Site icon Vistara News

Kannada New Movie: ಆರಾಮ್ ಅರವಿಂದ್ ಸ್ವಾಮಿ ಬಳಗ ಸೇರಿದ ಬಾಬಾ ಭಾಸ್ಕರ್ ಮಾಸ್ಟರ್

aram arvind swamy Cinema latest Update

ಬೆಂಗಳೂರು: ಆರಾಮ್ ಅರವಿಂದ ಸ್ವಾಮಿ (Kannada New Movie), ಸೆಟ್ಟೇರಿದ ದಿನದಿಂದಲೂ ಬಹಳಷ್ಟು ಸದ್ದು ಮಾಡುತ್ತಿರುವ ಸಿನಿಮಾ. ಸಖತ್ ಕ್ರಿಯೇಟಿವ್ ಆಗಿರುವ ಪ್ರಮೋಷನಲ್ ವಿಡಿಯೊ ಮೂಲಕ ಗಮನಸೆಳೆಯುತ್ತಿರುವ ಈ ಸಿನಿಬಳಗಕ್ಕೀಗ ಖ್ಯಾತ ನೃತ್ಯ ಸಂಯೋಜಕ ಬಾಬಾ ಭಾಸ್ಕರ್ ಎಂಟ್ರಿ ಕೊಟ್ಟಿದ್ದಾರೆ.

ನಟ ಅನೀಶ್ ತೇಜೇಶ್ವರ್ ಹಾಗೂ ನಿರ್ದೇಶಕ ಅಭಿಷೇಕ್ ಶೆಟ್ಟಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಕ್ಯಾರೆಕ್ಟರ್ ಇಂಟ್ರೂಡಕ್ಷನ್ ಸಾಂಗ್ ಕೆಲಸ ಭರದಿಂದ ಸಾಗುತ್ತಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದು, ಅರ್ಜುನ್ ಜನ್ಯ ಸಂಗೀತ ಹಾಕಿರುವ ಈ ಹಾಡಿನಲ್ಲಿ ತಮಿಳಿನ ಖ್ಯಾತ ಕೊರಿಯೋಗ್ರಾಫರ್ ಬಾಬಾ ಭಾಸ್ಕರ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಅನೀಶ್ ನಟನೆಯ ವಾಸು ನನ್ ಪಕ್ಕ ಕಮರ್ಷಿಯಲ್ ಸಿನಿಮಾದ ಹೀರೊ ಇಂಟ್ರೂಡಕ್ಷನ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದ ಭಾಸ್ಕರ್ ಮತ್ತೊಮ್ಮೆ ಅನೀಶ್ ಸಿನಿಮಾಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾದ ಟಾಕಿ ಭಾಗದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಆ್ಯಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೂರನೇ ಸಿನಿಮಾವಿದು.

ಇದನ್ನೂ ಓದಿ: Milana Nagaraj | ‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿ

ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಸಾಗರ್ ಛಾಯಾಗ್ರಹಣ, ಉಮೇಶ್ ಸಂಕಲನ ಚಿತ್ರಕ್ಕಿದೆ.

Exit mobile version