Site icon Vistara News

Kannada Movie | ಮಾನ್ಸೂನ್‌ ರಾಗ, ಗುರು ಶಿಷ್ಯರು, ತೋತಾಪುರಿ ಒಟಿಟಿ ರಿಲೀಸ್‌ ಡೇಟ್‌ ಫಿಕ್ಸ್

Kannada Movie

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ತೆರೆ ಕಂಡ ಚಿತ್ರ ಮಾನ್ಸೂನ್‌ ರಾಗ, ಗುರು ಶಿಷ್ಯರು ಹಾಗೂ ತೋತಾಪುರಿ ಈ ಮೂರು ಸಿನಿಮಾಗಳು (Kannada Movie) ಒಟಿಟಿಗೆ ಲಗ್ಗೆ ಇಡುತ್ತಿವೆ. ಈ ಮೂರು ಚಿತ್ರಗಳ ಒಟಿಟಿ ಪ್ರಸಾರದ ಹಕ್ಕನ್ನು ಜೀ ಸಂಸ್ಥೆ ಹೊಂದಿರುವುದು ವಿಶೇಷ. ಮೊದಲಿಗೆ ಜೀ ಫೈವ್‌ ಅಪ್ಲಿಕೇಶನ್‌ನಲ್ಲಿ ಚಿತ್ರಗಳು ಸ್ಟ್ರೀಮ್‌ ಆಗಲಿದ್ದು ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿವೆ.

ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಕಾಲಿಟ್ಟ ಸಿನಿಮಾಗಳಾದ ಶರಣ್‌ ಅಭಿನಯದ ಗುರು ಶಿಷ್ಯರು, ನವರಸ ನಾಯಕ ಜಗ್ಗೇಶ್‌ ಅಭಿನಯದ ತೋತಾಪುರಿ ಮತ್ತು ಡಾಲಿ ಧನಂಜಯ್‌ ಅಭಿನಯದ ಮಾನ್ಸೂನ್‌ ರಾಗ ಜೀ ಒಟಿಟಿಗೆ ಬರುತ್ತಿವೆ.

ಗುರು ಶಿಷ್ಯರು ಸಿನಿಮಾ
ಶರಣ್‌ ಹಾಗೂ ನಿಶ್ವಿಕಾ ನಾಯ್ಡು ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಗುರು ಶಿಷ್ಯರು ಇದೇ ನವೆಂಬರ್‌ 11ರಂದು ಜೀ ಫೈವ್‌ ಅಪ್ಲಿಕೇಶನ್‌ನಲ್ಲಿ ಬರುತ್ತಿದೆ. ಈ ಕುರಿತಾಗಿ ಜೀ ಫೈ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದೆ. “ಗುರು ಶಿಷ್ಯರು” (Guru Shishyaru) ರಾಜ್ಯಾದ್ಯಂತ ಸೆ.23ರಂದು ಬಿಡುಗಡೆಗೊಂಡಿತ್ತು. ಇದು ಕ್ರೀಡಾಧಾರಿತ ಕಥೆಯನ್ನು ಹೊಂದಿದ್ದು, 200ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆಗೊಂಡಿತ್ತು.

ಇದನ್ನೂ ಓದಿ | Kannada New Film | `ಜುಗಲ್ ಬಂದಿ’ ಸಿನಿಮಾ ಮೊದಲ ಹಾಡು ಬಿಡುಗಡೆ: ಕನ್ನಡಕ್ಕೆ ಬಂದ ತಮಿಳು ಗಾಯಕಿ!

ಮಾನ್ಸೂನ್‌ ರಾಗ
ಡಾಲಿ ಧನಂಜಯ್‌ ಮತ್ತು ರಚಿತಾ ರಾಮ್‌, ಯಶಾ ಶಿವಕುಮಾರ್‌, ಅಚ್ಯುತ್‌ ಕುಮಾರ್‌ ಮತ್ತು ಸುಹಾಸಿನಿ ಅಭಿನಯದ ಮಾನ್ಸೂನ್‌ ರಾಗ ಇದೇ ನವೆಂಬರ್‌ 25ರಂದು ಜೀ ಫೈವ್‌ನಲ್ಲಿ ಪ್ರಸಾರವಾಗಲಿದೆ. ಚಿತ್ರ ನಿರೀಕ್ಷಿಸಿದ ಯಶಸ್ಸು ಕಾಣುವಲ್ಲಿ ವಿಫಲವಾದರೂ ಬಿಡುಗಡೆಗೂ ಮುನ್ನ ಒಂದಷ್ಟು ಸದ್ದು ಮಾಡಿತ್ತು.

ತೋತಾಪುರಿ ಸಿನಿಮಾ
ನವರಸ ನಾಯಕ ಜಗ್ಗೇಶ್‌ ಅಭಿನಯದ ತೋತಾಪುರಿ ಸಿನಿಮಾ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಈ ಚಿತ್ರ ಜೀ ಫೈವ್‌ ಅಪ್ಲಿಕೇಶನ್‌ನಲ್ಲಿ ಡಿಸೆಂಬರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಇದನ್ನೂ ಓದಿ | Sangliyana-2 Movie | ರಿ ರೀಲಿಸ್‌ ಆಗ್ತಾ ಇದೆ ಶಂಕರ್ ನಾಗ್‌ ಅಭಿನಯದ ಸೂಪರ್‌ ಹಿಟ್‌ ಸಿನಿಮಾ: ಯಾವುದದು?

Exit mobile version