Site icon Vistara News

Kannada New Movie | ಪೃಥ್ವಿ ಅಂಬಾರ್‌-ಮಿಲನಾ ಅಭಿನಯದ `For Regn’ ರಿಲೀಸ್‌ ಡೇಟ್‌ ರಿವೀಲ್‌!

Kannada New Movie

ಬೆಂಗಳೂರು : ಲವ್‌ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್‌ ಹಾಗೂ ದಿಯಾ ಹೀರೊ ಪೃಥ್ವಿ ಅಂಬಾರ್‌ ನಟನೆಯ ಫಾರ್‌ ರಿಜಿಸ್ಟ್ರೇಷನ್‌ (For Regn) ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದೆ. ಚಿತ್ರದ ಫಸ್ಟ್‌ ಲುಕ್‌ ಕೂಡ ಚಿತ್ರ ತಂಡ (Kannada New Movie) ರಿವೀಲ್‌ ಮಾಡಿದೆ. ಎರಡು ಮುಗ್ದ ಮನಸ್ಸುಗಳ ನಡುವಿನ ಹಾಸ್ಯಭರಿತವಾದ ರೊಮ್ಯಾಂಟಿಕ್‌ ಫ್ಯಾಮಿಲಿ ಡ್ರಾಮಾ ಚಿತ್ರ ಇದಾಗಿದ್ದು ಫೆಬ್ರವರಿ 10, 2023ರಂದು ತೆರೆ ಕಾಣುತ್ತಿದೆ.

ಈ ಹಿಂದೆ ಚಿತ್ರದ ಆಡಿಯೊ ಹಕ್ಕನ್ನು ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರಿ ಮೊತ್ತ ನೀಡಿ ಖರೀದಿಸಿತ್ತು. ಆರ್‌.ಕೆ. ಹರೀಶ್‌ ಸಂಗೀತ ಸಂಯೋಜಿಸಿರುವ ಆರು ಹಾಡಿಗಳಿಗೆ ಬಹದ್ದೂರ್‌ ಚೇತನ್‌, ಕವಿರಾಜ್‌ ಅರಸ್‌ ಹಾಗೂ ನಾಗಾರ್ಜುನ ಶರ್ಮ ಸಾಹಿತ್ಯ ಬರೆದಿದ್ದಾರೆ. ವಿಜಯ್‌ ಪ್ರಕಾಶ್‌, ಚಂದನ್‌ ಶೆಟ್ಟಿ, ವಾಸುಕಿ ವೈಭವ್‌ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಫಾರ್‌ ರಿಜಿಸ್ಟ್ರೇಷನ್‌ ಚಿತ್ರದಲ್ಲಿ ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು, ಅರವಿಂದ್‌ ಬೋಳಾರ್‌ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ | Pruthvi Ambaar | ದೂರದರ್ಶನದಲ್ಲಿ ಪೃಥ್ವಿ ಅಂಬಾರ್‌ ಜತೆಯಾದ ನಟಿ ಅಯನಾ

ನಿಮಾ ಚಿತ್ರೀಕರಣ ಮಂಗಳೂರು, ಸಕಲೇಶಪುರ, ಉಡುಪಿ ಹಾಗೂ ಬೆಂಗಳೂರಿನಲ್ಲಿ ನಡೆದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ನವೀನ್‌ ದ್ವಾರಕನಾಥ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ನಿಶ್ಚಲ್‌ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಎನ್‌. ನವೀನ್‌ ರಾವ್‌ ಬಂಡವಾಳ ಹೂಡುತ್ತಿದ್ದಾರೆ. ಅಭಿಷೇಕ್ ಕಳತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮತ್ತು ಮನು ಶೆಡ್ಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ | Manso Re Director | ಮಂಸೋರೆ ನಿರ್ದೇಶನದ 19.20.21 ಸಿನಿಮಾ ಬಿಡುಗಡೆಗೆ ಸಜ್ಜು!

Exit mobile version