Site icon Vistara News

Kannada New Movie: 50 ದಿನದ ಭಾವನಾತ್ಮಕ ಪಯಣ, ಒಟಿಟಿಯಲ್ಲಿ ‘ಹೊಂದಿಸಿ ಬರೆಯಿರಿ’ ಸಿನಿಮಾ

Kannada New Movie Hondisi bareyiri OTT kannada

ಬೆಂಗಳೂರು: ರಾಮೇನಹಳ್ಳಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬಂದಿರುವ ʻಹೊಂದಿಸಿ ಬರೆಯಿರಿʼ ಸಿನಿಮಾ (Kannada New Movie) ಹಾಫ್ ಸೆಂಚೂರಿ ಬಾರಿಸಿದೆ. ಫೆಬ್ರವರಿ 10ರಂದು ಬಿಡುಗಡೆಯಾದ ಈ ಚಿತ್ರ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಶೋ ಹೆಚ್ಚಿಸಿಕೊಂಡು ಹೌಸ್ ಫುಲ್ ಪ್ರದರ್ಶನ ಕಂಡಿರುವ ಸಿನಿಮಾ ಯಶಸ್ವಿಯಾಗಿ 50ದಿನ ಪೂರೈಸಿದೆ.

ಭಾವನೆಗಳ ಏರಿಳಿತ, ಕಾಲೇಜು ವಿದ್ಯಾರ್ಥಿಗಳ ಮಜವಾದ ಪಯಣ, ಪ್ರೀತಿ ಪ್ರೇಮ, ತುಂಟಾಟ ಮೂಲಕ ಜಾಲಿಯಾಗಿ ಸಾಗುವ ಹೊಂದಿಸಿ ಬರೆಯಿರಿ ಸಿನಿಮಾ ಥಿಯೇಟರ್‌ನಲ್ಲಿ ಅದ್ಭುತ ಪ್ರದರ್ಶನ ಕಂಡು ಈಗ ಒಟಿಟಿಗೆ ಲಗ್ಗೆ ಇಟ್ಟಿದೆ. ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ಪ್ರಸಾರವಾಗಿದೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ಮುಖ್ಯ ಭೂಮಿಕೆ ಈ ಚಿತ್ರದಲ್ಲಿದೆ.

ಇದನ್ನೂ ಓದಿ: Kannada New Movie: ‘ಹೊಂದಿಸಿ ಬರೆಯಿರಿ’ ಟ್ರೈಲರ್‌ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಶಾಂತಿ ಸಾಗರ್ ಎಚ್.ಜಿ ಕ್ಯಾಮೆರಾ ನಿರ್ದೇಶನ, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಸಂಡೇ ಸಿನಿಮಾಸ್’ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ಸೇರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Exit mobile version