Site icon Vistara News

Kannada New Movie: ’ಮುಗಿಲ್ ಪೇಟೆ’ ಡೈರೆಕ್ಟರ್ ಹೊಸ ಸಿನಿಮಾ; `ಜೋಡಿಹಕ್ಕಿ’ ಸೀರಿಯಲ್ ತಾಂಡವ್ ರಾಮ್ ನಾಯಕ!

Thandav Ram Cinema

ಬೆಂಗಳೂರು: ʻಮುಗಿಲ್ ಪೇಟೆʼ ಸಿನಿಮಾದ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದ ನಿರ್ದೇಶಕ ಭರತ್ ಎಸ್ ನಾವುಂದ ಮತ್ತೊಂದು ಹೊಸ ಆಯಾಮದೊಂದಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಮುಗಿಲ್ ಪೇಟೆ ಚಿತ್ರದ ಮೂಲಕ ಭರವಸೆ ನಿರ್ದೇಶಕರಾಗಿ ಹೊರಹೊಮ್ಮಿರುವ ಅವರೀಗ ʻಜೋಡಿಹಕ್ಕಿʼ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ (Thandav Ram) ಅವರನ್ನು ನಾಯಕನಟರಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯಿಸುತ್ತಿದ್ದಾರೆ.

ʻಅಡಚಣೆಗಾಗಿ ಕ್ಷಮಿಸಿʼ ಎಂಬ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಭರತ್ ಎಸ್ ನಾವುಂದ ಆ ಬಳಿಕ ಸುಂದರ ಪ್ರೇಮಕಥೆ ಜತೆಗೆ ಪಕ್ಕ ಫ್ಯಾಮಿಲಿ ಎಂಟರ್ಟೈನರ್‌ ಮುಗಿಲ್ ಪೇಟೆ ಚಿತ್ರವನ್ನು ಪ್ರೇಕ್ಷಕ ಎದುರು ನಿಲ್ಲಿಸಿದರು. ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಭರತ್ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು . ಇದೀಗ ಅವರು ಮೂರನೇ ಸಿನಿಮಾಗೆ ಅಣಿಯಾಗಿದ್ದಾರೆ.

ಇದನ್ನೂ ಓದಿ: Kannada New Movie: ‘ರಕ್ತಾಕ್ಷ’ ಸಿನಿಮಾದ ಜವಾರಿ ಸಾಂಗ್ ರಿಲೀಸ್; ಅರೆಸ್ಟ್ ಮಿ ಬೇಬಿ ಎಂದು ಹೆಜ್ಜೆ ಹಾಕಿದ ರೋಹಿತ್

ಜೋಡಿಹಕ್ಕಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ತಾಂಡವ್ ರಾಮ್ ಭರತ್ ಜತೆ ಕೈ ಜೋಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಾಗಣದೊಂದಿಗೆ ನಿರ್ಮಾಣವಾಗುತ್ತಿರುವ ಈ ಸಿನಿಮಾ ಎ ಕ್ಯೂಬ್ ಫಿಲ್ಮಂಸ್ ಸಂಸ್ಥೆಯ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿದೆ. ಸಿನಿಮಾದ ಹೆಸರು ಇನ್ನಷ್ಟೇ ಬಹಿರಂಗವಾಗಬೇಕಿದೆ. ಭರತ್ ಎಸ್ ನಾವುಂದರವರ ಮೂರನೇ ಕನಸು ಇದಾಗಿದೆ. ಪಕ್ಕ ಫ್ಯಾಮಿಲಿ ಕಥಾಹಂದರದ ಸಿನಿಮಾ ಮಾಡಲು ಸಜ್ಜಾಗಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲಿದೆ.

Exit mobile version