Site icon Vistara News

Kannada New Movie: ‘ರಕ್ತಾಕ್ಷ’ ಸಿನಿಮಾದ ಜವಾರಿ ಸಾಂಗ್ ರಿಲೀಸ್; ಅರೆಸ್ಟ್ ಮಿ ಬೇಬಿ ಎಂದು ಹೆಜ್ಜೆ ಹಾಕಿದ ರೋಹಿತ್

Rakthaksha song Release

ಬೆಂಗಳೂರು: `ಜವಾರಿ ಹುಡುಗನ’ (Kannada New Movie) ಜಬರ್ದಸ್ತ್ ಜವಾರಿ ಸಾಂಗ್ ರಿಲೀಸ್ ಆಗಿದೆ. ʻಅರೆಸ್ಟ್ ಮಿ ಬೇಬಿʼ ಎನ್ನುತ್ತ ಉತ್ತರ ಕರ್ನಾಟಕದ ಪ್ರತಿಭೆ ರೋಹಿತ್ ʻರಕ್ತಾಕ್ಷʼ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ʻರಕ್ತಾಕ್ಷʼ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಡುತ್ತಿರುವ ರೋಹಿತ್ ನಿರ್ಮಾಪಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆ್ಯಕ್ಷನ್ ಟೀಸರ್ ಮೂಲಕ ಜಬರ್ದಸ್ತ್ ಆ್ಯಕ್ಷನ್ ಪ್ರದರ್ಶಿಸಿದ್ದ ಈ ಹುಡ್ಗ ಈ ಜವಾರಿ ಹಾಡಿನ ಮೂಲಕ ಕಿಕ್ ಏರಿಸಿದ್ದಾರೆ.

ರೋಹಿತ್ ಕುಣಿದಿರುವ ‘ಅರೆಸ್ಟ್ ಮೀ ಬೇಬಿ’ ಹಾಡಿಗೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ. ಸುಪ್ರಿಯಾ ರಾಮ್ ಜತೆ ಕಂಠ ಕುಣಿಸುವುದರ ಜತೆಗೆ ಡೋಸ್ಮೋಡ್ ಸಂಗೀತ ಒದಗಿಸಿದ್ದಾರೆ. ಪಕ್ಕ ಉತ್ತರ ಕರ್ನಾಟಕದ ಸ್ಟೈಲ್ ನಲ್ಲಿ ಮೂಡಿಬಂದಿರುವ ಸಿಂಗಿಂಗ್ ಮಸ್ತಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೊ ಆಗಿರುವ ಜತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ. ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: Kannada New Movie: `ಕೆಂಡ’ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿದ `ಗಂಟುಮೂಟೆ’ ಚಿತ್ರತಂಡ!

ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ಗುರುದೇವ್ ನಾಗರಾಜ, ರಾಮಣ್ಣ, ವಿಲಾಸ್, ಪ್ರಭು, ವಿಶ್ವ, ಭದ್ರಿ, ನಾರಾಯಣ, ಬಸವರಾಜ ಆದಾಪುರ್, ಭರತ್ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾದ ಟೈಟಲ್ ಟ್ರ್ಯಾಕ್‌ವನ್ನು ವಸಿಷ್ಠ ಸಿಂಹ ಹಾಡಿದ್ದು ಹಾಡು ಬಿಡುಗಡೆ ಆಗಿ ಒಳ್ಳೆಯ ಪ್ರತಿಕ್ರಿಯೆ ಧಕ್ಕಿಸಿಕೊಂಡಿದೆ.

Exit mobile version