Site icon Vistara News

Kannada New Movie | ಸೆಟ್ಟೇರಲು ಸಜ್ಜಾಗಿದೆ ಡಾಲಿ ಪಿಕ್ಚರ್ಸ್ ನಿರ್ಮಾಣದ ʻಟಗರು ಪಲ್ಯʼ

Kannada New Movie

ಬೆಂಗಳೂರು: ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಟಗರು ಪಲ್ಯ’ (Kannada New Movie) ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ‘ಟಗರು ಪಲ್ಯ’ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೂಲಕ ಉಮೇಶ್ ಕೆ. ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಟಗರು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟ ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ ಅಂಗಳದ ಬಹು ಬೇಡಿಕೆಯ ನಟ. ಕೇವಲ ನಟನಾಗಿ ಮಾತ್ರ ಉಳಿಯದೇ ನಿರ್ಮಾಪಕನಾಗಿಯೂ ಡಾಲಿ ಗಮನ ಸೆಳೆಯುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದು ಮೊದಲೆರಡು ಸಿನಿಮಾವಾಗಿ ‘ಬಡವ ರಾಸ್ಕಲ್’ ಹಾಗೂ ‘ಹೆಡ್ ಬುಶ್’ ನಿರ್ಮಾಣ ಮಾಡಲಾಗಿತ್ತು. ಈ ಹಿಂದೆ ಡಾಲಿ ಧನಂಜಯ್‌ ಪಿಕ್ಚರ್ಸ್ ಮೂರನೇ ಸಿನಿಮಾ ‘ಟಗರು ಪಲ್ಯ’ ಅನೌನ್ಸ್ ಆಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ‘ಟಗರು ಪಲ್ಯ’ ಇದೀಗ ಸೆಟ್ಟೇರಲು ತಯಾರಾಗಿದೆ.

ಇದನ್ನೂ ಓದಿ | Kannada New Movie | ʻಸದ್ದು ವಿಚಾರಣೆ ನಡೆಯುತ್ತಿದೆʼ ಚಿತ್ರ ನವೆಂಬರ್‌ 25ರಂದು ತೆರೆಗೆ

ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಉಮೇಶ್ ಕೆ. ಕೃಪ ಅವರಿಗಿದೆ. ‘ಟಗರು ಪಲ್ಯ’ ಕಟೆಂಟ್ ಆಧಾರಿತ ಸಿನಿಮಾವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕ ಉಮೇಶ್ ಕೃಪ ತಿಳಿಸಿದ್ದಾರೆ.

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಸದ್ಯದಲೇ ರಿವೀಲ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಂಗಾಯಣ ರಘು, ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಇದನ್ನೂ ಓದಿ | Kannada New Movie | ʻಸದ್ದು ವಿಚಾರಣೆ ನಡೆಯುತ್ತಿದೆʼ ಟ್ರೈಲರ್‌ ರಿಲೀಸ್‌: ನವೆಂಬರ್‌ 25ಕ್ಕೆ ತೆರೆಗೆ!

Exit mobile version