ಬೆಂಗಳೂರು: ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ (Kannada New Movie) ಅಭಿನಯ, ಹಳ್ಳಿ ಸೊಗಡಿನ ‘ಮೂರನೇ ಕೃಷ್ಣಪ್ಪ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಬ್ಲಿಂಕ್’, ‘ಶಾಖಾಹಾರಿ’, ‘ಜೂನಿ’, O2, ‘ಧರಣಿ ಮಂಡಲ ಮಧ್ಯದೊಳಗೆ’ ಹಾಗೂ ‘ಕರಟಕ ದಮನಕ’ ಹೀಗೆ ಹಲವು ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಮನ್ನಣೆ ಗಳಿಸಿವೆ. ಇತ್ತೀಚೆಗೆ ಬಿಡುಗಡೆಯಾದ ‘ಮೂರನೇ ಕೃಷ್ಣಪ್ಪ’ ಸಿನಿಮಾ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಲಿಲ್ಲ. ಇದೀಗ ಯಾವುದೇ ಸುಳಿವು ನೀಡದೇ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ‘ಮೂರನೇ ಕೃಷ್ಣಪ್ಪ’ ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.
`ಶಾಖಾಹಾರಿ’ ಚಿತ್ರದ ಗಂಭೀರ ಪಾತ್ರದಲ್ಲಿ ರಂಜಿಸಿದ್ದ ರಂಗಾಯಣ ರಘು ಈ ಚಿತ್ರದಲ್ಲಿ ಎಂದಿನ ತಮ್ಮ ಕಾಮಿಡಿಯಿಂದ ಮೋಡಿ ಮಾಡುತ್ತಾರೆ.
ಇದನ್ನೂ ಓದಿ: Krishan Kumar: ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು
ಮೂರನೇ ಕೃಷ್ಣಪ್ಪ’ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.
ಇವರೊಂದಿಗೆ ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರೆ, ಯೋಗಿ ಕ್ಯಾಮೆರಾ ಹ್ಯಾಂಡಲ್ ಮಾಡಿದ್ದಾರೆ.