Site icon Vistara News

Kannada New Movie | ‘ಡಾಲರ್ಸ್ ಪೇಟೆ’ಯಲ್ಲಿ ಲೂಸಿಯ ಖ್ಯಾತಿಯ ಪವನ್ ಪತ್ನಿ: ಕ್ಯಾರೆಕ್ಟರ್ ಪೋಸ್ಟರ್ ರಿವೀಲ್

Kannada New Movie

ಬೆಂಗಳೂರು : ಮೋಹನ್ ಎನ್ ಮುನಿನಾರಾಯಣಪ್ಪ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಡಾಲರ್ಸ್ ಪೇಟೆ (Kannada New Movie)’.’ಮದಗಜ’ ಚಿತ್ರ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿ ನಾರಾಯಣಪ್ಪ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಫಸ್ಟ್ ಲುಕ್ ಮೂಲಕ ಗಮನ ಸೆಳೆದಿತ್ತು. ಇದೀಗ ಚಿತ್ರದ ಕ್ಯಾರೆಕ್ಟರ್ ಪೋಸ್ಟರ್ ರಿವೀಲ್ ಮಾಡಿ ಸಿನಿರಸಿಕರಿಗೆ ಕುತೂಹಲ ಹುಟ್ಟು ಹಾಕಿದೆ.

ಹೈಪರ್ ಲಿಂಕ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದಲ್ಲಿ ʻಲೂಸಿಯʼ ಖ್ಯಾತಿಯ ನಿರ್ದೇಶಕ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ ಕ್ಯಾಶಿಯರ್ ಪಾತ್ರ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಕಲಾವಿದರ ಪೋಸ್ಟರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ | Kannada New Movie | ಒಂದು ಸಿನಿಮಾ ಕಥೆ ಹೇಳಲು ಬರ್ತಿದೆ ‘ಫಸ್ಟ್ ಡೇ ಫಸ್ಟ್ ಶೋ’

ಚಿತ್ರದಲ್ಲಿ ಸೌಮ್ಯ ಜಗನ್ ಮೂರ್ತಿ, ಆಕರ್ಷ್ ಕಮಲ, ವೆಂಕಟ್ ರಾಜು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ಪೃಥ್ವಿ ಅಂಬಾರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ಕುಶಾಲ್.ಎಸ್, ದತ್ತು, ರಾಘವೇಂದ್ರ, ಹೊನ್ನವಳ್ಳಿ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಒಳಗೊಂಡ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಕ್ಯಾಮೆರಾ ವರ್ಕ್, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಪೆಂಟ್ರಿಕ್ಸ್ ಎಂಟರ್ಟೈನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ಪೂಜಾ. ಟಿ. ವೈ ‘ಡಾಲರ್ಸ್ ಪೇಟೆ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ | Kannada New Movie | ಕನ್ನಡದ ʻದಿʼ ಸಿನಿಮಾ ಟ್ರೈಲರ್‌ ಔಟ್‌: ಮಂಡ್ಯ ರಮೇಶ್‌ ಪುತ್ರಿ ದಿಶಾ ನಾಯಕಿ!

Exit mobile version