ಬೆಂಗಳೂರು: ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಅಭಿದಾಸ್ (abhidas gattimela) (Kannada New Movie), ನಗುವಿನ ಸುಂದರಿ (Kannada New Movie) ಶರಣ್ಯಾ ಶೆಟ್ಟಿ (sharanya shetty) ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿರುವ “ನಗುವಿನ ಹೂಗಳ ಮೇಲೆ” ಸಿನಿಮಾದ (naguvina hoogalamele) ಎರಡನೇ ಹಾಡು ಬಿಡುಗಡೆಯಾಗಿದೆ. SRV ಥಿಯೇಟರ್‌ನಲ್ಲಿ ಗೊತ್ತಿಲ್ಲ ಯಾರಿಗೂ ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.
ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿ, ʻʻನಗುವಿನ ಹೂಗಳ ಮೇಲೆ ಹೆಸರು ತುಂಬಾ ಚೆನ್ನಾಗಿದೆ ಮತ್ತು ತುಂಬಾ ತೂಕವಾದ ಹೆಸರು. ರಾಜ್ ಕುಮಾರ್ ಸರ್ ಹಾಡಿರುವ, ಚಿ. ಉದಯ್ ಶಂಕರ್ ಬರೆದಿರುವ ಭಾಗ್ಯವಂತರು ಸಿನಿಮಾದ ಹಾಡಿನ ಎರಡನೇ ಚರಣದಲ್ಲಿ ಬರುವ ತೂಕವಿರುವ ಪದ ಇದು. ಹೀಗಾಗಿ ನಮ್ಮ ಕಂಟೆಂಟ್ ಚೆನ್ನಾಗಿ ಮಾಡುವ ಜವಾಬ್ದಾರಿ ಹೆಚ್ಚಿತ್ತು. ಶರಣ್ಯ ಹಾಗೂ ಅಭಿ ಕಾಂಬಿನೇಷನ್ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ವರ್ಕೌಟ್ ಆಗಿದೆ. ನಗುವಿನ ಹೂಗಳ ಮೇಲೆ ಒಂದೊಳ್ಳೆ ಪ್ರೇಮಕಥೆ. 18 ವರ್ಷದಿಂದ 80 ವರ್ಷದವರು ನೋಡಬಹುದು. ಪ್ರೇಮ ಅನ್ನೋದಕ್ಕೆ ಸಾವಿಲ್ಲ. ವಯಸ್ಸಿಲ್ಲ. ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ನಮಗೆ ಬೆಂಬಲವಾಗಿ ನಿಂತಿದ್ದರು. 27 ದಿನಗಳು ಶೂಟಿಂಗ್ ಮಾಡಿ ಮುಗಿಸಿದ್ದೇವೆʼʼ ಎಂದು ತಿಳಿಸಿದರು.
ನಟ ಅಭಿದಾಸ್ ಮಾತನಾಡಿ, ʻʻಸೋಲೋ ಹೀರೊ ಆಗಿ ಇದು ನನ್ನ ಮೊದಲ ಸಿನಿಮಾ. ವೆಂಕಟ್ ಸರ್, ರಾಧಾ ಮೋಹನ್ ಸರ್ ಧನ್ಯವಾದ ನನ್ನ ಸೆಲೆಕ್ಟ್ ಮಾಡಿದ್ದಕ್ಕೆ. ನಾಲ್ಕು ಮೆಲೋಡಿ ಹಾಡು ಕೊಟ್ಟಿದ್ದಾರೆ. “ಇರಲಿ ಬಿಡು”, “ಗೊತ್ತಿಲ್ಲ ಯಾರಿಗೂ” ನನ್ನ ಫೇವರೇಟ್ ಹಾಡುಗಳುʼʼ ಎಂದರು.
