Site icon Vistara News

Kannada New Movie | ಒಂದು ಸಿನಿಮಾ ಕಥೆ ಹೇಳಲು ಬರ್ತಿದೆ ‘ಫಸ್ಟ್ ಡೇ ಫಸ್ಟ್ ಶೋ’

Kannada New Movie

ಬೆಂಗಳೂರು : ಗಿರೀಶ್ ಜಿ. ನಿರ್ದೇಶನದಲ್ಲಿ ಮೂಡಿ ಬರುತ್ತಿರವ ‘ಫಸ್ಟ್ ಡೇ ಫಸ್ಟ್ ಶೋ’ ಚಿತ್ರದ (Kannada New Movie) ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಸುಂದರ್ ರಾಜ್ ಹಾಗೂ ಭಾ.ಮ.ಗಿರೀಶ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

‘ಒಂದ್ ಕಥೆ ಹೇಳ್ಲಾ’, ‘ವಾವ್’, ‘ಶಾಲಿವಾಹನ ಶಕೆ’ ಸಿನಿಮಾ ಮೂಲಕ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗಿರೀಶ್.ಜಿ ನಿರ್ದೇಶನದ ಚಿತ್ರವಿದು. ಕಮರ್ಷಿಯಲ್‌ ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ ಗಿರೀಶ್.ಜಿ.

ʻʻಚಿತ್ರರಂಗಕ್ಕೆ ಈ ಸಿನಿಮಾ ಒಂದು ಟ್ರಿಬ್ಯೂಟ್ ಎನ್ನಬಹುದು. ಶುಕ್ರವಾರ ಫಸ್ಟ್ ಡೇ ಫಸ್ಟ್ ಶೋ ತೆರೆ ಕಾಣುವ ಒಂದು ಸಿನಿಮಾ ಹಿಂದೆ, ಎಷ್ಟೆಲ್ಲ ಘಟನೆಗಳು ನಡೆದಿರುತ್ತದೆ ಎನ್ನುವುದನ್ನು ಒಂದಿಷ್ಟು ಎಮೋಶನಲ್ ಜರ್ನಿ ಜತೆಗೆ ಕಟ್ಟಿಕೊಡಲಾಗಿದೆ. ಬರೀ ಇದಿಷ್ಟೇ ಅಲ್ಲದೇ ಹಲವು ವಿಚಾರಗಳು ಚಿತ್ರದಲ್ಲಿದೆ. ಈಗಾಗಲೇ ಶೇ.70ರಷ್ಟು ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸಂಕ್ರಾಂತಿ ಹಬ್ಬದಂದು ಟೈಟಲ್ ಅನಾವರಣ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದೇವು. ಅದರಂತೆ ಇಂದು ಟೈಟಲ್ ಅನಾವರಣ ಆಗಿದೆ. ಈ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದೇವೆʼʼ ಎಂದು ನಿರ್ದೇಶಕ ಗಿರೀಶ್. ಜಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | Kannada New Movie | ಕನ್ನಡದ ʻದಿʼ ಸಿನಿಮಾ ಟ್ರೈಲರ್‌ ಔಟ್‌: ಮಂಡ್ಯ ರಮೇಶ್‌ ಪುತ್ರಿ ದಿಶಾ ನಾಯಕಿ!

‘ಫಸ್ಟ್ ಡೇ ಫಸ್ಟ್ ಶೋ’ ಮೂಲಕ ಬಾಲನಟನಾಗಿ ಖ್ಯಾತಿ ಗಳಿಸಿದ್ದ ರೋಹಿತ್ ಶ್ರೀನಾಥ್ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ್ದು, ಅನಿರುದ್ಧ್‌ ಶಾಸ್ತ್ರಿ, ಬಿಎಂ ವೆಂಕಟೇಶ್, ಹರೀಶ್ ಅರಸು ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.

ಬೆಂಗಳೂರು, ಚೆನ್ನೈನಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಾನಿಕ ಮೂವೀಸ್ ಬ್ಯಾನರ್ ನಡಿ ಊರ್ಮಿಳಾ ಕಿರಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹರಿ ಅಜಯ್ ಮತ್ತು ಕಾರ್ತಿಕ್ ಭೂಪತಿ ಸಂಗೀತ ನಿರ್ದೇಶನ, ರಾಕೇಶ್ ಸಿ. ತಿಲಕ್ ಮತ್ತು ಅರುಣ್ ಕುಮಾರ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | ‘ದಿ’ ಸಿನಿಮಾ ಶೀರ್ಷಿಕೆ ರಿವೀಲ್ ಮಾಡಿದ ಸಿಂಪಲ್ ಸುನಿ!

Exit mobile version