Site icon Vistara News

Kannada New Movie | ʻಜೋರ್ಡನ್‌ʼ ಟ್ರೈಲರ್‌ ಔಟ್‌: ಡಿಸೆಂಬರ್ 30ಕ್ಕೆ ಸಿನಿಮಾ ತೆರೆಗೆ

Kannada New Movie (jordan)

ಬೆಂಗಳೂರು: ವಿನೋದ್ ದಯಾಳನ್ ನಿರ್ದೇಶನದ ‘ಜೋರ್ಡನ್‌’ ಸಿನಿಮಾ (Kannada New Movie) ಟ್ರೈಲರ್‌ ಬಿಡುಗಡೆಯಾಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಹೇಂದ್ರ ಪ್ರಸಾದ್, ಕವಲು ದಾರಿ ಖ್ಯಾತಿಯ ಸಂಪತ್ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಡಿಸೆಂಬರ್ 30ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟ್ರೈಲರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ವಿನೋದ್ ದಯಾಳನ್ ಮಾತನಾಡಿ ʻʻಅಮೆರಿಕನ್ ಬಾಸ್ಕೆಟ್‌ಬಾಲ್ ಆಟಗಾರ ಮೈಕಲ್ ಜೋರ್ಡನ್ ಹೇಳಿರುವ ‘ವೈಫಲ್ಯವನ್ನು ನಾನು ಒಪ್ಪಿಕೊಳ್ಳುತ್ತೇನೆ, ಪ್ರತಿಯೊಬ್ಬರೂ ಯಾವುದಾದರೂ ವಿಷಯದಲ್ಲಿ ವಿಫಲರಾಗುತ್ತಾರೆ. ಆದರೆ ಪ್ರಯತ್ನ ಪಡದೇ ವೈಫಲ್ಯವನ್ನು ನಾನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಕಥೆಯನ್ನು ಹೆಣೆಯಲಾಗಿದೆ. ಇದು ಕೌಟುಂಬಿಕ ಕಥಾಹಂದರ ಒಳಗೊಂಡ ಸ್ಫೂರ್ತಿದಾಯಕ ಸಿನಿಮಾವಾಗಿದೆ. ಕಥೆಯೇ ಈ ಚಿತ್ರದ ಹೀರೊ. ಕಾಮಿಡಿ ಕಿಲಾಡಿ ಖ್ಯಾತಿಯ ಮಹೇಂದ್ರ ಪ್ರಸಾದ್‌ ಹಾಗೂ ಸಂಪತ್ ಮೈತ್ರೇಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಹಿಂದೆ ಕಿರು ಚಿತ್ರಗಳನ್ನು ನಿರ್ದೇಶನ ಮಾಡಿಕೊಂಡಿದ್ದೆ. ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕಟೆಂಟ್‌ಗೆ ಏನು ಬೇಕು ಅದನ್ನು ಮಾಡಿದ್ದೇವೆ. ಔಟ್ ಪುಟ್ ಚೆನ್ನಾಗಿ ಮೂಡಿ ಬಂದಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ | Kannada New Movie | ಸೆಟ್ಟೇರಿತು ʻಜಸ್ಟ್‌ ಪಾಸ್‌ʻ ಸಿನಿಮಾ: ಜನವರಿ 2ರಿಂದ ಚಿತ್ರೀಕರಣ!

ಮಹೇಂದ್ರ ಪ್ರಸಾದ್ ಮಾತನಾಡಿ ʻʻನಾನು ಚಿತ್ರದಲ್ಲಿ ಮೈಕೆಲ್ ಪಾತ್ರವನ್ನು ಮಾಡಿದ್ದೇನೆ. ತಂದೆ – ಮಗನ ಬಾಂಧವ್ಯ ಚಿತ್ರದಲ್ಲಿದೆ. ಇದು ನಾನು ನಟಿಸಿದ ಮೊದಲ ಸಿನಿಮಾ. ಈ ಸಿನಿಮಾ ಮುಗಿಯುವವರೆಗೆ ಯಾವ ಚಿತ್ರವನ್ನೂ ನಾನು ಒಪ್ಪಿಕೊಂಡಿಲ್ಲ. ಆ ಪಾತ್ರದಲ್ಲೇ ತಲ್ಲೀನನಾಗಿದ್ದೆ. ನಿರ್ದೇಶಕರು ನನ್ನ ಪಾತ್ರದ ಬಗ್ಗೆ ತಿಳಿಸಿಕೊಟ್ಟು ನನ್ನಿಂದ ಅಭಿನಯ ಮಾಡಿಸಿದ್ದಾರೆ. ಡಿಸೆಂಬರ್ 30ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ಮೊದಲ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

ಸೀತಾರ, ಸುನೀಲ್, ಯೋಗೇಶ್ ಶಂಕರ್ ನಾರಾಯಣನ್, ಗಣೇಶ್ ಜೈ ಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ನೋ ನಾನ್ಸೆನ್ಸ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಜೆ. ಜಾನಕಿರಾಮ್, ಎನ್ ಆರ್.ಪಾಟೀಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೈಕುಮಾರ್ ಜೆ ಸ್ಟಾಲಿನ್ ಛಾಯಾಗ್ರಹಣ, ಸಾಯಿ ಸರ್ವೇಶ್ ಸಂಗೀತ ನಿರ್ದೇಶನ ಹಾಗೂ ಸಾಹಿತ್ಯ, ನಿರಂಜನ್ ದೇವರಮನೆ ಸಂಕಲನ ಜೋರ್ಡನ್ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | ʻಸೀತಾ ಸರ್ಕಲ್‌ ಶ್ರೀ ಕೃಷ್ಣನ್‌ ಮನೆʼ ಪೋಸ್ಟರ್‌ ಔಟ್‌!

Exit mobile version