Site icon Vistara News

Kannada New Film | ಆಫ್ಟರ್ ಆಪರೇಷನ್ ಲಂಡನ್ ಕೆಫೆ ಸಿನಿಮಾದ ಶಿವಾನಿ ಸುರ್ವೆ ಡೆಡ್ಲಿ ಲುಕ್ ರಿವೀಲ್‌!

Kannada New Film

ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಮೇಘಾ ಶೆಟ್ಟಿ ಅವರು ತ್ರಿಬಲ್ ರೈಡಿಂಗ್’,’ದಿಲ್ ಪಸಂದ್‌’ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ (Kannada New Film) ಚಿತ್ರ ಮತ್ತೆ ಸದ್ದಾಗುತ್ತಿದೆ.

ಈ ಬಾರಿ ಶಿವಾನಿ ಸುರ್ವೆಯ ಖಡಕ್ ಡೆಡ್ಲಿ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಕ್ಯಾರೆಕ್ಟರ್ ರಿವೀಲ್ ಮಾಡಲಾಗಿದೆ. ಈ ಸಿನಿಮಾವನ್ನು ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್‌ನ ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಸಿನಿಮಾವು ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ.

ಇದನ್ನೂ ಓದಿ | Kannada Film | ಕಂಬ್ಳಿಹುಳ ಮೊದಲ ಹಾಡು ಔಟ್‌: ಮೋಡಿ ಮಾಡಿತು ಯಾಕೀ ನಗು ಹಾಡು!

ಈ ಚಿತ್ರದಲ್ಲಿ ಮರಾಠಿ ಕಲಾವಿದರು ಬಣ್ಣ ಹಚ್ಚಿದ್ದಾರೆ. ವಿರಾಟ್‌ ಮಡ್ಕೆ ಕೂಡ ನಟಿಸಿದ್ದಾರೆ. ಉಡುಪಿಯ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ಮರಾಠಿಯ ದೀಪಕ್ ರಾಣೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇಂಡಿಯನ್ ಫಿಲ್ಮ್‌ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್‌ ಲಾಂಛನದಡಿಯಲ್ಲಿ ಸಿದ್ಧವಾಗುತ್ತಿರುವ ಈ ಅದ್ಧೂರಿ ಬಜೆಟ್ಟಿನ ಬಹುಭಾಷಾ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

ಇದನ್ನೂ ಓದಿ | Bigg Boss Kannada | ಮೊದಲ ದಿನವೇ ಜಶ್ವಂತ್ ಬೋಪಣ್ಣಗೆ ಸರ್ಪ್ರೈಸ್ ನೀಡಿದ ಬಿಗ್‌ ಬಾಸ್‌!

Exit mobile version