Site icon Vistara News

Rishab Shetty : ಆಗಸ್ಟ್‌ನಲ್ಲಿ ಸಿಹಿ ಸುದ್ದಿ ಕೊಡಲಿದ್ಯಾ ಕಾಂತಾರ-2? ರಿಷಬ್‌ ಶೆಟ್ಟಿ ಕುರಿತ ಹೊಸ ಅಪ್‌ಡೇಟ್‌

Kantara 2 Movie Update

#image_title

ಬೆಂಗಳೂರು: ಕಾಂತಾರ ಖ್ಯಾತಿಯ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಈಗಾಗಲೇ ಕಾಂತಾರ-2 ಬರವಣಿಗೆಯ ಕೆಲಸ ಶುರುಮಾಡಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ತಯಾರಾಗಲಿದ್ದು, ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂತಾರ-1 ಸಿಕ್ವೆಲ್‌ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್‌ (Prequel film) ಆಗಿ ಮೂಡಿಬರಲಿದೆ.

ಮೂಲಗಳ ಪ್ರಕಾರ ಆಗಸ್ಟ್ 27ರಂದು ಸಿನಿಮಾಗೆ ಮುಹೂರ್ತ ನೆರವೇರುವ ಸಾಧ್ಯತೆ ಇದೆ. ಆ ಬಳಿಕ ಚಿತ್ರತಂಡ ನೇರವಾಗಿ ಶೂಟಿಂಗ್​ಗೆ ಇಳಿಯಲಿದೆ. ‘ನೀವು ನೋಡಿರುವುದು ಎರಡನೇ ಭಾಗ. ಮೊದಲ ಭಾಗವನ್ನು ನಾನು ಕಟ್ಟಿಕೊಡುತ್ತಿದ್ದೇನೆ’ ಎಂದು ರಿಷಬ್ ಶೆಟ್ಟಿ ಈ ಮೊದಲು ಹೇಳಿದ್ದರು. ಈ ಮೂಲಕ ಪ್ರಿಕ್ವೆಲ್‌ ಮಾಡುತ್ತಿರುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಕಾಂತಾರ 2’ ಚಿತ್ರಕ್ಕಾಗಿ ಮಳೆಗಾಲದ ಅವಶ್ಯಕತೆ ಇದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಆಗಸ್ಟ್-ಸೆಪ್ಟೆಂಬರ್​ ತಿಂಗಳನ್ನು ರಿಷಬ್​ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್‌ ಖಚಿತಪಡಿಸಿದ್ದಾರೆ. ಕಾಂತಾರ-1ರಲ್ಲಿ ನಾಯಕ ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್, ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kantara movie : 25 ದಿನದಿಂದ ಸಸ್ಯಾಹಾರಿ ಆಗಿದ್ದೆ, ಪಾಸಿಟಿವ್‌ ಕಂಪನ ಆಯ್ತು; ಆವೇಶದ ಅನುಭವ ಹಂಚಿಕೊಂಡ ವಿದ್ಯಾರ್ಥಿ ವಿಶಾಲ್

ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಬಳಿಕ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಇದು ತೆರೆ ಕಂಡಿತ್ತು.

Exit mobile version