Site icon Vistara News

Kannada New Movie | ಸೆಟ್ಟೇರಿತು ʻಜಸ್ಟ್‌ ಪಾಸ್‌ʻ ಸಿನಿಮಾ: ಜನವರಿ 2ರಿಂದ ಚಿತ್ರೀಕರಣ!

Kannada New Movie

ಬೆಂಗಳೂರು : ʻತರ್ಲೆ ವಿಲೇಜ್’, ‘ಪರಸಂಗ’, ‘ದೊಡ್ಡಹಟ್ಟಿ ಬೋರೇಗೌಡ’ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ನಟ ಶ್ರೀ ಜತೆ ‘ಜಸ್ಟ್ ಪಾಸ್’ (Kannada New Movie ) ಕಥೆ ಹೇಳಲು ಸಜ್ಜಾಗಿದ್ದಾರೆ. ಕಾಲೇಜ್ ಯೂತ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮುಹೂರ್ತ ಗುರುವಾರ ಡಿಸೆಂಬರ್‌ 15ರಂದು ನೆರವೇರಿದೆ.

ನಿರ್ದೇಶಕ ಕೆ.ಎಂ.ರಘು ಮಾತನಾಡಿ ‘ಜಸ್ಟ್ ಪಾಸ್’ ಕಾಲೇಜ್ ಬ್ಯಾಕ್ ಡ್ರಾಪ್‌ನಲ್ಲಿ ನಡಿಯಲಿರುವ ಸಿನಿಮಾ. ಈಗಾಗಲೇ ಕಾಲೇಜ್ ಸಬ್ಜೆಕ್ಟ್ ಇರುವ ಹಲವಾರು ಸಿನಿಮಾಗಳು ಬಂದಿವೆ. ನಾವೇನು ಹೊಸತು ಹೇಳುತ್ತೇವೆ ಅನ್ನೋದು ಮುಖ್ಯ. ಒಂದೇ ಲೈನ್‌ನಲ್ಲಿ ಸಿನಿಮಾ ಬಗ್ಗೆ ಹೇಳಬೇಕು ಅಂದರೆ ಈ ಚಿತ್ರದಲ್ಲಿ ಜಸ್ಟ್ ಪಾಸ್ ಆದವರಿಗಾಗಿಯೇ ಕಾಲೇಜ್ ತೆರೆಯಲಾಗಿರುತ್ತದೆ. ಅವರಿಗಾಗಿಯೇ ಹಾಸ್ಟೆಲ್ ವ್ಯವಸ್ಥೆ ಕೂಡ ಇರುತ್ತದೆ. ಜಸ್ಟ್ ಪಾಸ್ ಆದವರ ಮೆಂಟಾಲಿಟಿ ಬೇರೆ ಇರುತ್ತೆ. ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿರುತ್ತಾರೆ. ತುಂಬಾ ತರ್ಲೆ ಇರುತ್ತಾರೆ. ಅವರನ್ನು ಇಟ್ಟುಕೊಂಡು ಯಾವ ರೀತಿ ಎಜುಕೇಶನ್ ನೀಡಲಾಗುತ್ತೆ ಎನ್ನುವುದನ್ನು ಕಾಮಿಡಿ, ಸೆಂಟಿಮೆಂಟ್ ಎಲಿಮೆಂಟ್ ಜತೆಗೆ ಕಟ್ಟಿಕೊಡಲಾಗಿದೆ. ಕಾಲೇಜ್ ಸಬ್ಜೆಕ್ಟ್ ಎಂದಾಕ್ಷಣ ಎಷ್ಟು ಎಂಟರ್ಟೈನ್ಮೆಂಟ್ ಇರುತ್ತದೆಯೋ ಅಷ್ಟೇ ಒಳ್ಳೆ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಮೈಸೂರು, ಸಕಲೇಶಪುರ, ಮಡಿಕೇರಿಯಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆʼʼ ಎಂದು ನಿರ್ದೇಶಕ ಕೆ.ಎಂ.ರಘು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ | Kannada New Movie | ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ `ಜಸ್ಟ್‌ ಪಾಸ್‌ʼ ಸಿನಿಮಾ: ನಾಯಕಿ ರಿವೀಲ್‌!

