Site icon Vistara News

Kannada New Movie | 25ನೇ ದಿನದತ್ತ ʻಧರಣಿ ಮಂಡಲ ಮಧ್ಯದೊಳಗೆʼ ಸಿನಿಮಾ: ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ

Kannada New Movie

ಬೆಂಗಳೂರು: ಶ್ರೀಧರ್ ಶಿಕಾರಿಪುರ ನಿರ್ದೇಶನದಲ್ಲಿ ಮೂಡಿಬಂದ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಗೆ (Kannada New Movie) ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಿಸೆಂಬರ್ 2ರಂದು ಬಿಡುಗಡೆಯಾದ ಈ ಚಿತ್ರ ಇದೀಗ 25ನೇ ದಿನದತ್ತ ಹೆಜ್ಜೆ ಇಟ್ಟಿದೆ.

‘ಗುಳ್ಟು’ ಸಿನಿಮಾ ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದ ಚಿತ್ರಕಥೆ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದೆ. ʻಗುಳ್ಟುʼ ನಂತರ ಮತ್ತೊಮ್ಮೆ ನವೀನ್ ಶಂಕರ್ ತಮ್ಮ ಭರವಸೆಯ ನಟನೆಯ ಮೂಲಕ ಗಮನ ಸೆಳೆದರೆ, ಐಶಾನಿ ಶೆಟ್ಟಿ ಡಿಫರೆಂಟ್‌ ರೋಲ್‌ನಲ್ಲಿ ಮನ ಗೆದ್ದಿದ್ದಾರೆ.

ಇದನ್ನೂ ಓದಿ | Dolly Dhananjay | ಧರಣಿ ಮಂಡಲ ಮಧ್ಯದೊಳಗೆ ಸಿನಿಮಾಗೆ ಡಾಲಿ ಧನಂಜಯ, ಶ್ರುತಿ ಹರಿಹರನ್ ಮೆಚ್ಚುಗೆ!

ಚಿತ್ರದ ಪ್ರತಿ ಪಾತ್ರವರ್ಗವೂ ಅಚ್ಚುಕಟ್ಟಾದ ನಟನೆ ಮೂಲಕ ಸಿನಿಮಾ ತೂಕವನ್ನು ಹೆಚ್ಚಿಸಿದ್ದು, ಡಾಲಿ ಧನಂಜಯ್, ಶ್ರುತಿ ಹರಿಹರನ್ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕ ಪ್ರಭು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಅದರ ಫಲವಾಗಿ ಸಿನಿಮಾ 25ನೇ ದಿನದತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ.

‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರವನ್ನು ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಓಂಕಾರ್ ನಿರ್ಮಾಣ ಮಾಡಿದ್ದು. ವೀರೇಂದ್ರ ಕಾಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ | Vasishta Simha | ʻಧರಣಿ ಮಂಡಲ ಮಧ್ಯದೊಳಗೆʼ ಟ್ರೈಲರ್‌ ಔಟ್‌: ನಟ ವಸಿಷ್ಠ ಸಿಂಹ ಸಾಥ್

Exit mobile version