Site icon Vistara News

Kangana Ranaut : ಕಂಗನಾ ಅತಿ ಹೆಚ್ಚು ಇಷ್ಟ ಪಡುವುದು ಇವರಿಬ್ಬರನ್ನಂತೆ!

Kangana Ranaut Most favourite people

#image_title

ಮುಂಬೈ: ಬಾಲಿವುಡ್‌ ನಟಿ ಕಂಗನಾ ರಣಾವತ್‌ (Kangana Ranaut ) ಸದಾ ಸುದ್ದಿಯಲ್ಲಿರುವಂತಹ ನಟಿ. ರಾಜಕೀಯದಿಂದ ಹಿಡಿದು ಬಾಲಿವುಡ್‌ನವರೆಗೆ ಎಲ್ಲ ವಿಚಾರಗಳಲ್ಲೂ ನಟಿ ನೇರವಾದ ಮಾತುಗಳಿಂದ ಹಲವಾರು ಅಭಿಮಾನಿಗಳನ್ನು ಮತ್ತು ಹಲವು ದ್ವೇಷ ಮಾಡುವ ಜನರನ್ನೂ ಸಂಪಾದಿಸಿಕೊಂಡಿದ್ದಾರೆ. ಇದೀಗ ನಟಿ ತಮ್ಮ ಇಬ್ಬರು ಅತ್ಯಂತ ಇಷ್ಟದ ವ್ಯಕ್ತಿಗಳು ಯಾರು ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದಾರೆ. ಅಲ್ಲಿ ಅವರು ಮಂಗಳವಾರ ಬೆಳಗ್ಗೆ ಟೆಸ್ಲಾ ಸಂಸ್ಥೆಯ ಸಂಸ್ಥಾಪಕ ಎಲಾನ್‌ ಮಸ್ಕ್‌ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿಯ ನಂತರ ಮಸ್ಕ್‌ ಅವರು ಮಾತನಾಡಿದ್ದು, ತಾವೂ ಕೂಡ ಮೋದಿ ಅವರ ಫ್ಯಾನ್‌ ಎಂದು ಹೇಳಿಕೊಂಡಿದ್ದಾರೆ. “ಮೋದಿ ಅವರು ನಿಜವಾಗಿಯೂ ಭಾರತಕ್ಕೆ ಒಳ್ಳೆಯ ಕೆಲಸವನ್ನು ಮಾಡಲು ಬಯಸುತ್ತಾರೆ. ಅವರು ಮುಕ್ತವಾಗಿರಲು ಬಯಸುತ್ತಾರೆ. ಭಾರತಕ್ಕೆ ಅನುಕೂಲವಾಗುವಂತೆ ಹೊಸ ಕಂಪನಿಗಳನ್ನು ಬೆಂಬಲಿಸುತ್ತಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Pavithra Naresh: ಒಟಿಟಿಗೆ ಬರುತ್ತಿದೆ ನರೇಶ್-ಪವಿತ್ರಾ ಲೋಕೇಶ್ ‘ಮತ್ತೆ ಮದುವೆ’ ಸಿನಿಮಾ
ಮೋದಿ ಮತ್ತು ಎಲಾನ್‌ ಮಸ್ಕ್‌ ಶೇಕ್‌ ಹ್ಯಾಂಡ್‌ ಮಾಡಿರುವ ಫೋಟೋವನ್ನು ಕಂಗನಾ ಮಂಗಳವಾರ ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಎಲಾನ್‌ ಮಸ್ಕ್‌ ತಾವು ಮೋದಿ ಅಭಿಮಾನಿ ಎಂದಿರುವ ವಿಚಾರ ಬರೆದಿದ್ದಾರೆ. ಹಾಗೆಯೇ ನನ್ನ ಇಬ್ಬರು ಅತಿ ಇಷ್ಟದ ವ್ಯಕ್ತಿಗಳು ಎಂದೂ ಬರೆದುಕೊಂಡಿದ್ದಾರೆ. ಅವರ ಈ ಸ್ಟೋರಿ ಸಾಕಷ್ಟು ಚರ್ಚೆಗಳನ್ನೂ ಹುಟ್ಟುಹಾಕಿದೆ.

ಕಂಗನಾ ರಣಾವತ್‌ ಅವರು ಹಾಕಿರುವ ಪೋಸ್ಟ್.


ಕಂಗನಾ ಸದ್ಯ ‌ʼಎಮರ್ಜೆನ್ಸಿʼ ಸಿನಿಮಾದಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಈ ಸಿನಿಮಾವನ್ನು ಅವರೇ ನಿರ್ದೇಶನ ಮಾಡುತ್ತಿದ್ದಾರೆ ಕೂಡ. ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ, ಅನುಪಮ್ ಖೇರ್, ಮಹಿಮಾ ಚೌಧರಿ ಮತ್ತು ಪುಪುಲ್ ಜಯಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version