Site icon Vistara News

Kannada New Movie | ʻಸೀತಾ ಸರ್ಕಲ್‌ ಶ್ರೀ ಕೃಷ್ಣನ್‌ ಮನೆʼ ಪೋಸ್ಟರ್‌ ಔಟ್‌!

Kannada New Movie

ಬೆಂಗಳೂರು : ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ (Kannada New Movie ) ವಿಭಿನ್ನ ಶೀರ್ಷಿಕೆಯ ಸಿನಿಮಾ ತನ್ನ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಿದೆ. ಎಲ್ಲಿಯ ಸೀತಾ? ಎಲ್ಲಿಯ ಕೃಷ್ಣ? ಯಾವುದು ಆ ಮನೆ? ಏನಿದರ ಮರ್ಮ? ಎಂಬಂತೆ ಕುತೂಹಲಕಾರಿಯಾಗಿದೆ ಟೈಟಲ್‌.

ಕಾಮಿಡಿ ಥ್ರಿಲ್ಲರ್ ಡ್ರಾಮಾ ಹೊಂದಿರುವ ಈ ಸಿನಿಮಾವನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಸಾಹಿತ್ಯ ಬರೆದಿರುವ ಅಭಿನಂದನ್ ದೇಶ್ ಪ್ರಿಯ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವಿನಯ್ ಯುವರಾಜ್, ಮನೋಜ್ ಪುತ್ತೂರು, ರಕ್ಷಿತಾ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ನವೀಂದ್ರ, ದತ್ತಣ್ಣ, ಮನ್ ದೀಪ್ ರಾಯ್, ಮಿಮಿಕ್ರಿ ಗೋಪಿ, ಅನಿಲ್ ಸಿದ್ದು, ಪ್ರಶಾಂತ್.ವೈ.ಎನ್, ರವಿ ಶಂಕರ್ ನಾಗ್, ಕೂಡ ಅಭಿನಯಿಸಿದ್ದಾರೆ ಅಭಿನಂದನ್ ದೇಶ್ ಪ್ರಿಯ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ.

ಇದನ್ನೂ ಓದಿ | Kannada New Movie | ಕಾಂತಾರದ ʻಗುರುವʼ ನಾಯಕ ನಟನಾಗಿ ನಟಿಸಲಿರುವ ಚಿತ್ರಕ್ಕೆ ಮುಹೂರ್ತ

ಮಹಾನ್ ಸಿನಿ ಕ್ರಿಯೇಷನ್ಸ್‌ ಬ್ಯಾನರ್ ನಡಿ ಪ್ರತೀತ್‌ ಅಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಷ್ಣು ಪ್ರಸಾದ್, ವಿಶ್ವ ಪಾಟೀಲ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಸಿನಿಮಾವನ್ನು ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹೊನ್ನಾವರ, ಸುತ್ತಮುತ್ತ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಾಘವೇಂದ್ರ. ವಿ ಸಂಗೀತ ನಿರ್ದೇಶನ, ಚೇತನ್ ರಾವ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ, ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Movie | ಡಿಸೆಂಬರ್ 14ಕ್ಕೆ ಸೆಟ್ಟೇರಲಿದೆ `ಜಸ್ಟ್‌ ಪಾಸ್‌ʼ ಸಿನಿಮಾ: ನಾಯಕಿ ರಿವೀಲ್‌!

Exit mobile version