Site icon Vistara News

Kannada New Movie | ʻಬಾಂಡ್‌ ರವಿʼ ಟ್ರೈಲರ್‌ ಔಟ್‌: ಸಿನಿಮಾ ರಿಲೀಸ್‌ ಯಾವಾಗ?

Kannada New Movie

ಬೆಂಗಳೂರು: ‘ರತ್ನನ್ ಪ್ರಪಂಚ’ ಖ್ಯಾತಿಯ ಪ್ರಮೋದ್ ನಾಯಕನಾಗಿ ನಟಿಸಿರುವ ‘ಬಾಂಡ್ ರವಿ’ ಸಿನಿಮಾ (Kannada New Movie ) ಡಿಸೆಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ಎಸ್.ಪಿ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಮಾಸ್ ಆಕ್ಷನ್ ಲವ್ ಸ್ಟೋರಿ ಕಥೆಯನ್ನು ಒಳಗೊಂಡ ಈ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ.

ʻʻನಮ್ಮ ಬಾಂಡ್ ರವಿ ದೊಡ್ಡ ಬ್ರ್ಯಾಂಡ್ ಆಗಿ ಎಲ್ಲರ ಮನಸ್ಸಲ್ಲೂ ಹತ್ತಾರು ವರ್ಷ ಉಳಿದುಕೊಳ್ಳುತ್ತಾನೆ. ಇಷ್ಟು ಕಾನ್ಫಿಡೆಂಟ್ ಆಗಿ ಹೇಳುತ್ತಿದ್ದೇನೆ ಅಂದರೆ ಸಿನಿಮಾದಲ್ಲಿ ಏನೋ ವಿಷಯ ಇದೆ ಎಂದರ್ಥ. ರತ್ನನ್ ಪ್ರಪಂಚ ಆದ ಮೇಲೆ ಒಂದು ಒಳ್ಳೆ ಕಥೆ ಹುಡುಕುತ್ತಿದ್ದೆ. ಸುಮ್ಮನೆ ಮಾಸ್ ಸಿನಿಮಾ ಮಾಡಲು ಆಗುವುದಿಲ್ಲ. ಮಾಸ್ ಡೈಲಾಗ್ ಹೇಳಲು ಆಗುವುದಿಲ್ಲ. ಒಳ್ಳೆ ಕಥೆ ಇರಬೇಕು. ಆ ರೀತಿ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆ ಬಾಂಡ್ ರವಿ. ಕಥೆ ಕೇಳಿದಾಗಿಂದ ಬಾಂಡ್ ರವಿ ಪಾತ್ರ ನನ್ನನ್ನು ಕಾಡಿತ್ತು. ಅಷ್ಟು ಇಷ್ಟವಾಗಿತ್ತು ಕಥೆ. ಒಳ್ಳೆ ಕಂಟೆಂಟ್, ಒಳ್ಳೆ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ಪ್ರಮೋದ್ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡ್ರು.

ಇದನ್ನೂ ಓದಿ | Kannada New Movie | ಶಿರಡಿ ಸಾಯಿಬಾಬಾ ಜೀವನ ಕಥೆ ಆಧಾರಿತ ಸಿನಿಮಾ ʻಸದ್ಗುರುʼ ಜನವರಿ 5ಕ್ಕೆ ತೆರೆಗೆ

ನಾಯಕಿ ಕಾಜಲ್ ಕುಂದರ್ ಮಾತನಾಡಿ ʻʻಮಾರ್ಚ್‌ನಲ್ಲಿ ನಿರ್ದೇಶಕರಾದ ಪ್ರಜ್ವಲ್ ಸರ್ ಭೇಟಿ ಮಾಡಿದೆ. ಅವರು ಸ್ಟೋರಿ ಹೇಳುವಾಗ ಎಷ್ಟು ಎಕ್ಸೈಟ್‌ಮೆಂಟ್‌ ಇತ್ತೋ ಈಗಲೂ ಅಷ್ಟೇ ಎಕ್ಸೈಟ್‌ಮೆಂಟ್‌ ಇದೆ. ಈ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎಲ್ಲವೂ ಇದೆ. ಚಿತ್ರಮಂದಿರದ ಒಳಗೆ ಹೋದರೆ ಒಂದು ಸೆಕೆಂಡ್ ಕೂಡ ಬೋರ್ ಆಗೋದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾ ಚಿತ್ರಕಥೆ ಹೆಣೆದಿದ್ದಾರೆ. ಟೀಸರ್, ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಡಿಸೆಂಬರ್ 9ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ ಎಲ್ಲರೂ ಸಿನಿಮಾ ನೋಡಿ ಆಶೀರ್ವದಿಸಿʼʼಎಂದರು.

ನಿರ್ದೇಶಕ ಪ್ರಜ್ವಲ್ ಎಸ್.ಪಿ ಮಾತನಾಡಿ ”‘ಬಾಂಡ್ ರವಿ’ ಕಥೆ ಇಂದು ನನ್ನನ್ನು ಪ್ರಜ್ವಲ್ ಆಗಿ ಮಾಡಿದೆ. ಎಲ್ಲರೂ ನನಗಿಂತ ನಂಬಿಕೆ ಇಟ್ಟಿದ್ದೇ ಕಥೆ ಮೇಲೆ. ಅಷ್ಟು ಡಿಫ್ರೆಂಟ್ ಆಗಿದೆ ಈ ಚಿತ್ರದ ಕಥೆ. ಪ್ರಮೋದ್ ಮೊದಲು ಕಥೆ ಕೇಳಿ ತುಂಬಾ ಇಷ್ಟ ಪಟ್ಟಿದ್ದರು. ಒಂದೊಳ್ಳೆ ಪ್ರಯತ್ನ ಮಾಡಿದ್ದೇವೆ. ತುಂಬ ಡಿಫರೆಂಟ್ ಆಗಿ ಸಿನಿಮಾ ಮಾಡಿದ್ದೇವೆ. ನನ್ನ ಕನಸಿಗೆ ಇಡೀ ತಂಡ ಸಪೋರ್ಟಿವ್ ಆಗಿ ನಿಂತುಕೊಂಡರು. ಖಂಡಿತ ನಾವೆಲ್ಲರೂ ಸಕ್ಸಸ್ ಮೀಟ್‌ನಲ್ಲಿ ಸಿಗುತ್ತೇವೆ ಎನ್ನುವ ನಂಬಿಕೆ ಇದೆʼʼ ಎಂದು ತಿಳಿಸಿದರು.

ನರಸಿಂಹಮೂರ್ತಿ.ವಿ ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ಸಿನಿಮಾಗೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣವಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್, ರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Film | ಪ್ರಮೋದ್‌ ನಟನೆಯ ಬಾಂಡ್‌ ರವಿ ಟೀಸರ್‌ ರಿಲೀಸ್‌!

Exit mobile version