Site icon Vistara News

Kannada New Movie: `ಸೋಮು ಸೌಂಡ್ ಇಂಜಿನಿಯರ್’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್‌!

Somu Sound Engineer Song Out

ಬೆಂಗಳೂರು: ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ ʻʻಸೋಮು ಸೌಂಡ್ ಇಂಜಿನಿಯರ್‌ʼʼ (Kannada New Movie) ಸುಕ್ಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಚೊಚ್ಚಲ (Somu Sound Engineer) ಹೆಜ್ಜೆ ಇದು. ವಿಭಿನ್ನ ಶೀರ್ಷಿಕೆ ಜತೆಗೆ ವಿಭಿನ್ನ ಕಥಾಹಂದರ ಹೊಂದಿರುವ ಸೋಮು ಸೌಂಡ್ ಇಂಜಿನಿಯರ್ ಸಿನಿಮಾದ ಮೊದಲ ಗಾನಲಹರಿ ಅನಾವರಣಗೊಂಡಿದೆ.

ಎ2 ಮ್ಯೂಸಿಕ್ ಯೂಟ್ಯೂಬ್‌ನಲ್ಲಿ ಸೋಮು ಸೌಂಡ್ ಇಂಜಿನಿಯರ್ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ.
ಧನಂಜಯ್ ರಂಜನ್ ಕ್ಯಾಚಿ ಮ್ಯಾಚಿ ಸಾಹಿತ್ಯದ ಹಾಡಿಗೆ ಸ್ವರೂಪ್ ಖಾನ್ ಧ್ವನಿಯಾಗಿ, ಚರಣ್ ರಾಜ್ ಟ್ಯೂನ್ ಹಾಕಿದ್ದಾರೆ. ನಾಯಕ ಸೋಮು ಹಾವ-ಭಾವ, ವರ್ತನೆಯನ್ನು ಈ ಹಾಡಿನಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿರುವ ಹಾಡಿಗೆ ಚರಣ್ ಅದ್ಭುತವಾದ ಮ್ಯೂಸಿಕ್ ಟಚ್ ಕೊಟ್ಟಿದ್ದು, ಶ್ರೇಷ್ಠ ಅಭಿನಯ ಅಮೋಘವಾಗಿದೆ.

ಸಲಗದ ಕೆಂಡ ಖ್ಯಾತಿಯ ಶ್ರೇಷ್ಠ ನಾಯಕನಾಗಿ, ಶ್ರುತಿ ಪಾಟೀಲ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ‘ಜಿಗರ್‌’ಗೆ ಧ್ವನಿಯಾದ ಸಂಜಿತ್‌ ಹೆಗಡೆ!

ವೈದ್ಯರಾಗಿರುವ ಕ್ರಿಸ್ಟೋಪರ್ ಕಿಣಿ ಸೋಮು ಸೌಂಡ್ ಇಂಜಿನಿಯರ್‌ಗೆ ಹಣ ಹಾಕಿದ್ದು, ಮಾಸ್ತಿ ಮಾತು ಪೊಣಿಸಿದ್ದಾರೆ. ಶಿವಸೇನಾ ಕ್ಯಾಮೆರಾ ಕೈಚಳಕ, ಚರಣ್ ಸಂಗೀತದ ಪುಳಕ ಚಿತ್ರದ ಪ್ಲಸ್ ಪಾಯಿಂಟ್. ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಇಳಕಲ್ ಗಂಜಿಹಾಳ ಕೂಡಲಸಂಗಮದ ಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಕಡ್ಡಿಪುಡಿ, ಕೆಂಡಸಂಪಿಗೆ, ದೊಡ್ಮನೆ ಹುಡುಗ, ಟಗರು ಚಿತ್ರಗಳಿಗೂ ಡೈರೆಕ್ಟರ್ ಅಭಿ ಸಹ ನಿರ್ದೇಶಕರಾಗಿ ದುಡಿದಿದ್ದ ಅಭಿ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಸೋಮು ಸೌಂಡ್ ಇಂಜಿನಿಯರ್ ಬಳಗ ರೀ ರೆಕಾರ್ಡಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ.

Exit mobile version