Site icon Vistara News

Kannada New Movie | ಫ್ಲ್ಯಾಟ್ #9 ಸಿನಿಮಾ ಟ್ರೈಲರ್‌ ಔಟ್‌: ಡಿಸೆಂಬರ್‌ 2ಕ್ಕೆ ತೆರೆಗೆ

Kannada New Movie

ಬೆಂಗಳೂರು : ಕಿಶೋರ್ ನಿರ್ದೇಶನದ ಮರ್ಡರ್ ಮಿಸ್ಟ್ರಿ ಕಥಾಹಂದರ ಒಳಗೊಂಡ ಫ್ಲ್ಯಾಟ್ #9 ಚಿತ್ರದ (Kannada New Movie) ಟ್ರೈಲರ್‌ ಬಿಡುಗಡೆಯಾಗಿದೆ. ‘ರಾಧಾ ರಮಣ’ ಖ್ಯಾತಿಯ ಸ್ಕಂದ ಅಶೋಕ್, ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಚಂದು ಗೌಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ‘ಇಂಗ್ಲೀಷ್ ಮಂಜ’ ಖ್ಯಾತಿಯ ತೇಜಸ್ವಿನಿ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.

ಚಂದು ಗೌಡ ಮಾತನಾಡಿ ʻʻಚಿತ್ರದಲ್ಲಿ ಸೈಕಿಯಾಟ್ರಿಸ್ಟ್ ಪಾತ್ರವನ್ನು ನಿರ್ವಹಿಸಿದ್ದೇನೆ. ನನಗೆ ಈ ಪಾತ್ರ ತುಂಬಾ ಡಿಫ್ರೆಂಟ್ ಎಂದು ಅನ್ನಿಸಿತು. ಜತೆಗೆ ಸ್ಕಂದ ಅಶೋಕ್ ನನ್ನ ಅದ್ಭುತ ಗೆಳೆಯ ಆತನಿಗಾಗಿ ಒಪ್ಪಿಕೊಂಡೆ ಎಂದೇ ಹೇಳಬಹುದು. ಸಿನಿಮಾ ಚಿತ್ರೀಕರಣ ಒಂದೊಳ್ಳೆ ಅನುಭವವನ್ನು ನೀಡಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆʼʼ ಎಂದು ಹೇಳಿದರು.

ನಿರ್ದೇಶಕ ಕಿಶೋರ್ ಮಾತನಾಡಿ ʻʻನನ್ನ ಮೊದಲ ಸಿನಿಮಾವಿದು. ಕ್ರೈಂ ಬೇಸ್ಡ್ ಸಿನಿಮಾ ಕಥೆಯಿದು. ಹೊಸಬನಾದರು ನಾನು ಮಾಡಿಕೊಂಡ ಕಥೆ ಕೇಳಿ ನಂಬಿಕೆಯಿಟ್ಟು ನನ್ನ ಜತೆ ಸಿನಿಮಾ ಮಾಡಲು ಸ್ಕಂದ ಅಶೋಕ್ ಹಾಗೂ ಚಂದು ಗೌಡ ಹಾಗೂ ತೇಜಸ್ವಿನಿ ಶರ್ಮಾ ಒಪ್ಪಿಕೊಂಡರು. ಇಡೀ ಚಿತ್ರತಂಡ ಸಪೋರ್ಟ್ ಮಾಡಿದೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕುʼʼ ಎಂದು ತಿಳಿಸಿದರು.

ಇದನ್ನೂ ಓದಿ | Kannada New Movie | ಸೆಟ್ಟೇರಲು ಸಜ್ಜಾಗಿದೆ ಡಾಲಿ ಪಿಕ್ಚರ್ಸ್ ನಿರ್ಮಾಣದ ʻಟಗರು ಪಲ್ಯʼ

ಸ್ಕಂದ ಅಶೋಕ್ ಮಾತನಾಡಿ ʻʻಕಿಶೋರ್ ತುಂಬ ಎಫರ್ಟ್ ಹಾಕಿ ಈ ಸಿನಿಮಾ ಮಾಡಿದ್ದಾರೆ. ಒಂದೊಳ್ಳೆ ಕಂಫರ್ಟ್ ಝೋನ್‌ನಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದೇವೆ. ಚಿತ್ರದಲ್ಲಿ ಇನ್ವೇಸ್ಟಿಗೇಷನ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ ಸಹಕಾರ ಈ ಸಿನಿಮಾ ಮೇಲಿರಲಿ ಎಂದು ಮಾಹಿತಿʼʼ ಹಂಚಿಕೊಂಡರು.

ಡಿಸೆಂಬರ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಕಿಶೋರ್ ಕ್ರಿಯೇಷನ್ಸ್ ಬ್ಯಾನರ್ ನಡಿ ಕಿಶೋರ್, ಸಂತೋಷ್ ಕುಮಾರ್, ಸಂತೋಷ್ ಜಿ ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ದಿನೇಶ್ ಕುಮಾರ್ ಸಂಗೀತ ನಿರ್ದೇಶನ, ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ವಿಕ್ರಮ್ ಮೋರ್ ಸಾಹಸ ನಿರ್ದೇಶನ, ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ. ಉಗ್ರಂ ಶರತ್, ಗಣೇಶ್ ರಾವ್ ಒಳಗೊಂಡ ತಾರಾಗಣವಿದೆ.

ಇದನ್ನೂ ಓದಿ | Kannada New Movie | ʻಸದ್ದು ವಿಚಾರಣೆ ನಡೆಯುತ್ತಿದೆʼ ಚಿತ್ರ ನವೆಂಬರ್‌ 25ರಂದು ತೆರೆಗೆ

Exit mobile version