ಬೆಂಗಳೂರು: ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್‌ವುಡ್‌ಗೆ (Kannada New Film) ಎಂಟ್ರಿ ಕೊಟ್ಟ ನಟ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಯುವ ನಿರ್ದೇಶಕ ಸುನೀಲ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರಾಜವರ್ಧನ್ ಜತೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ ಈಗ ‘ಗಜರಾಮ’ನ ಜೋಡಿಯಾಗಿದ್ದಾರೆ.
ನಟಿ ತಪಸ್ವಿನಿ ಮಾತನಾಡಿ ʻʻಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಆಯ್ಕೆ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎನ್ನುವುದು ನನ್ನ ಉದ್ದೇಶ ಆಗಿರಲಿಲ್ಲ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ನನ್ನ ಒಂದು ಫೋಟೋ ನೋಡಿ ಚಿತ್ರತಂಡದವರು ನನ್ನನ್ನು ಸಂಪರ್ಕಿಸಿದರು. ನನಗೂ ಸಿನಿಮಾ ಕಥೆ ಕೇಳಿ ಇಷ್ಟ ಆಯ್ತು. ನಂತರ ಒಪ್ಪಿಕೊಂಡೆ. ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರುತ್ತಿದೆ. ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆʼʼ ಎಂದರು.
ಇದನ್ನೂ ಓದಿ | Dhamki vishwak | ಸ್ಯಾಂಡಲ್‌ವುಡ್‌ಗೆ ತೆಲುಗು ಸಿನಿಮಾ ಪ್ರತಿಭೆ: ದೀಪಾವಳಿಗೆ ‘ಧಮ್ಕಿ‘ ಫಸ್ಟ್ ಲುಕ್!
ನಿರ್ದೇಶಕ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆ್ಯಕ್ಷನ್ ಮಾಸ್ ಎಂಟರ್‌ಟೈನರ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ ಇದೆ. ಹಾಗೂ ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.
ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.
ಇದನ್ನೂ ಓದಿ | Nano Narayanappa | ಕೆಜಿಎಫ್ ಸಿನಿಮಾ ತಾತ ಈಗ ಫುಲ್ ಟೈಂ ಹೀರೋ