ನಾಯಕ ನಟ ಶ್ರೀ ಮಾತನಾಡಿ ʻʻನಿರ್ದೇಶಕರು ಸಿನಿಮಾ ಕಾನ್ಸೆಪ್ಟ್ ಬಗ್ಗೆ ಹೇಳಿದಾಗ ಇಂಟ್ರಸ್ಟಿಂಗ್ ಅನ್ನಿಸಿತು. ಚಿತ್ರದಲ್ಲಿ ‘ಜಸ್ಟ್ ಪಾಸ್’ ಆದವರಿಗಾಗಿಯೇ ಒಂದು ಕಾಲೇಜ್ ತೆರೆಯಲಾಗಿರುತ್ತದೆ. ಪ್ರಿನ್ಸಿಪಾಲ್ ಜಸ್ಟ್ ಪಾಸ್ ಆದವರಿಗಾಗಿ ಯಾಕೆ ಕಾಲೇಜ್ ತೆರೆದಿರುತ್ತಾರೆ. ಹೇಗೆ ಎಜುಕೇಶನ್ ನೀಡುತ್ತಾರೆ ಎನ್ನುವ ಸ್ಟೋರಿ ಚಿತ್ರದಲ್ಲಿದೆ. ಚಿತ್ರದಲ್ಲಿ ಅರ್ಜುನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಾಯಕ ನಟನಾಗಿ ಇದು ನನ್ನ ನಾಲ್ಕನೇ ಸಿನಿಮಾ. ಬಹಳ ತರ್ಲೆ, ಚೇಷ್ಟೆ ಮಾಡುವಂತ ಕ್ಯಾರೆಕ್ಟರ್ ನನ್ನದು. ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನ ಆಗಿರುವ ಪಾತ್ರ. ಜಸ್ಟ್ ಪಾಸ್ ಸಿನಿಮಾ ಫಸ್ಟ್ ಕ್ಲಾಸ್ ಆಗಿ ಮಾಡಲು ಎಲ್ಲರೂ ತಯಾರಾಗಿದ್ದೇವೆ. ಎಲ್ಲರ ಆಶೀರ್ವಾದ ಬೇಕುʼʼ ಎಂದು ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

ನಾಯಕ ನಟಿ ಪ್ರಣತಿ ಮಾತನಾಡಿ ʻʻಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿ ಪಾತ್ರವನ್ನು ನಿರ್ವಹಿಸಿದ್ದೇನೆ. ನಟನೆಗೆ ನಾನು ಆಕಸ್ಮಿಕವಾಗಿ ಬಂದಿದ್ದು. ಶೃತಿ ನಾಯ್ಡು ಮೇಡಂ ನನ್ನ ಫೋಟೋ ನೋಡಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದ್ದರು. ಅಲ್ಲಿಂದ ನನ್ನ ಜರ್ನಿ ಆರಂಭವಾಯ್ತು. ಕಿರುತೆರೆಯಾದ ನಂತರ ಬೆಳ್ಳಿತೆರೆಗೆ ಮೊದಲ ಹೆಜ್ಜೆ ಇಟ್ಟಿದ್ದೇನೆ. ಇದು ನನ್ನ ಮೊದಲ ಸಿನಿಮಾʼʼಎಂದರು.

‘ಜಸ್ಟ್ ಪಾಸ್’ ಸಿನಿಮಾವನ್ನು ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಶಶಿಧರ್.ಕೆ.ವಿ, ಶ್ರೀಧರ್ ಕೆ.ವಿ ನಿರ್ಮಾಣ ಮಾಡುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಸುಚೇಂದ್ರ ಪ್ರಸಾದ್, ನವೀನ್ ಡಿ ಪಡಿಕ್ಕಲ್, ಪ್ರಕಾಶ್ ತುಮಿನಾಡ್, ದೀಪಕ್ ರೈ, ಅರ್ಪಿತಾ, ಬಿಂದು ಶ್ರೀ, ಯಶಿಕಾ, ವಿಶ್ವಾಸ್, ನಿಖಿಲ್, ಗಗನ್, ಅಭಿ ಚಿತ್ರದ ತಾರಾಬಳಗದಲ್ಲಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಹರ್ಷವರ್ಧನ್ ರಾಜ್ ಸಂಗೀತ, ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಾಹಣ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | ʻಸೀತಾ ಸರ್ಕಲ್‌ ಶ್ರೀ ಕೃಷ್ಣನ್‌ ಮನೆʼ ಪೋಸ್ಟರ್‌ ಔಟ್‌!

Exit mobile version