Site icon Vistara News

Kannada New Movie | ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ ʻತೂತು ಮಡಿಕೆʼ ಖ್ಯಾತಿಯ ಚಂದ್ರ ಕೀರ್ತಿ

Kannada New Movie

ಬೆಂಗಳೂರು : ‘ತೂತು ಮಡಿಕೆ’ ಸಿನಿಮಾ (Kannada New Movie) ಮೂಲಕ ಗಮನ ಸೆಳೆದಿರುವ ಯುವ ನಿರ್ದೇಶಕ ಹಾಗೂ ನಟ ಚಂದ್ರ ಕೀರ್ತಿ ಮತ್ತೊಂದು ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಬಾರಿ ಲವ್ ಹಾಗೂ ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಚಂದ್ರ ಕೀರ್ತಿ.

‘ಸಿಲಿಕಾನ್ ಸಿಟಿ’, ‘ಕಿಸ್’, ‘ಮೂಕವಿಸ್ಮಿತ’, ‘ಬೆಂಕಿ’ ಸಿನಿಮಾದಲ್ಲಿ ನಟಿಸಿರುವ ಚಂದ್ರ ಕೀರ್ತಿ ಹಲವು ಕಿರುಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ʻತೂತು ಮಡಿಕೆ ಮೂಲಕʼ ನಿರ್ದೇಶಕ ಹಾಗೂ ನಟನಾಗಿ ಹೊಸ ಜರ್ನಿ ಆರಂಭಿಸಿ ಭರವಸೆ ಮೂಡಿಸಿರುವ ಚಂದ್ರ ಕೀರ್ತಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ.

ʻʻತೂತು ಮಡಿಕೆ’ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಆ ಸ್ಪೂರ್ತಿಯಿಂದಲೇ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದೇನೆ. ಈ ಚಿತ್ರದಲ್ಲಿ ನಾಯಕ ನಟನಾಗಿ ನಾನೇ ನಟಿಸುತ್ತಿದ್ದೇನೆ. ಕೊನೆಯ ಹಂತದ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಹಾಗೂ ತಂಡ ನಿರತರಾಗಿದ್ದೇವೆ. ಇದು ಲವ್ ಹಾಗೂ ಆ್ಯಕ್ಷನ್ ಸಬ್ಜೆಕ್ಟ್ ಸಿನಿಮಾ. ಹಳ್ಳಿ ಹಾಗೂ ಕಾಡಿನ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ. ಚಿತ್ರದ ನಾಯಕಿ ಹಾಗೂ ತಾರಾಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ. ಫೆಬ್ರವರಿಯಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ತೂತು ಮಡಿಕೆ ಸಿನಿಮಾ ನಿರ್ಮಾಣ ಮಾಡಿದ್ದ ಸರ್ವತಾ ಸಿನಿ ಗ್ಯಾರೇಜ್ ಮಧುಸೂಧನ್ ರಾವ್ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆʼʼ ಎಂದು ಚಂದ್ರ ಕೀರ್ತಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Kannada New Movie | ʻಜೋರ್ಡನ್‌ʼ ಟ್ರೈಲರ್‌ ಔಟ್‌: ಡಿಸೆಂಬರ್ 30ಕ್ಕೆ ಸಿನಿಮಾ ತೆರೆಗೆ

ಸ್ವಾಮಿನಾಥನ್ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದೆ. ಸ್ಕ್ರಿಪ್ಟ್ ಕೆಲಸಗಳು ಮುಗಿಯುತ್ತಿದ್ದಂತೆ ಪ್ರಿ ಪ್ರೊಡಕ್ಷನ್ ಕೆಲಸಗಳು ಆರಂಭವಾಗಲಿದ್ದು, ಟೈಟಲ್, ಸಿನಿಮಾ ತಾರಾಬಳಗ ಹಾಗೂ ತಂತ್ರಜ್ಞರ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳುವುದಾಗಿ ಚಂದ್ರ ಕೀರ್ತಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Kannada New Movie | ‘ಥಗ್ಸ್ ಆಫ್ ರಾಮಘಡ’ ಚಿತ್ರಕ್ಕೆ ಡಾಲಿ ಧನಂಜಯ ಸಾಥ್: ಪೋಸ್ಟ್‌ ವೈರಲ್‌!

Exit mobile version