Site icon Vistara News

Kannada New Film | ಕಿರೀಟಿ ನೂತನ ಸಿನಿ ಸೆಟ್‌ಗೆ ಶಿವರಾಜ್‌ ಕುಮಾರ್‌ ಸರ್ಪ್ರೈಸ್ ವಿಸಿಟ್

Kannada New Film

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ (Kannada New Film) ಪದಾರ್ಪಣೆ ಮಾಡಿರುವ ಯುವ ನಟ, ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಈಗ ಸಿನಿಮಾದಲ್ಲಿ ಸಖತ್‌ ಬ್ಯುಸಿಯಾಗಿದಾರೆ. ಬೆಂಗಳೂರಿನ ನಾಗವಾರದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಸೆಟ್‌ಗೆ ಶಿವರಾಜ್‌ ಕುಮಾರ್‌ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ.

ಹೊಸಬರ ಚಿತ್ರಗಳಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿರುವ ಶಿವರಾಜ್‌ ಕುಮಾರ್‌ ಅವರು ಆಗಾಗ ಸೆಟ್‌ಗಳಿಗೆ ಭೇಟಿ ನೀಡಿ ಶುಭ ಹಾರೈಸುತ್ತಾ ಬಂದಿದ್ದು, ಇಲ್ಲೂ ಸಹ ಸೆಟ್‌ನಲ್ಲಿ ಬಹಳ ಹೊತ್ತು ಇದ್ದು, ಕಿರೀಟಿ ಮತ್ತು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಉಪಸ್ಥಿತರಿದ್ದರು.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮ್ಸ್‌ ಪ್ರೊಡಕ್ಷನ್‌ ಅಡಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಇನ್ನೂ ಚಿತ್ರದ ಹೆಸರನ್ನು ರಿವೀಲ್‌ ಮಾಡಿಲ್ಲ. ರಾಧಾಕೃಷ್ಣ ರೆಡ್ಡಿ ಸಾರಥ್ಯದಲ್ಲಿ ತಯಾರಾಗುತ್ತಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.

೫ ಮಿಲಿಯನ್‌ ವೀಕ್ಷಣೆ ಕಂಡ ಇಂಟ್ರಡಕ್ಷನ್‌ ಟೀಸರ್‌

ಈಗಾಗಲೇ ಕಿರೀಟಿ ಇಂಟ್ರಡಕ್ಷನ್‌ ಟೀಸರ್‌ ಬಿಡುಗಡೆಗೊಂಡಿದ್ದು, ೫ ಮಿಲಿಯನ್‌ ವೀಕ್ಷಣೆ ಕಂಡಿದೆ. ಇಲ್ಲಿ ಕಿರೀಟಿಯ ಸ್ಟೆಪ್ಸ್‌ ಹಾಗೂ ಸ್ಟಂಟ್‌ ಅನ್ನು ಮಾಸ್‌ ಆಗಿ ತೋರಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಾಲಿವುಡ್‌ ನಟಿ ಜೆನಿಲಿಯಾ ದೇಶಮುಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಈ ಹಿಂದೆ ಚಿತ್ರ ತಂಡ ಮುಹೂರ್ತದ ಪೋಟೊವನ್ನು ಹಂಚಿಕೊಂಡಿತ್ತು.

ಇದನ್ನೂ ಓದಿ | Kannada New Film | K ಕರಟಕ D ದಮನಕ; ಇದು ಶಿವಣ್ಣ-ಪ್ರಭುದೇವ-ಭಟ್ಟರ ಹೊಸ ಸಿನಿಮಾ ಜಾತಕ!

ಕಿರೀಟಿ ಹುಟ್ಟುಹಬ್ಬಕ್ಕೆ ಶೀರ್ಷಿಕೆ ಅನಾವರಣ
ಈ ಸಿನಿಮಾದ ಟೈಟಲ್ ಅನಾವರಣಕ್ಕೂ ಮುಹೂರ್ತ ಫಿಕ್ಸ್ ಆಗಿದೆ. ಸೆ. 29ಕ್ಕೆ ಕಿರೀಟಿ ಹುಟ್ಟುಹಬ್ಬವಿದೆ. ಈ ದಿನವೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್ ಕೆಲಸಗಳೂ ಸಹ ಭರದಿಂದ ನಡೆಯುತ್ತಿವೆ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಕೆ. ಸೆಂಥಿಲ್ ಕುಮಾರ್ ಛಾಯಾಗ್ರಹಣ, ರವೀಂದರ್ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ.

ಇದನ್ನೂ ಓದಿ | Kannada New Film | ಆಫ್ಟರ್ ಆಪರೇಷನ್ ಲಂಡನ್ ಕೆಫೆ ಸಿನಿಮಾದ ಶಿವಾನಿ ಸುರ್ವೆ ಡೆಡ್ಲಿ ಲುಕ್ ರಿವೀಲ್‌!

Exit mobile version