Site icon Vistara News

Kannada New Movie | ಶಿರಡಿ ಸಾಯಿಬಾಬಾ ಜೀವನ ಕಥೆ ಆಧಾರಿತ ಸಿನಿಮಾ ʻಸದ್ಗುರುʼ ಜನವರಿ 5ಕ್ಕೆ ತೆರೆಗೆ

Kannada New Movie

ಬೆಂಗಳೂರು: ಶಿರಡಿ ಸಾಯಿ ಬಾಬಾ ಜೀವನ ಕಥೆ ಆಧಾರಿತ ‘ಸದ್ಗುರು’ ಸಿನಿಮಾ (Kannada New Movie) ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ವಿಕ್ರಮಾದಿತ್ಯ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಮಕ್ಕಳ ಮೂಲಕ ಶಿರಡಿ ಸಾಯಿ ಬಾಬಾ ಕಥೆಯನ್ನು ‘ಸದ್ಗುರು’ ಸಿನಿಮಾ ಮೂಲಕ ಹೇಳಲಾಗಿದೆ. ಇದೀಗ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ.

ಸಹನಾ ಆರ್ಟ್ಸ್ ಬ್ಯಾನರ್‌ನಡಿ ವಿಕ್ರಮಾದಿತ್ಯ ಚಿತ್ರವನ್ನು ನಿರ್ದೇಶನದ ಜತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಸಾಯಿ ಬಾಬಾ ಜೀವನ ಕುರಿತಾದ ಸಿನಿಮಾ ಇದಾಗಿದೆ. ಜನವರಿ 5ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. 5ರಿಂದ 14 ವರ್ಷದ ಧಾರವಾಡದ ರಂಗಭೂಮಿ ಮಕ್ಕಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂಜನಾ ಗೋರ್ಪಡೆ ಸಾಯಿ ಬಾಬಾ ಪಾತ್ರ ನಿರ್ವಹಿಸಿದ್ದು, ದಿಗಂತ್ ತುಬ್ರಬುದ್ಧಿ, ತುಳಸಿ ಮುಕಾಶಿ, ಸುಮಿತ್ ಭಜಂತ್ರಿ, ಸಹನಾ, ಸಂಕೇತ್ ಬಂಕಾಪುರ, ಸಾನ್ವಿ, ನಮನ್ ಕನವಳ್ಳಿ ಹಿರೇಮಠ್, ಆರಾಧ್ಯ ರಜಪೂತ್, ಲಿತಿಕಾ ಯರಗಟ್ಟಿ ಸೇರಿದಂತೆ ಹಲವು ಮಕ್ಕಳು ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ | Kannada New Movie | ʻಥಗ್ಸ್‌ ಆಫ್‌ ರಾಮಘಡʼ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ ಯೋಗರಾಜ್‌ ಭಟ್‌!

ʻʻಜೂನ್‌ನಲ್ಲಿ ಚಿತ್ರೀಕರಣ ಆರಂಭಿಸಿ 30 ದಿನಗಳ ಕಾಲ ಧಾರವಾಡದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದೀಗ ಸಿನಿಮಾ ಕೆಲಸಗಳು ಪೂರ್ಣಗೊಂಡಿದ್ದು ಜನವರಿ 5ರಂದು ಸಿನಿಮಾ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ. ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಬಹಳ ಆಸಕ್ತಿ ಇತ್ತು. ನಿರ್ದೇಶಕನಾಗಬೇಕು, ಕಲಾವಿದನಾಗಬೇಕು ಎಂಬ ಆಸೆ ಇತ್ತು. ರಂಗಭೂಮಿ ಕಲಾವಿದ ಕೂಡ ಹೌದು. ಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿರ್ದೇಶಕ ವಾಸುದೇವ್ ಆಲೂರು ನನ್ನ ಗುರುಗಳು ಅವರ ಬಳಿ ಸಹಾಯಕ ನಿರ್ದೇಶಕನಾಗಿ ನೇಗಿಲ ಯೋಗಿ ಸಿನಿಮಾಗೆ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಬೇಕು ಎಂದು ಬಹಳ ವರ್ಷಗಳಿಂದ ಅಂದುಕೊಂಡಿದ್ದೆ. ಆದರೆ ಆರು ವರ್ಷದ ನಂತರ ಆ ಕನಸು ‘ಸದ್ಗುರು’ ಚಿತ್ರದಿಂದ ಈಡೇರಿದೆʼʼ ಎಂದು ನಿರ್ದೇಶಕ ವಿಕ್ರಮಾದಿತ್ಯ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಾಯಿ ಬಾಬಾ ಪಾತ್ರಧಾರಿ ಸಂಜನಾ ಗೋರ್ಪಡೆ ಮಾತನಾಡಿ ʻʻಸಿನಿಮಾದಲ್ಲಿ ನಟಿಸಬೇಕು ಎಂದು ಆಸೆ ಇತ್ತು. ಆ ಕಾರಣಕ್ಕೆ ಅಭಿನಯ ಶಾಲೆ ಸೇರಿಕೊಂಡು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಈ ಸಿನಿಮಾಗೆ ಆಡಿಷನ್ ಮೂಲಕ ಆಯ್ಕೆಯಾದೆ. ಸಾಯಿ ಬಾಬಾ ಪಾತ್ರ ನಿರ್ವಹಿಸಲು ನಿರ್ದೇಶಕರು ಆರಂಭದಲ್ಲಿ ನನಗೆ ತರಬೇತಿ ನೀಡಿದ್ದರು. ಆರಂಭದಲ್ಲಿ ಭಯ ಆಗುತ್ತಿತ್ತು. ನಿರ್ದೇಶಕರು, ಗುರುಗಳ ಸಹಕಾರದಿಂದ ಈ ಪಾತ್ರವನ್ನು ನಿರ್ವಹಿಸಿದ್ದೇನೆʼʼ ಎಂದು ಸಂಜನಾ ಗೋರ್ಪಡೆ ತಮ್ಮ ಮೊದಲ ಸಿನಿಮಾ ಅನುಭವ ಹಂಚಿಕೊಂಡರು. ವಿನು ಮನಸು ಸಂಗೀತ ನಿರ್ದೇಶನ, ಯತೀಶಕುಮಾರ್ ವಿ, ಅಜಯ್ ಮಂಜು ನಾಯ್ಡು ಕ್ಯಾಮೆರಾ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie 2022 | ನವೆಂಬರ್‌ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬರ!

Exit mobile version