕೇಳುತ್ತಾರೆʼʼ.

“ನಾವು 2023ರ ನವೆಂಬರ್ 24ರಂದು ʻಎಮರ್ಜೆನ್ಸಿʼ ಸಿನಿಮಾ ಬಿಡುಗಡೆ ಎಂದು ಈ ಹಿಂದೆ ಘೋಷಿಸಿದ್ದೆವು. ನನ್ನ ಬ್ಯಾಕ್ ಟು ಬ್ಯಾಕ್ ಸಿನಿಮಗಳ ಬಿಡುಗಡೆಯಾಗುತ್ತಿರುವ ಕಾರಣ ಈ ಬದಲಾವಣೆ ಮಾಡಲಾಗುತ್ತಿದೆ. 2024 ನಾವು ʻಎಮರ್ಜೆನ್ಸಿʼ ಸಿನಿಮಾವನ್ನು ರಿಲೀಸ್‌ ಮಾಡಲು ನಿರ್ಧರಿಸಿದ್ದೇವೆ. ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ನಿಮ್ಮ ನಿರೀಕ್ಷೆ, ಕುತೂಹಲ ಮತ್ತು ಚಲನಚಿತ್ರದ ಉತ್ಸಾಹವು ಬಹಳಷ್ಟು ಅರ್ಥವನ್ನು ನೀಡುತ್ತದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kangana Ranaut: ಬಿಂದಿ, ಸಿಂಧೂರ, ಮಂಗಳಸೂತ್ರ ಧರಿಸಿದ ವಿಜ್ಞಾನಿಗಳನ್ನು ಶ್ಲಾಘಿಸಿದ ಕಂಗನಾ!

ಕಂಗನಾ ರಣಾವತ್ ಅವರ ʻಎಮರ್ಜೆನ್ಸಿʼ  ಮೊದಲ ಟೀಸರ್ ಪ್ರೋಮೊವನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲಾಯಿತು. ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿತೇಶ್ ಶಾ ಕಥೆಯನ್ನು ಬರೆದಿದ್ದು, ಈ ಹಿಂದೆ ಅವರು ಕಂಗನಾ ಅವರ ಕೊನೆಯ ಚಿತ್ರ ಧಾಕಡ್ ಅನ್ನು ಸಹ ಬರೆದಿದ್ದಾರೆ. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ಗಳಿಕೆ ಕಂಡಿರಲಿಲ್ಲ. ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಡೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಲಿದ್ದಾರೆ. 

Exit mobile version