ಬೆಂಗಳೂರು: ದಿಯಾ ಫೇಮ್ ಪೃಥ್ವಿ ಅಂಬಾರ್ (Kannada New Movie) ಹಾಗೂ ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಪೃಥ್ವಿ ಈಗ ʻಚೌಕಿದಾರ್ʼ ಆಗಿದ್ದಾರೆ. ಕೆಂಪು ಬಣ್ಣದ ಅಕ್ಷರದ ಮೂಲಕ ಚಿತ್ರತಂಡ ಚೌಕಿದಾರ್ ರಿವೀಲ್ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಚಂದ್ರಶೇಖರ್ ಬಂಡಿಯಪ್ಪ ಅವರ 6ನೇ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದು, ಚೌಕಿದಾರ್ ಟೈಟಲ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.
ಚೌಕಿದಾರ್ ಟೈಟಲ್ ಕೇಳಿದ ತಕ್ಷಣ ಇದು ಮಾಸ್ ಸಿನಿಮಾ ಎಂದುಕೊಳ್ಳಬೇಡಿ. ಇದು ಪಕ್ಕ ಫ್ಯಾಮಿಲಿ ಎಂಟರ್ ಟೈನರ್. ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್ ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು ಕಟ್ಟಿಕೊಟ್ಟಿರುವ ಅವರು ಚೌಕಿದಾರ್ ಸಿನಿಮಾದಲ್ಲಿ ಯಾವ ರೀತಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆಂಬನ ಕುತೂಹಲ ಪ್ರೇಕ್ಷಕರಲ್ಲಿದೆ.
ಪೃಥ್ವಿ-ಚಂದ್ರಶೇಖರ್ ಬಂಡಿಯಪ್ಪ ಸಂಗಮದ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡದ ಒಂದೊಂದಾಗಿ ಮಾಹಿತಿ ನೀಡಲಿದೆ.
ಇದನ್ನೂ ಓದಿ: V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ
ಇದನ್ನೂ ಓದಿ: Kusina Mane: ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾದ ಕೂಸಿನ ಮನೆ; ಮಕ್ಕಳ ದಾಖಲಾತಿ ಹೆಚ್ಚಳ
ಆನೆ ಪಟಾಕಿ ಮೂಲಕ ಸ್ಯಾಂಡಲ್ ವುಡ್‌ಗೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ಬಂಡಿಯಪ್ಪ ಆ ಬಳಿಕ ರಥಾವರ ಸಿನಿಮಾ ಮೂಲಕ ದೊಡ್ಡ ಹೆಸರು ಪಡೆದುಕೊಂಡರು. ಆ ಬಳಿಕ ತಾರಕಾಸುರ ಸಿನಿಮಾ ಮಾಡಿ ಗೆದ್ದರು. ಈ ಚಿತ್ರಗಳ ಸಕ್ಸೆಸ್ ಬಳಿಕ ಬಾಲಿವುಡ್ ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ರೆಡ್ ಕಾಲರ್ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ.