Site icon Vistara News

Kannada New Movie: ಜ್ಯೂನಿಯರ್‌​ ದರ್ಶನ್​ ನಟನೆಯ ಸಿನಿಮಾ ಟೈಟಲ್‌ ರಿವೀಲ್‌!

Danda Theertha title kannada New movie

ಬೆಂಗಳೂರು: ಹೊಸ ಪ್ರತಿಭೆಗಳ ಜತೆಗೆ (Kannada New Movie) ವಿಭಿನ್ನ ಶೀರ್ಷಿಕೆಯ ಸಿನಿಮಾ ನೀಡಿದ್ದಾರೆ ನಿರ್ದೇಶನ ಹರಿಪ್ರಾಣ. ’ದಂಡತೀರ್ಥ’ ಚಿತ್ರಕ್ಕೆ ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಹರಿಪ್ರಾಣ ಅವರು ’ಪ್ರಾಣ ಪ್ರೊಡಕ್ಷನ್’ ಸಂಸ್ಥೆಯಡಿ ಸಿನಿಮಾ ಮಾಡಿದ್ದಾರೆ. ಪಝಲ್ ರೀತಿಯಲ್ಲಿ ಈ ಚಿತ್ರದ ಕಲಾವಿದರು ಎಲ್ಲವನ್ನೂ ಜೋಡಿಸಿದಾಗ ‘ಪವರ್ ಸ್ಟಾರ್’ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ ಭಾವಚಿತ್ರ ಮೂಡಿಬಂತು. ಬಳಿಕ ಅದನ್ನು ತಿರುಗಿಸಿ ನೋಡಿದಾಗ ‘ದಂಡತೀರ್ಥ’ ಸಿನಿಮಾದ ಟೈಟಲ್​ ಅನಾವರಣ ಆಯಿತು. ಈ ರೀತಿ ಟೈಟಲ್‌ ಅನಾವರಣ ಮಾಡಿದ್ದಾರೆ.

ಹರಿಪ್ರಾಣ ಅವರು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ಶ್ರಮಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ. ಹರಿಪ್ರಾಣ ಈ ಬಗ್ಗೆ ಮಾತನಾಡಿ ʻʻದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೊಂದು ಹೆಸರು ಇದೇ ಆಗಿರುತ್ತದೆ. ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ. ಮಾಧ್ಯಮದವರು ಸ್ಟಿಂಗ್ ಆಪರೇಶನ್ ನಡೆಸುವಂತೆ, ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇರುತ್ತದೆ. ನಾಲ್ಕು ಹಾಸ್ಯ ನಟರಿಗೆ ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣವನ್ನು ನೂತನ ವರ್ಷದಿಂದ ಹೊಸತನದಲ್ಲಿ ನಡೆಸಲು ಯೋಜನೆ ಹಾಕಲಾಗಿದೆʼʼಎಂದರು.

ಇದನ್ನೂ ಓದಿ: Kannada New Movie: ಕನ್ನಡದಲ್ಲಿಯೇ ಬರೆದುಕೊಂಡು ಹಾಡಿದ ʻಬಾಹುಬಲಿʼ ಸಂಗೀತ ನಿರ್ದೇಶಕ!

’ಪ್ರಾಣ ಎಂಟರ್ಟೈನ್ಮೆಂಟ್’ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು ಎಂದು ಮಾಹಿತಿ ಹಂಚಿಕೊಂಡರು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಪಾರಸ್ಸು ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಿದರು.

ಅವಿನಾಶ್(ಜ್ಯೂ.ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವುಸಕಲೇಶಪುರ, ಪುನೀತ್‌, ಶರಣ್‌, ಬೇಬಿ ಶಾನ್ವಿ ಮಾನಸಗೌಡ, ಪೂಜರಾಮಚಂದ್ರ ತಾರಾಗಣವಿದೆ. ಜಿ.ರಂಗಸ್ವಾಮಿ ಛಾಯಾಗ್ರಹಣವಿದೆ.

Exit mobile version