ಬೆಂಗಳೂರು, ಕರ್ನಾಟಕ: 25 ದಿನಗಳ ಸಂಭ್ರಮದಲ್ಲಿರುವ ಕಬ್ಜ ಚಿತ್ರವು ಇಂದಿನಿಂದ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ಆರ್ ಚಂದ್ರು ಅವರು ತಿಳಿಸಿದ್ದಾರೆ. ಏತನ್ಮಧ್ಯೆ, ಕಬ್ಜ 2 ಚಿತ್ರವನ್ನು ಘೋಷಿಸಿರುವ ನಿರ್ದೇಶಕರು 5 ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ(Kabzaa Movie).
ಹೊಸ ಸಿನಿಮಾ ಘೋಷಣೆಗೂ ಮೊದಲು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿದ ಆರ್.ಚಂದ್ರು. ”ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ.. ಶಿವಣ್ಣ ನನ್ನನ್ನ ತಮ್ಮನ ಹಾಗೆ ನೋಡುತ್ತಾ, ಕಬ್ಜ ಚಿತ್ರಕ್ಕೆ ಸಾಥ್ ನೀಡಿದರು. ನಿರ್ಮಾಪಕನಾಗಿ ಹಾಗೂ ನಿರ್ದೇಶಕನಾಗಿ ಕಬ್ಜ ಸಿನಿಮಾ ಮಾಡಿದ್ದು ನನ್ನ ಜವಾಬ್ದಾರಿ ಹೆಚ್ಚಿದೆ,” ಎಂದು ನಿರ್ದೇಶಕ ಆರ್ ಚಂದ್ರು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಬ್ಜ ಚಿತ್ರದ ನಿರ್ದೇಶಕರು ಹೇಳಿದ್ದೇನು?
ಈ ಬಗ್ಗೆ ಚಿತ್ರದ ನಿರ್ದೇಶಕರಾಗಿರುವ ಆರ್.ಚಂದ್ರು ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ಕೊಟ್ಟಿದ್ದಾರೆ. “ಕಬ್ಜ ಸಿನಿಮಾಕ್ಕಿಂತ ಕಬ್ಜ 2 ಸಿನಿಮಾ ಅದ್ಧೂರಿಯಾಗಿರಲಿದೆ. ಇಂದಿನಿಂದಲೇ ನಾವು ಈ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೇವೆ. ಸಿನಿಮಾಕ್ಕೆ ಭಾರೀ ಪ್ರಮಾಣದ ಬಂಡವಾಳ ಹೂಡಲಿದ್ದೇವೆ. ಭಾರತೀಯ ಸಿನಿಮಾ ರಂಗದ ಖ್ಯಾತ ಕಲಾವಿದರನ್ನು ಈ ಸಿನಿಮಾದಲ್ಲಿ ಒಟ್ಟುಗೂಡಿಸಲಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
“ಸದ್ಯ ನಾನು ಸಿನಿಮಾದ ಕಥೆ ಮಾಡುವ ಕೆಲಸದಲ್ಲಿದ್ದೇನೆ. ಕಬ್ಜ 2 ಸಿನಿಮಾದಲ್ಲಿ ಕಥೆ, ಮೇಕಿಂಗ್, ತಾರಾಗಣ, ಬಜೆಟ್ ಯಾವುದಕ್ಕೂ ಕೊರತೆ ಇರುವುದಿಲ್ಲ. ಅಷ್ಟು ಶಕ್ತಿಯನ್ನು ನೀವು ಕಬ್ಜ ಸಿನಿಮಾಕ್ಕೆ ಬೆಂಬಲ ನೀಡುವ ಮೂಲಕ ನಮಗೆ ಕೊಟ್ಟಿದ್ದೀರಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Kabzaa Movie: ಕತಾರ್‌ನಲ್ಲಿ `ಕಬ್ಜ’ ಅದ್ಧೂರಿ ಪ್ರದರ್ಶನ
ಕಬ್ಜ ಸಿನಿಮಾ ಬಿಡುಗಡೆ ಆಗಿ ಎರಡು ದಿನಗಳಲ್ಲೇ ನೂರು ಕೋಟಿ ರೂ. ಕ್ಲಬ್ ಸೇರಿತ್ತು. ಹಾಗೆಯೇ ಸಿನಿಮಾ 25 ದಿನ ಸಂಪೂರ್ಣವಾಗಿರುವ ಹಿನ್ನೆಲೆ ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿಯೂ ಬಿಡುಗಡೆ ಮಾಡಲಾಗಿದೆ. ಒಟಿಟಿ ಪ್ಲಾಟ್‌ಫಾರಂನಲ್ಲೂ ಕೂಡ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.