Site icon Vistara News

Kannada New Movie: ಸೆನ್ಸಾರ್ ಪಾಸ್ ಆದ ‘ನಗುವಿನ ಹೂಗಳ ಮೇಲೆ’ ಸಿನಿಮಾ

Kannada New Movie Naguvina Hoogala Mele U Certificate

ಬೆಂಗಳೂರು: ರೊಮ್ಯಾಂಟಿಕ್ ಹಾಗೂ ಆ್ಯಕ್ಷನ್ ಕಥಾಹಂದರ ಹೊಂದಿರುವ “ನಗುವಿನ ಹೂಗಳ ಮೇಲೆ” ಸಿನಿಮಾ (Kannada New Movie) ಬಿಡುಗಡೆಗೆ ಸಜ್ಜಾಗಿದೆ. ಈಗ ಸೆನ್ಸಾರ್ ಮಂಡಳಿಯಿಂದ ಯು ಪ್ರಮಾಣ ಪತ್ರ ಪಡೆದುಕೊಂಡಿದೆ. ʻಆಮ್ಲೆಟ್ʼ, ʻಕೆಂಪಿರ್ವೆʼ ಖ್ಯಾತಿಯ ನಿರ್ದೇಶಕ ವೆಂಕಟ್ ಭಾರದ್ವಾಜ್ ಸಾರಥ್ಯದಲ್ಲಿ ‘ನಗುವಿನ ಹೂಗಳ ಮೇಲೆ’ ಚಿತ್ರ ಮೂಡಿಬರುತ್ತಿದೆ.

ನಗುವಿನ ಹೂಗಳ ಮೇಲೆ ಸಿನಿಮಾದಲ್ಲಿ ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗಾರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ʻಇರಲಿ ಬಿಡು ಈ ಜೀವ ನಿನಗಾಗಿʼ ಎಂಬ ರೊಮ್ಯಾಂಟಿಕ್ ಹಾಡು ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ವೆಂಕಟ್‌ ಭಾರದ್ವಾಜ್‌ ಕಥೆ, ಚಿತ್ರಕಥೆ ಬರೆದು‌ ನಿರ್ದೇಶಿಸಿರುವ ನಗುವಿನ ಹೂಗಳ ಮೇಲೆ ಸಿನಿಮಾವನ್ನು ಟಾಲಿವುಡ್‌ನಲ್ಲಿ ಸೂಪರ್ ಹಿಟ್ ಚಿತ್ರಗಳಾದ ಬೆಂಗಾಲ್ ಟೈಗರ್, ಪಂಥಂ, ಒರೆ ಬುಜ್ಜುಗ , ಒಡೇಲ ರೈಲ್ವೆ ಸ್ಟೇಷನ್ ಮತ್ತು ಪ್ಯಾರ್ ಮೇ ಪಡೀಪೊಯಾನು ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ.

ಇದನ್ನೂ ಓದಿ: ನಗುವಿನ ಹೂಗಳ ಮೇಲೆ ಚಿತ್ರಕ್ಕೆ ಲಂಡನ್ ಸ್ಟುಡಿಯೋದಲ್ಲಿ ಹಿನ್ನೆಲೆ ಸಂಗೀತ!

ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸವಿರುವ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರವನ್ನು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

Exit mobile version