Site icon Vistara News

Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

Kannada New Movie The movie is becoming a pendrive

ಬೆಂಗಳೂರು: ’ಪೆನ್‌ಡ್ರೈವ್’ (Pendrive) ಪ್ರಚಲಿತ ವಿದ್ಯಮಾನದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಾಜಕೀಯದಲ್ಲಿ ಹೆಚ್ಚೇ ಎಂದು ಹೇಳಬಹುದು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು (Kannada New Movie) ಸೆಟ್ಟೇರುತ್ತಿದ್ದು, ’ದೊಡ್ಡವರೆಲ್ಲ ಜಾಣರಲ್ಲ’ ಎಂಬ ಅಡಿಬರಹವಿದೆ. ಈ ಹಿಂದೆ ’ಪಾತರಗಿತ್ತಿ’ ಎನ್ನುವ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದ ಕೆರ್ನಳ್ಳಿ ಈಶ್ವರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರೀಕ್ಷೆ ಹೆಚ್ಚಿಸಿದ ಪೋಸ್ಟರ್‌

ಮನುಷ್ಯನೊಬ್ಬ ಮುಖವಾಡ ಹಾಕಿಕೊಂಡು ಪೆನ್‌ಡ್ರೈವ್ ಹಿಡಿದುಕೊಂಡಿರುವುದು, ಮರದ ಬಳ್ಳಿಯಲ್ಲಿ ಎಲೆಗಳ ಬದಲು ಪೆನ್‌ಡ್ರೈವ್‌ಗಳು ಇರುವ ಪೋಸ್ಟರ್ ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸಿದೆ. ಸೂಪರ್ ಮೂವೀಸ್ ಮೇಕರ‍್ಸ್ ಅಡಿಯಲ್ಲಿ ಲೋಕೇಶ್ ಆರ್. ಬಂಡವಾಳ ಹೂಡುತ್ತಿದ್ದಾರೆ. ಮಂಜುನಾಥ ಎಂ.ಸಿ. ಮತ್ತು ಬದ್ರುದ್ದೀನ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: makemytrip : ರೈಲು ಪ್ರಯಾಣದ ವೇಳೆ ಹೊಸತನ ತರಲು ವೈಶಿಷ್ಟ್ಯಗಳನ್ನು ಪರಿಚಯಿಸಿದ ಮೇಕ್‌ಮೈಟ್ರಿಪ್‌

ಶೀರ್ಷಿಕೆಗೂ ಕಥೆಗೂ ಏನು ಸಂಬಂಧ. ಯಾರ‍್ಯಾರು ತಗಲಿಕೊಳ್ತಾರೆ. ಇದೇ ಟೈಟಲ್ ನೀಡಲು ಯಾರಿಂದ ಉತ್ತೇಜನ ಸಿಕ್ಕಿತು. ಏನೆಲ್ಲಾ ಅಂಶಗಳು ಇರಲಿದೆ. ಚಿತ್ರದಲ್ಲಿ ಪೊಲೀಸ್, ಕೋರ್ಟು, ವಕೀಲರು, ದಸ್ತಗಿರಿ ಹೀಗೆಲ್ಲ ಇರುತ್ತಾ ಎಂಬುದಕ್ಕೆ ನಿರ್ದೇಶಕರು ದಸ್ತಗಿರಿನೂ ಆಗುತ್ತೆ. ಜೈಲು ಊಟಾನೂ ಇರುತ್ತೆ. ಅದು ಸಿನಿಮಾದ ಮೂಲಕಥೆ. ಒಟ್ಟಿನಲ್ಲಿ ಎಲ್ಲರೂ ಊಹಿಸುವಂತಹ ಪಾತ್ರಗಳು ಬರುತ್ತದೆ ಎಂದಷ್ಟೇ ಹೇಳಿ ಉತ್ತರ ಕೊಡದೆ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

ಸದ್ಯ ರಾಜಕೀಯ ವಲಯ, ಹಲವರ ವೈಯಕ್ತಿಕ ಬದುಕಿನಲ್ಲಿ ಪೆನ್‌ಡ್ರೈವ್ ಸಂಚಲನವನ್ನು ಹುಟ್ಟಿಸುತ್ತಾ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಟೈಟಲ್ ಕೇಳಿದ ತಕ್ಷಣ ಕೇವಲ ಒಂದೇ ಕೋನದಿಂದ ಯಾಕೆ ಯೋಚನೆ ಮಾಡುತ್ತೀರಾ. ಅದರೊಳಗಡೆ ಏನನ್ನಾದರೂ ತುಂಬಿಸಬಹುದು. ಆದರೆ ಅದರ ಒಳಗಡೆ ಜನರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚಾಗಿ ವಿಷಯಗಳು ಇರುತ್ತವೆ. ಅದು ದೊಡ್ಡವರು ಅಥವಾ ಚಿಕ್ಕವರು ಇರಬಹುದು. ಸಮಾಜದ ಎಲ್ಲಾ ಮುಖಗಳು ಸಿಗುತ್ತದೆ. ಇದನ್ನು ಸಕರಾತ್ಮಕವಾಗಿ ನೋಡಿದರೆ ಆಗುವುದಾದರೂ ಏನು? ಒಟ್ಟಿನಲ್ಲಿ ಯಾರಿಗೂ ಅನ್ವಯವಾಗುವಂತ ಸನ್ನಿವೇಶಗಳು ಇರುವುದಿಲ್ಲ. ದೃಶ್ಯಗಳು ಸತ್ಯವೋ, ಮಿಥ್ಯವೋ ಎಂಬುದು ತೆರೆಕಂಡ ನಂತರ ತಿಳಿಯಲಿದೆ. ಅದ್ದೂರಿ ತಾರಾಗಣ ಇರುತ್ತದೆ. ಎಲ್ಲವನ್ನು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ ಈಶ್ವರ್.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ಬೆಂಗಳೂರು, ಬಳ್ಳಾರಿ, ಹಾಸನ, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಂಗೀತ ಹಂಸರಾಗ, ಛಾಯಾಗ್ರಹಣ ವಿಜಯ್ ರಾಘವ್, ಸಂಭಾಷಣೆ ಶ್ರೀಹರ್ಷ ಚಿತ್ರದುರ್ಗ, ಜೀವನ್‌ರಾಂ ಸಂಕಲನ ಇರಲಿದೆ.

Exit mobile version