Site icon Vistara News

Kannada New Movie: ಮಾಲಾಶ್ರೀ-ಭೂಮಿ ಶೆಟ್ಟಿ ಅಭಿನಯದ ಕಾದಂಬರಿ ಆಧಾರಿತ ‘ಕೆಂಡದ ಸೆರಗು’ ಸಿನಿಮಾ ಟೀಸರ್ ರಿಲೀಸ್

Kannada New Movie Kendada seragu teaser Out

ಬೆಂಗಳೂರು : ರಾಕಿ ಸೋಮ್ಲಿ ಚೊಚ್ಚಲ ನಿರ್ದೇಶನದಲ್ಲಿ ಭೂಮಿ ಶೆಟ್ಟಿ ಮುಖ್ಯ ಭೂಮಿಕೆಯ ಹಾಗೂ ಕನಸಿನ ರಾಣಿ ಮಾಲಾಶ್ರೀ ನಟಿಸಿರುವ ‘ಕೆಂಡದ ಸೆರಗು’ ಸಿನಿಮಾದ (Kannada New Movie ) ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರ ನಿರ್ದೇಶಕ ರಾಕಿ ಸೋಮ್ಲಿ ಬರೆದ ‘ಕೆಂಡದ ಸೆರಗು’ (Kendada Seragu) ಕಾದಂಬರಿ ಆಧಾರಿತ ಸಿನಿಮಾ. ಕುಸ್ತಿ ಸುತ್ತ ಹೆಣೆಯಲಾದ ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್ ಕಮಿಷನರ್ ಪಾತ್ರದಲ್ಲಿ ನಟಿಸಿದ್ದು, ಭೂಮಿ ಶೆಟ್ಟಿ ಕುಸ್ತಿ ಪಟುವಾಗಿ ಬಣ್ಣಹಚ್ಚಿದ್ದಾರೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ನಟಿ ಮಾಲಾಶ್ರೀ (malashree) ಮಾತನಾಡಿ ʻʻನಾನು ಪೋಲೀಸ್ ಪಾತ್ರ ತುಂಬಾ ಮಾಡಿದ್ದೇ. ಆದರೆ ಇಲ್ಲಿವರೆಗೆ ಮಾಡಿರುವ ಪಾತ್ರಕ್ಕಿಂತ ಡಿಫ್ರೆಂಟ್ ಫೀಲ್ ಈ ಪಾತ್ರ ನೀಡಿದೆ. ಈ ಚಿತ್ರ ಕೇವಲ ಕುಸ್ತಿ ಬಗ್ಗೆ ಅಂತಲ್ಲ ಹೆಣ್ಣುಮಗಳೊಬ್ಬಳ ನೋವಿನ ಕಥೆ ಚಿತ್ರದಲ್ಲಿದೆ. ಒಳ್ಳೆಯ ಮೆಸೇಜ್ ಚಿತ್ರದಲ್ಲಿದೆ. ಈ ಸಿನಿಮಾದ ಭಾಗವಾಗಿದ್ದಕ್ಕೆ ತುಂಬಾ ಖುಷಿ ಇದೆ. ನಾನೇ ಈ ಚಿತ್ರಕ್ಕೆ ಡಬ್ ಮಾಡುತ್ತಿದ್ದೇನೆʼʼ ಎಂದು ಸಿನಿಮಾ ಬಗ್ಗೆ ಹೇಳಿಕೊಂಡರು.

ನಿರ್ದೇಶಕ ರಾಕಿ ಸೋಮ್ಲಿ ಮಾತನಾಡಿ ʻಕೆಂಡದ ಸೆರಗು’ ನಾನೇ ಬರೆದ ಕಾದಂಬರಿ ಆಧಾರಿತ ಸಿನಿಮಾ. ನಿರ್ಮಾಪಕ ಕೊಟ್ರೇಶ್ ಹಾಗೂ ನಾನು ಇಬ್ಬರು ಸ್ನೇಹಿತರು. ಅವರಿಗೆ ನಾನು ಈ ಕಾದಂಬರಿ ಬಗ್ಗೆ ಹೇಳಿದಾಗ. ಸಿನಿಮಾ ಮಾಡೋಣ ಎಂದು ಹೇಳಿದರು. ಭೂಮಿ ಶೆಟ್ಟಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಿನಿಮಾ ಮಾಡುವಾಗ ಮಾಲಾಶ್ರೀ ಮೇಡಂ ಕೈನಲ್ಲಿ ಒಂದು ಪಾತ್ರ ಮಾಡಿಸಬೇಕು ಎಂದು ಒಂದು ಆಲೋಚನೆ ಬಂತು. ಕಥೆ ಕೇಳಿದ ಮೇಲೆ ಒಪ್ಪಿಕೊಂಡರು. ಸಿನಿಮಾ ಚಿತ್ರೀಕರಣದಲ್ಲೂ ಸಪೋರ್ಟ್ ಮಾಡಿದರು. ಕಮರ್ಶಿಯಲ್ ಆಗಿ ಮೂಡಿ ಬಂದಿದೆ. ಕುಸ್ತಿಗೆ ಹೆಚ್ಚು ಫೋಕಸ್ ನೀಡಲಾಗಿದೆ. ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಆರು ಹಾಡುಗಳಿವೆ ಎಂದರು.

