Site icon Vistara News

Kannada New Movie: ನಾಳೆ ರಾಜ್ಯಾದ್ಯಂತ ಪ್ರಥಮ್‌ ಅಭಿನಯದ ʻನಟ ಭಯಂಕರʼ ಸಿನಿಮಾ ರಿಲೀಸ್‌

Kannada New Movie nata Bhayankara

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ಪ್ರಥಮ್‌ ಅಭಿನಯದ ʻನಟ ಭಯಂಕರ ಸಿನಿಮಾʼ (Kannada New Movie) ಶುಕ್ರವಾರ, ಫೆಬ್ರವರಿ 3ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಈ ಬಾರಿ ಕೇವಲ ನಟನೆ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹಾರರ್‌ ಥ್ರಿಲರ್‌ ಮಿಶ್ರಿತ ಸಿನಿಮಾ ಇದಾಗಿದ್ದು, ಮನರಂಜನೆ ಸಿನಿಮಾ ಆಗಿದೆ ಎಂದು ಪ್ರಥಮ್‌ ಹೇಳಿಕೊಂಡಿದ್ದಾರೆ. ಪ್ರಥಮ್‌ ಜತೆ ಕುರಿ ಪ್ರತಾಪ್‌, ಓಂ ಪ್ರಕಾಶ್‌ ರಾವ್‌, ಮತ್ತು ಮಜಾ ಟಾಕೀಸ್ ಪವನ್, ಬಿರಾದಾರ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ.

ಇದನ್ನೂ ಓದಿ: Kannada New Movie: ‘ಹೊಂದಿಸಿ ಬರೆಯಿರಿ’ ಟ್ರೈಲರ್‌ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ಇದನ್ನೂ ಓದಿ: Kannada New Movie: ಸೆಟ್ಟೇರಿತು ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ

ಸಿನಿಮಾ ಕಲಾವಿದನ ಪಾತ್ರ ನಿಭಾಯಿಸಿದ್ದಾರೆ ಪ್ರಥಮ್.‌ ಸಿನಿಮಾ ಟ್ರೈಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ನೋಡುಗರು ಕಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.ಪ್ರಥಮ್‌ಗೆ ನಾಯಕಿಯಾಗಿ ನಿಹಾರಿಕಾ ಮತ್ತು ಚಂದನಾ ಕಾಣಿಸಿಕೊಂಡಿದ್ದಾರೆ. 

Exit mobile version