ನಾಯಕಿ ನಗುವಿನ ಸುಂದರಿ ಶರಣ್ಯಾ ಶೆಟ್ಟಿ ಮಾತನಾಡಿ, ʻʻನಗುವಿನ ಹೂಗಳ ಮೇಲೆ ನನಗೆ ತುಂಬಾ ಸ್ಪೆಷಲ್ ಸಿನಿಮಾ. ಸೋಲೋ ಹೀರೋಯಿನ್ ಆಗಿ ಫಸ್ಟ್ ಸೈನ್ ಮಾಡಿದ ಮೂವೀ. ಎರಡು ವರ್ಷದ ಹಿಂದೆ ಶೂಟ್ ಮಾಡಿದ್ದು ಇದು. ಸ್ಕ್ರೀನ್ ನಲ್ಲಿ ನನ್ನ ಮುಗ್ದತೆ ಕಾಣಿಸುತ್ತದೆ. ಶೂಟಿಂಗ್ ಪ್ರೋಸೆಸ್ ತುಂಬಾ ಚೆನ್ನಾಗಿತ್ತು. ಈ ಸಿನಿಮಾ ಟ್ರೂ ಲವ್ ಸ್ಟೋರಿ ಬೆಸೆಡ್ ಇದೆ. ತನು ಮನುವಿನ ಪ್ರೇಮಕಥೆ ನಗುವಿನ ಹೂಗಳ ಮೇಲೆ. ನಾನು ತೆರೆಮೇಲೆ ಚಿತ್ರ ನೋಡಲು ಕಾತುರಳಾಗಿದ್ದೇನುʼʼ ಎಂದರು.
ಇದನ್ನೂ ಓದಿ: Kannada New Movie: ರಂಗಾಯಣ ರಘು ‘ಶಾಖಾಹಾರಿ’ ಸಿನಿಮಾಗೆ ಯೋಗರಾಜ್ ಭಟ್ ಸಾಥ್!
ಗೊತ್ತಿಲ್ಲ ಯಾರಿಗೂ ಎಂಬ ಪ್ರೇಮಗೀತೆಗೆ ಲವ್ ಪ್ರಾನ್ ಮೆಹತಾ ಟ್ಯೂನ್ ಹಾಕಿದ್ದು, ಚಿದಂಬರ ನರೇಂದ್ರ ಸಾಹಿತ್ಯ ಬರೆದಿದ್ದು, ತಜೀಂದರ್ ಸಿಂಗ್ ಧ್ವನಿಯಾಗಿದ್ದಾರೆ. ಈ ಹಾಡಿನಲ್ಲಿ ಶರಣ್ಯ ಹಾಗೂ ಅಭಿದಾಸ್ ಮಿಂಚಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇರಲಿ ಬಿಡು ಈ ಜೀವ ನಿನಗಾಗಿ ಗಾನಲಹರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಆಮ್ಲೆಟ್, ಕೆಂಪಿರ್ವೆ ಸೇರಿದಂತೆ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿರುವ ವೆಂಕಟ್ ಭಾರದ್ವಾಜ್ ಆಕ್ಷನ್ ಕಟ್ ಹೇಳಿದ್ದು, ಅಭಿದಾಸ್, ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸುತ್ತಿದ್ದಾರೆ. ಬಾಲ ರಾಜವಾಡಿ, ಆಶಾ ಸುಜಯ್, ಗಿರೀಶ್, ನಂಜಪ್ಪ, ಅಭಿಷೇಕ್ ಅಯ್ಯಂಗರ್, ಹರ್ಷಿತ್ ಗೌಡ, ಹರೀಶ್ ಚೌಹಾನ್, ಹರ್ಷ ಗೋ ಭಟ್ ತಾರಾಬಳಗದಲ್ಲಿದ್ದಾರೆ.
ಟಾಲಿವುಡ್ ನಲ್ಲಿ ಬೆಂಗಾಲ್ ಟೈಗರ್, ಪಂಥಂ, ಬಾಸ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ. ಕೆ.ರಾಧಾ ಮೋಹನ್ ಶ್ರೀ ಸತ್ಯಸಾಯಿ ಆರ್ಟ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ನಿರ್ಮಾಣದ ಮೊದಲ ಕನ್ನಡ ಸಿನಿಮಾವಾಗಿದೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತಿಯ ಛಾಯಾಗ್ರಹಣ, ಚಂದನ್ ಪಿ ಸಂಕಲನ, ಲವ್ ಪ್ರಾನ್ ಮೆಹತಾ ಸಂಗೀತ ನಿರ್ದೇಶನ, ಟೈಗರ್ ಶಿವು ಸಾಹಸ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ.