ಬೆಂಗಳೂರು; ಎಲ್ಲೆಡೆ ವೈರಲ್ ಆಗುತ್ತಿರುವ ಎಐ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕೃತಕ ಬುದ್ಧಿಮತ್ತೆ) (Artificial Intelligence ) ಇಮೇಜ್‌ಗಳಲ್ಲಿ ನಟ ರಿಷಬ್ ಶೆಟ್ಟಿ ಹಾಗೂ ನಟಿ ಆಶಿಕಾ ರಂಗನಾಥ್ ಮಿಂಚಿದ್ದರು. ಇದೀಗ ಯಶ್, ಪುನೀತ್ ರಾಜ್‌ಕುಮಾರ್, ಇತರೆ ಪ್ರಮುಖ ಸ್ಯಾಂಡಲ್‌ವುಡ್ ತಾರೆಯರ ಫೋಟೊ ವೈರಲ್ ಆಗುತ್ತಿದೆ. ಲೇಜಿ ಡಿಸೈನರ್ ಈ ಫೋಟೊಗಳನ್ನು ಹಂಚಿಕೊಂಡಿದ್ದು ʻʻಲೆಜೆಂಡ್‌ಗಳನ್ನು ಮರುರೂಪಿಸಲಾಗುತ್ತಿದೆ: ಮಹಾಭಾರತದ ನಾಯಕರಾಗಿ ಕನ್ನಡ ತಾರೆಯರು! ಕಲ್ಪನೆಯ ಶಕ್ತಿಯನ್ನು ಹೊರಹಾಕುವುದು! ನಮ್ಮ ನೆಚ್ಚಿನ ಕನ್ನಡ ಚಲನಚಿತ್ರ ತಾರೆಯರು AI ಕಲಾತ್ಮಕತೆಯೊಂದಿಗೆ ಅಪ್ರತಿಮ ಮಹಾಭಾರತದ ಪಾತ್ರಗಳಿಗೆ ಸಾಕ್ಷಿಯಾಗುತ್ತಾರೆ! ಮಹಾಕಾವ್ಯವು ಸಂಪೂರ್ಣ ಹೊಸ ಆಯಾಮದಲ್ಲಿ ಜೀವಂತವಾಗಿದೆʼʼಎಂದು ಪೋಟೊ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bangalore-Mysore Expressway: ಅತಿ ವೇಗದ ವಾಹನಗಳ ಮೇಲೆ ಕಣ್ಣಿಡಲು ಎಐ ಕ್ಯಾಮೆರಾಗಳ ಅಳವಡಿಕೆ
ನಾವೀಗ ಕೃತಕ ಬುದ್ಧಿಮತ್ತೆ ಯುಗದಲ್ಲಿದ್ದೇವೆ. ಪ್ರತಿಕ್ಷೇತ್ರದಲ್ಲೂ ಕೃತಕ ಬದ್ಧಿಮತ್ತೆ (artificial intelligence – AI) ಬಳಕೆಯಾಗುತ್ತಿದೆ. ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ, ಸೇವಾ ಕ್ಷೇತ್ರಗಳಲ್ಲಂತೂ ಈ ತಂತ್ರಜ್ಞಾನ ಧೂಳೆಬ್ಬಿಸಿದೆ. ಅದರಲ್ಲೂ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ (ChatGPT) ಚಾಲ್ತಿಗೆ ಬಂದ ಮೇಲೆ ಕೆಲಸದ ವ್ಯಾಖ್ಯಾನಗಳೇ ಬದಲಾಗಿವೆ. ಈಗೀಗ ಸುದ್ದಿ ವಾಹಿನಿಗಳಲ್ಲಿ (News Channel) ಕೃತಕ ಬುದ್ಧಿಮತ್ತೆಯ ಕರಾಮತ್ತು ಶುರುವಾಗಿದೆ.