Site icon Vistara News

Kannada New Movie: ಡೈರೆಕ್ಟರ್ ಕ್ಯಾಪ್ ತೊಟ್ಟ ʻಚುಟು ಚುಟುʼ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್!

Bhushan Master

ಬೆಂಗಳೂರು: ʻಚುಟು ಚುಟು ಅಂತೈತಿʼ, ʻಸಿಂಗಾರ ಸಿರಿಯೇʼ, ʻಕಣ್ಣು ಹೊಡಿಯಾಕʼ ಹೀಗೆ ಸಾಕಷ್ಟು ಹಾಡಿನ ಮೂಲಕ ನೃತ್ಯ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದವರು ಭೂಷಣ್ ಮಾಸ್ಟರ್. ನಟಸಾರ್ವಭೌಮ, ಬೆಲ್ ಬಾಟಂ, ರಾಬರ್ಟ್ ಸೇರಿದಂತೆ 50ಕ್ಕೂ ಅಧಿಕ ಹಾಡುಗಳಿಗೆ ಕೊರಿಯೋಗ್ರಾಫರ್ ಆಗಿ ಹೆಸರು ಗಳಿಸಿರುವ ಭೂಷಣ್, ʻರಾಜ ರಾಣಿ ರೋರರ್ ರಾಕೆಟ್ʼ ಸಿನಿಮಾ ಮೂಲಕ ಹೀರೊ (Kannada New Movie) ಆಗಿ ಭರವಸೆ ಮೂಡಿಸಿದ್ದಾರೆ.

ಈಗ ಭೂಷಣ್ ಮಾಸ್ಟರ್ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ನೃತ್ಯ‌ ನಿರ್ದೇಶನ, ನಾಯಕನಾಗಿ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಂದರೆ ಭೂಷಣ್ ಮಾಸ್ಟರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಜುಲೈ 23 ಭೂಷಣ್ ಮಾಸ್ಟರ್ ಅವರ ಜನುಮದಿನ .ಈ ದಿನದ ವಿಶೇಷವಾಗಿ ತಮ್ಮ ಮುಂದಿನ ನಡೆ ಬಗ್ಗೆ ಸಣ್ಣ ವಿಡಿಯೊ ತುಣುಕಿನ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Kannada New Movie: `ಗಿಣಿರಾಮ’ ಸೀರಿಯಲ್ ಹೀರೊ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್!

ಸಖತ್ ಫನ್ ಆಗಿ, ಕ್ರಿಯೇಟಿವ್ ಆಗಿ‌ ನಿರ್ದೇಶನದ ಅಖಾಡಕ್ಕಿಳಿಯುವ ಬಗ್ಗೆ ತಿಳಿಸಿದ್ದಾರೆ. ಆದರೆ ಸಿನಿಮಾ ಯಾವುದು? ಯಾವ ಜಾನರ್? ಹೀರೊ? ಮತ್ತಿತರ ಮಾಹಿತಿ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ಭೂಷಣ್ ಮಾಸ್ಟರ್ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ವಿಡಿಯೋ ಝಲಕ್ ಮೂಲಕ‌ ಕಿಕ್ ಕೊಟ್ಟಿರುವ ಭೂಷಣ್‌, ಶೀಘ್ರದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಸಮಾಚಾರ ಹಂಚಿಕೊಳ್ಳಲಿದ್ದಾರೆ.

Exit mobile version