ಬೆಂಗಳೂರು : ಸ್ಯಾಂಡಲ್ವುಡ್ನ ಕೊರಿಯೋಗ್ರಾಫರ್ ಮಾಸ್ಟರ್ ಭೂಷಣ್ ಈಗ ಹೀರೋ ಆಗಿ ಮಿಂಚಲು ಸಿದ್ಧರಾಗಿದ್ದಾರೆ. ಕನ್ನಡದ ಯುವ (Kannada New Movie ) ಡ್ಯಾನ್ಸ್ ಮಾಸ್ಟರ್ ಭೂಷಣ್ ರಾಜಾ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಹೆಸರಾಂತ ಯುವ ಡ್ಯಾನ್ಸ್ ನಿರ್ದೇಶಕ ಭೂಷಣ್ ಚುಟು ಚುಟು ಹಾಡಿಗೆ ಈಗಲೂ ಫೇಮಸ್.
ಭೂಷಣ್ ನೃತ್ಯ ನಿರ್ದೇಶನದ ಅಪ್ಪು ಡ್ಯಾನ್ಸ್ ವಿತ್ ಅಪ್ಪು ಹಾಡೂ ಸಖತ್ ಹಿಟ್ ಆಗಿತ್ತು. 60ಕ್ಕೂ ಹೆಚ್ಚು ಸಿನಿಮಾಗಳಿಗೆ ಕೊರಿಯೋಗ್ರಾಫಿ ಮಾಡಿರುವ ಭೂಷಣ್ ಈಗ ರಾಜಾ ರಾಣಿ ರೋರರ್ ರಾಕೆಟ್ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಸಿನಿಮಾದಲ್ಲಿ ಭೂಷಣ್ ಎರಡು ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ನಾಯಕನನ್ನು ಪರಿಚಯಿಸುವ ಹಾಡು ಈಗಾಗಲೇ ರಿಲೀಸ್ ಆಗಿದ್ದು, ಇದನ್ನು ಸ್ವತಃ ಭೂಷಣ್ ಕೊರಿಯೋಗ್ರಾಫಿ ಮಾಡಿದ್ದಾರೆ.
ಇದನ್ನೂ ಓದಿ | Kannada New Movie | ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟನೆಯ ಗಜರಾಮ ಸಿನಿಮಾ ಪೋಸ್ಟರ್ ಔಟ್!
ಚಿತ್ರಕ್ಕೆ ಮಾನ್ಯಾ ನಾಯಕಿಯಾಗಿ ನಟಿಸಿದ್ದು, ಕೆಂಪೇಗೌಡ ಮಾಗಡಿ ನಿರ್ದೇಶನ ಮಾಡಿದ್ದಾರೆ. ಇದೇ ಸೆ. 23ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ರಭು ಎಸ್. ಆರ್ ಸಂಗೀತ ನಿರ್ದೇಶನ, ರವಿ ಬಸ್ರೂರ್, ಸಂಜೀತ್ ಹೆಗಡೆ, ಅನಿರುದ್ಧ ಮತ್ತು ರೇವಂತ್ ಹಾಡು ಸಿನಿಮಾಕ್ಕಿದೆ.
ಇದನ್ನೂ ಓದಿ | Gauri Lankesh | ಕವಿತಾ ಲಂಕೇಶ್ ನಿರ್ದೇಶನದ ಗೌರಿ ಸಾಕ್ಷ್ಯಚಿತ್ರಕ್ಕೆ ಬೆಸ್ಟ್ ಹ್ಯೂಮನ್ ರೈಟ್ಸ್ ಪ್ರಶಸ್ತಿ