Site icon Vistara News

Kannada New Movie | ಸ್ಯಾಂಡಲ್‌ವುಡ್‌ ನಿರ್ದೇಶಕರಿಂದ ʻಮೇರಿʼ ಫಸ್ಟ್‌ ಲುಕ್‌ ರಿಲೀಸ್‌!

Kannada New Movie (meri kannada movie )

ಬೆಂಗಳೂರು : ‘ಆನ’ ಸಿನಿಮಾ ಮೂಲಕ (Kannada New Movie ) ಚಂದನವನದಲ್ಲಿ ಗುರುತಿಸಿಕೊಂಡಿರುವ ಮನೋಜ್ ಪಿ ನಡಲುಮನೆ ಹೊಸದೊಂದು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ‘ಮೇರಿ’ ಎಂದು ಹೆಸರಿಡಲಾಗಿದ್ದು ʻಮೇರಿʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನವೆಂಬರ್‌ 26 ಶನಿವಾರ ಬಿಡುಗಡೆಯಾಗಿದೆ. ಸಿಂಪಲ್ ಸುನಿ, ಅನೂಪ್ ಭಂಡಾರಿ, ಹೇಮಂತ್ ರಾವ್, ದಯಾನಂದ್ ಟಿ.ಕೆ. ಮಂಸೋರೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

‘ಮೇರಿ’ ಪಶ್ಚಿಮ ಘಟ್ಟದ ಗ್ರಾಮಾಂತರ ಠಾಣೆಯಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ ಹಾಗೂ ಥ್ರಿಲ್ಲರ್ ಡ್ರಾಮ ಸಬ್ಜೆಕ್ಟ್ ಕಥಾಹಂದರ ಹೊಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ವಿಕಾಶ್ ಉತ್ತಯ್ಯ, ಅನುಷ ಭಟ್, ಚೇತನ್ ವಿಕ್ಕಿ, ತೇಜಸ್ವಿನಿ ಶರ್ಮ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kannada New Movie | ಫ್ಲ್ಯಾಟ್ #9 ಸಿನಿಮಾ ಟ್ರೈಲರ್‌ ಔಟ್‌: ಡಿಸೆಂಬರ್‌ 2ಕ್ಕೆ ತೆರೆಗೆ

ಮನೋಜ್ ಪಿ ನಡಲುಮನೆ ಎರಡನೇ ಸಿನಿಮಾ ಇದು. ‘ಆನ’ ನಂತರ ಸದ್ದಿಲ್ಲದೇ ಸೆಟ್ಟೇರಿದ ‘ಮೇರಿ’ ಚಿತ್ರ ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯದಲ್ಲೇ ಟ್ರೈಲರ್‌ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ. ಜನವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಸಂದೀಪ್ ನೀನಾಸಂ, ಭಾರ್ಗವ್ ವೆಂಕಟೇಶ್, ಸುಶಾಂತ್, ದೀಪಕ್ ಗೌಡ ಒಳಗೊಂಡ ಕಲಾವಿದರ ಬಳಗ ಚಿತ್ರದಲ್ಲಿದೆ. ವಿನೋದ್ ಭಾರತಿ ಛಾಯಾಗ್ರಹಣ, ಸೂರಜ್ ಜೋಯ್ಸ್ ಸಂಗೀತ ನಿರ್ದೇಶನ, ನಾಗೇಂದ್ರ ಉಜ್ಜನಿ ಸಂಕಲನ ಚಿತ್ರಕ್ಕಿದೆ. ರನ್ವಿತ್ ಶಿವಕುಮಾರ್, ಹರೀಶ್ ಜಿ.ಬಿ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ | Kannada New Film | ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟ ರಿಷಿ: ಪ್ರಶಾಂತ್ ರಾಜಪ್ಪ ಆ್ಯಕ್ಷನ್‌ ಕಟ್‌!

Exit mobile version