Site icon Vistara News

Kannada New Movie: ನ್ಯಾಷನಲ್‌ ಇಶ್ಯೂ ʻರವಿಕೆ ಪ್ರಸಂಗʼದ ಟ್ರೈಲರ್‌ ಔಟ್‌!

Kannada New Movie ravike prasanaga Trailer Out

ಬೆಂಗಳೂರು: ಚಂದನವನದ ‌ವಿಭಿನ್ನ ಕಥಾಹಂದರ ಹೊಂದಿರುವ ಗೀತಾ ಭಾರತಿ ಭಟ್‌ ಅಭಿನಯದ “ರವಿಕೆ ಪ್ರಸಂಗ” (Kannada New Movie) ಎಂಬ ಮನರಂಜನಾತ್ಮಕ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿದೆ.

ಟ್ರೈಲರ್‌ ಹಾಸ್ಯಮಯವಾಗಿದೆ. ಈ ಸಿನಿಮಾಗೆ ಸಂತೋಷ್ ಕೊಡೆಂಕೆರಿ ಅವರ ನಿರ್ದೇಶನವಿದೆ. ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾ ರಾವ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದ ಟೀಸರ್‌ವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವ ಮೂಲಕ ಕಿರುತೆರೆ ನಟಿ ಗೀತಾ ಭಾರತಿ ಭಟ್ ಅವರ ಸಿನಿಮಾಗೆ ಸಾಥ್‌ ನೀಡಿದ್ದರು. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಗೀತಾ ಭಾರತಿ ಭಟ್ ʻರವಿಕೆ ಪ್ರಸಂಗ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Rachita Ram : ನ್ಯಾಷನಲ್‌ ಇಶ್ಯೂ ʻರವಿಕೆ ಪ್ರಸಂಗʼದ ಮೊದಲ ಪೋಸ್ಟರ್‌ ಔಟ್‌; ಡಿಂಪಲ್ ಕ್ವೀನ್ ಸಾಥ್‌!

ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿದರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ ʻʻರವಿಕೆ ಪ್ರಸಂಗ” ಚಿತ್ರದ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಫೆ.16ರಂದು ಸಿನಿಮಾ ತೆರೆ ಕಾಣಲಿದೆ.

Exit mobile version