Site icon Vistara News

Kannada New Movie: ಸೈನ್ಸ್ ಫಿಕ್ಷನ್ ‘ಮಂಡಲ’ ಟ್ರೈಲರ್‌ ಔಟ್‌: ಹೊಸ ಲೋಕ ಅನಾವರಣ!

'Mandala' Trailer Out

ಬೆಂಗಳೂರು: ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ (Kannada New Movie) ಬಿಡುಗಡೆಗೆ ಸಜ್ಜಾಗಿದೆ. ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಕಿರಣ್ ಶ್ರೀನಿವಾಸ್, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು ಮುಖ್ಯ ಭೂಮಿಕೆಯ ಈ ಚಿತ್ರ ಮಾರ್ಚ್ 10ರಂದು ತೆರೆ ಮೇಲೆ ಬರಲಿದೆ. ಇದೀಗ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಚಿತ್ರತಂಡ ಸಿನಿಮಾ ಬಗ್ಗೆ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಅಜಯ್ ಸರ್ಪೇಷ್ಕರ್ ಮಾತನಾಡಿ ʻʻಸೈನ್ಸ್ ಫಿಕ್ಷನ್ ಸಿನಿಮಾವಿದು. ಕನ್ನಡಲ್ಲಿ ಸೈನ್ಸ್ ಫಿಕ್ಷನ್ ಸಿನಿಮಾಗಳು ತುಂಬಾನೇ ಕಡಿಮೆ. ಈ ರೀತಿಯ ಜಾನರ್ ಸಿನಿಮಾ ಮಾಡಲು ನಿರ್ಧರಿಸಿ ಕಥೆ ಬರೆದೆ. ಫೋಟೊಗ್ರಫಿಯಲ್ಲಿ ಆಸಕ್ತಿ ಇತ್ತು, ಕಿರುಚಿತ್ರ ನಿರ್ದೇಶನ ಮಾಡಿದ್ದೇನೆ. ಅದೆಲ್ಲ ಅನುಭವ ಇಟ್ಟುಕೊಂಡು ಮೊದಲ ಬಾರಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ವಿಶ್ಯುವಲ್ ಎಫೆಕ್ಟ್ಸ್ ತುಂಬಾನೇ ಇದೆ ಅಷ್ಟೇ ಚೆನ್ನಾಗಿ ಕೂಡ ಮೂಡಿ ಬಂದಿದೆ. ಇಡೀ ಕುಟುಂಬ ಕುಳಿತು ನೋಡಬಹುದಾದ ಸಿನಿಮಾವಿದು. ಮಾರ್ಚ್ 10ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಸಪೋರ್ಟ್ ಮಾಡಿ ಎಂದುʼʼ ಮಾಹಿತಿ ಹಂಚಿಕೊಂಡರು.

ನಟ ಕಿರಣ್ ಶ್ರೀನಿವಾಸ್ ಮಾತನಾಡಿ ʻʻನಾನು ಚಿಕ್ಕ ವಯಸ್ಸಿನಿಂದಲೂ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನು ನೋಡಿ ಬೆಳೆದಿದ್ದೆ. ಕನ್ನಡದಲ್ಲಿ ಇಂತಹ ಸಿನಿಮಾ ಬರುತ್ತಿದೆ ಎಂದಾಗ ಎರಡು ಕೈಯಿಂದ ಅವಕಾಶ ಬಾಚಿಕೊಂಡೆ. ಚಿತ್ರದ ತಾರಾಬಳಗ ಕೂಡ ಸಿನಿಮಾ ಒಪ್ಪಿಕೊಳ್ಳಲು ಮತ್ತೊಂದು ಕಾರಣ. ಪ್ರಕಾಶ್ ಬೆಳವಾಡಿ, ಸುಧಾ ಮೇಡಂ ಇವರೆಲ್ಲರ ಜತೆ ನಟಿಸಲು ಒಂದೊಳ್ಳೆ ಅವಕಾಶ ಸಿಕ್ತು. ಎಲ್ಲಾ ರೀತಿಯ ಸಿನಿಮಾ ಮಾಡಿದ್ದೇವೆ ಇದೀಗ ‘ಮಂಡಲ’ ಮೂಲಕ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ನಟಿಸಿದ್ದೇನೆ. ಎಲ್ಲರೂ ಈ ರೀತಿಯ ಸಿನಿಮಾ ನೋಡಿ ಪ್ರೋತ್ಸಾಹಿಸಿʼʼ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಸೈನ್ಸ್ ಫಿಕ್ಷನ್ ‘ಮಂಡಲ’ದಲ್ಲಿದೆ ಅನುಭವಿ ಕಲಾವಿದರ ದಂಡು: ಮಾರ್ಚ್ 10ರಂದು ತೆರೆಗೆ

Kannada New Movie

ನಟಿ ಸಂಯುಕ್ತ ಹೊರನಾಡು ಮಾತನಾಡಿ ʻʻಈ ಸಿನಿಮಾದ ಕಾನ್ಸೆಪ್ಟ್ ತುಂಬಾ ಇಂಟ್ರಸ್ಟ್ ಎನಿಸಿತ್ತು. ವಿಜ್ಞಾನದ ಬಗ್ಗೆ ಯಾವಾಗಲೂ ಎ್ಲಲರಿಗೂ ಒಂದು ಕುತೂಹಲವಿರುತ್ತೆ. ಈ ಸಿನಿಮಾ ಕೂಡ ಅಷ್ಟೇ ಕುತೂಹಲ ಮೂಡಿಸುತ್ತದೆ. ಚಿತ್ರದಲ್ಲಿ ಖಡಕ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆʼʼ ಎಂದು ತಿಳಿಸಿದರು.

ಇದನ್ನೂ ಓದಿ: Kannada New Movie: ಪೃಥ್ವಿ ಅಂಬಾರ್ ಅಭಿನಯದ ‘ದೂರದರ್ಶನ’ ಮಾರ್ಚ್ 3ಕ್ಕೆ ತೆರೆಗೆ

ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ. ಜೆಸ್ಸಿ ಕ್ಲಿಂಟನ್ ಸಂಗೀತ ನಿರ್ದೇಶನ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ.

Exit mobile version