Site icon Vistara News

Kannada New Movies | ಒಂದೇ ದಿನ ಬಿಡುಗಡೆಗೆ ಸಜ್ಜಾದ ಗಾಳಿಪಟ-2, ರವಿ ಬೋಪಣ್ಣ: ನಿಮ್ಮ ಆಯ್ಕೆ?

Kannada New Movies ಒಂದೇ ದಿನ ಬಿಡುಗಡೆಗೆ ಸಜ್ಜಾದ ಗಾಳಿಪಟ-2 ಹಾಗೂ ರವಿ ಬೋಪಣ್ಣ

ಬೆಂಗಳೂರು: ರಾಜ್ಯಾದ್ಯಂತ ಆಗಸ್ಟ್‌ 12ರಂದು ಶುಕ್ರವಾರ ಬಹು ನಿರೀಕ್ಷೆಯ ಸಿನಿಮಾಗಳು (Kannada New Movies) ಬಿಡುಗಡೆಗೊಳ್ಳಲು ಸಜ್ಜಾಗುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಮತ್ತು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ನಿರ್ದೇಶಿಸಿ, ನಟಿಸಿರುವ ರವಿ ಬೋಪಣ್ಣ ಚಿತ್ರಗಳ ನಡುವೆ ತೀವ್ರ ಪೈಪೋಟಿ ಇದೆ.

ರವಿಚಂದ್ರನ್‌ ಅವರ ʻರವಿ ಬೋಪಣ್ಣʼ ಸಿನಿಮಾ ಅವರ ಈಶ್ವರಿ ಪ್ರೊಡಕ್ಷನ್‌ನ 50ನೇ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿ ಕಂಟೆಂಟ್ ಡಿಕ್ಟೇಟರ್ ಆಗಿರುವವರು ವಿ. ರವಿಚಂದ್ರನ್. ಚಿತ್ರಕ್ಕೆ ಜಿ.ಎಸ್.ವಿ.ಸೀತಾರಾಮ್ ಛಾಯಾಗ್ರಹಣ ಮಾಡಿದ್ದಾರೆ. 

ಇದನ್ನೂ ಓದಿ | Gaalipata 2 | ಗಾಳಿಪಟ-2 ಪ್ರೀ ರಿಲೀಸ್ ಇವೆಂಟ್: ಭಾಗಿಯಾದ ಸ್ಯಾಂಡಲ್‌ವುಡ್‌ ತಾರಾ ಬಳಗ

ಈ ಚಿತ್ರದಲ್ಲಿ ರಾಮಕೃಷ್ಣ, ಜೈಜಗದೀಶ್‌, ರವಿಶಂಕರ್‌ ಗೌಡ, ಮೋಹನ್‌, ಕಾವ್ಯ ಶೆಟ್ಟಿ ತಾರಾ ಬಳಗವಿದೆ. ಇನ್ನೂ ವಿಶೇಷ ಅಂದರೆ ಕಿಚ್ಚ ಸುದೀಪ್‌ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಅಷ್ಟೇ ʻಈ ಶರೀರ ಯಾಕೆ ಹಿಂಗೆʼ ಎಂಬ ಸಾಹಿತ್ಯದ ಗೀತೆಯನ್ನು ಬಿಡುಗಡೆ ಮಾಡಲಾಗಿತ್ತು. ಕಾವ್ಯ ಶೆಟ್ಟಿ ಮೈ ಚಳಿ ಬಿಟ್ಟು ಈ ಚಿತ್ರದಲ್ಲಿ ನಟಿಸಿದ್ದಾರೆ.

ಯೋಗರಾಜ್‌ ಭಟ್‌ ನಿರ್ದೇಶನದ ಗಾಳಿಪಟ-2 ಸಿನಿಮಾ ಕೂಡ ಅಂದೇ ಬಿಡುಗಡೆಗೊಳ್ಳುತ್ತಿದೆ. ಪವನ್‌ ಕುಮಾರ್‌ ಹಾಗೂ ದಿಗಂತ್‌ ಇದರಲ್ಲಿ ನಟಿಸಿದ್ದಾರೆ. ಇದೀಗ ಬುಕ್‌ ಮೈ ಶೋನಲ್ಲಿ ಅಕ್ಷಯ್‌ ಕುಮಾರ್‌ ಅಭಿನಯದ ʻರಕ್ಷಾಬಂಧನ್‌ʼ ಚಿತ್ರಕ್ಕಿಂತಲೂ ಹೆಚ್ಚಿನ ವೋಟ್ಸ್‌ ಗಾಳಿಪಟ-2 ಪಡೆದುಕೊಂಡಿದೆ.

ಆಗಸ್ಟ್‌ 11ರಂದು ಬಾಲಿವುಡ್‌ನ ʻರಕ್ಷಾ ಬಂಧನ್‌ʼ ಹಾಗೂ ʻಲಾಲ್‌ ಸಿಂಗ್‌ ಚಡ್ಡಾʼ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಈ ಚಿತ್ರಗಳ ಮೇಲೂ ಭರ್ಜರಿ ನಿರೀಕ್ಷೆ ಇದೆ. ಕನ್ನಡದ ಎರಡು ಸಿನಿಮಾಗಳಲ್ಲಿ ಹೊಸತನವಿದೆ. ಯಾವ ಸಿನಿಮಾ ಹೆಚ್ಚು ಪ್ರೇಕ್ಷಕರ ಮನ ಗೆಲುತ್ತದೆ ಎಂಬ ಬಗ್ಗೆ ಕುತೂಹಲ ಮೂಡಿದೆ.

ಇದನ್ನೂ ಓದಿ | ಕ್ರೇಜಿಸ್ಟಾರ್‌ ಜನ್ಮದಿನಕ್ಕೆ ಸಿಕ್ತು ಭರ್ಜರಿ ಗಿಫ್ಟ್‌

Exit mobile version