ಇದನ್ನೂ ಓದಿ: Kannada New Movie: ಸಿಂಪಲ್ ಸುನಿ-ವಿನಯ್ ರಾಜ್‌ಕುಮಾರ್‌ ಕಾಂಬಿನೇಶನ್‌ ಚಿತ್ರಕ್ಕೆ ಧಾರವಾಡದ ಸ್ವತಿಷ್ಠ ಕೃಷ್ಣನ್ ನಾಯಕಿ

ನಾಯಕಿ ಭೂಮಿ ಶೆಟ್ಟಿ (bhoomi shetty) ಮಾತನಾಡಿ ʻʻಮಹಿಳೆ ಎಲ್ಲಿ ಪ್ರಧಾನವಾಗಿರುತ್ತಾಳೆ ಆ ರೀತಿಯ ಪಾತ್ರ ಮಾಡಲು ನಾನು ಕಾತುರದಿಂದ ಕಾಯುತ್ತಿದ್ದೆ. ಅದೇ ಸಮಯದಲ್ಲಿ ಕೆಂಡದ ಸೆರಗು ಸಿನಿಮಾ ಸಿಕ್ಕಿತು. ಕಥೆ, ಅದರ ಸುತ್ತಮುತ್ತ ಇರುವ ಪಾತ್ರಗಳು, ಸಿನಿಮಾದಲ್ಲಿನ ಶೇಡ್ ಎಲ್ಲವನ್ನು ಕೇಳಿ ಇಷ್ಟವಾಯ್ತು. ಚಾಲೆಂಜಿಂಗ್ ಪಾತ್ರ ನಾನು ಮಾಡಲೇಬೇಕು ಎಂದು ಒಪ್ಪಿಕೊಂಡೆ. ಕುಸ್ತಿಗೆ ಹಂಡ್ರೆಡ್ ಪರ್ಸೆಂಟ್‌ಗಿಂತ ಜಾಸ್ತಿ ಎಫರ್ಟ್ ಹಾಕಿದ್ದೇನೆ. ನನ್ನ ಪಾತ್ರಕ್ಕಿರುವ ಶೇಡ್ಸ್ ತುಂಬಾ ಚೆನ್ನಾಗಿದೆ. ಸಮಾಜದಲ್ಲಿ ವೇಶ್ಯೆ ಹಾಗೂ ಆಕೆಯ ಮಗಳನ್ನು ಬೇರೆಯದ್ದೇ ರೀತಿ ನೋಡುತ್ತಾರೆ ಆದರೆ ಆಕೆಗೂ ಅವಕಾಶ ನೀಡಿದರೆ ಎನು ಬೇಕಾದರೂ ಸಾಧಿಸುತ್ತಾಳೆ ಎನ್ನುವ ಎಳೆ ಚಿತ್ರದ್ದು. ತುಂಬಾ ಚೆನ್ನಾಗಿ ಮೂಡಿ ಬಂದಿದೆʼʼ ಎಂದರು

ಇದನ್ನೂ ಓದಿ: Kannada New Movie | ಅಪ್ಪು ಹುಟ್ಟಿದ ಹಬ್ಬದಂದೇ ತೆರೆಗೆ ಬರಲಿದೆ ರಿಯಲ್‌ ಸ್ಟಾರ್‌ ನಟನೆಯ ಕಬ್ಜ

ಶ್ರೀ ಮುತ್ತು ಟಾಕೀಸ್ ಮತ್ತು ಎಸ್ ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕೆ.ಕೊಟ್ರೇಶ್ ಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ, ಪ್ರತಿಮಾ. ಹರೀಶ್ ಅರಸು, ಬಸು ಹಿರೇಮಠ್, ಶೋಭಿತ, ಸಿಂಧು ಲೋಕನಾಥ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಪಿನ್ ವಿ ರಾಜ್ ಛಾಯಾಗ್ರಹಣ, ವೀರೇಶ್ ಕಂಬ್ಲಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ.

Exit mobile version