Site icon Vistara News

Iti Acharya | ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ನಲ್ಲಿ ಮಿಂಚಿದ ಕನ್ನಡತಿ ಇತಿ ಆಚಾರ್ಯ

Iti Acharya

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅಭಿನಯದ ‘ಕವಚ’ ಸಿನಿಮಾದಲ್ಲಿ ನಟಿಸಿದ್ದ ಇತಿ ಆಚಾರ್ಯ (Iti Acharya) ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ ಹೋಲ್ಡಿಂಗ್ಸ್‌ನಲ್ಲಿ ಕಾಣಿಸಿಕೊಂಡ ಮೊದಲ ಸ್ಯಾಂಡಲ್‌ವುಡ್‌ ನಟಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ನ್ಯೂಯಾರ್ಕ್‌ ಫ್ಯಾಷನ್ ವೀಕ್‌ನಲ್ಲಿ ಭಾರತ ಮೂಲದ ಫ್ಯಾಷನ್ ಡಿಸೈನರ್ ಡಿಸೈನ್ ಮಾಡಿದ ಡ್ರೆಸ್‌ಅನ್ನು ಇತಿ ಆಚಾರ್ಯ ಶೋ ಕೇಸ್ ಮಾಡಿದ್ದಾರೆ. ಇದನ್ನು ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ ತನ್ನ ಹೋಲ್ಡಿಂಗ್ಸ್‌ನಲ್ಲಿ ಹಾಕುವ ಮೂಲಕ ಮೊದಲ ಬಾರಿಗೆ ಕನ್ನಡದ ನಟಿಯನ್ನು ಗುರುತಿಸಿದೆ.

ಟೈಮ್ಸ್‌ ಸ್ಕ್ವೇರ್‌ ಬಿಲ್‌ ಬೋರ್ಡ್‌ ಅಂತಾರಾಷ್ಟ್ರೀಯ ವೇದಿಕೆಯಾಗಿದ್ದು, ಸಾಮಾನ್ಯವಾಗಿ ಬಾಲಿವುಡ್ ನಟಿಮಣಿಯರೇ ಈ ಹೋಲ್ಡಿಂಗ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕನ್ನಡದ ನಟಿ ಈ ಹೋಲ್ಡಿಂಗ್ಸ್‌ನಲ್ಲಿ ಮಿಂಚಿದ್ದು ಇದೇ ಮೊದಲು ಎನ್ನುವುದೇ ವಿಶೇಷ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ದೇಶವನ್ನು ಪ್ರತಿನಿಧಿಸಿದ್ದು ಹರುಷ ತಂದಿದೆ ಎನ್ನುತ್ತಾರೆ ಇತಿ ಆಚಾರ್ಯ.

ಇದನ್ನೂ ಓದಿ | ಇತಿ ಆಚಾರ್ಯ ಕಂಡ ಕ್ಯಾನೆಸ್‌ ಫ್ಯಾಷನ್‌ ಲೋಕ

Iti Acharya

ಈ ಬಾರಿಯ ಕ್ಯಾನೆ ಫಿಲ್ಮಂ ಫೆಸ್ಟ್ ರೆಡ್ ಕಾರ್ಪೆರ್ಟ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ಇವರು ಗಮನ ಸೆಳೆದಿದ್ದರು. ಈ ಮೂಲಕ ಇತಿ ಒಂದೇ ವರ್ಷದಲ್ಲಿ ಎರಡೆರಡು ಅಂತಾರಾಷ್ಟ್ರೀಯ ವೇದಿಕೆ ಹಂಚಿಕೊಂಡು ಸಾಧನೆ ಮಾಡಿದ್ದಾರೆ.

ನಟಿ ಹಾಗೂ ಮಾಡೆಲ್ ಆಗಿರುವ ಇತಿ ಆಚಾರ್ಯ 2016ರ ಮಿಸ್‌ ಸೌತ್‌ ಇಂಡಿಯಾ ವಿನ್ನರ್‌ ಕೂಡ ಹೌದು. ಆರ್‌ವಿಎಸ್‌ಪಿ ಪ್ರೊಡಕ್ಷನ್ ಹೌಸ್ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇದರ ಜತೆಗೆ ನಟನೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಇತಿ ನಾಯಕಿಯಾಗಿ ನಟಿಸಿರುವ ಕನ್ನಡದ ಲಕ್ಷ್ಮೀ ಪುತ್ರ ಚಿತ್ರ ಬಿಡುಗಡೆಯಾಗಬೇಕಿದೆ. ಕೇವಲ ಕನ್ನಡವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಇತಿ ಆಚಾರ್ಯ ಬ್ಯುಸಿಯಾಗಿದ್ದಾರೆ.

Iti Acharya

ಇದನ್ನೂ ಓದಿ | Stars Festive Fashion | ಟ್ರೆಡಿಷನಲ್‌ ಉಡುಗೆಯಲ್ಲಿ ಓಣಂ ಹಬ್ಬ ಆಚರಿಸಿದ ತಾರೆಯರು

Exit mobile version