Site icon Vistara News

Rishab Shetty: ತಾವು ಓದಿದ ಸರ್ಕಾರಿ ಕನ್ನಡ ಶಾಲೆ ದತ್ತು ಪಡೆದ ರಿಷಬ್‌ ಶೆಟ್ಟಿ!

kantara hero rishab shetty adopts keradi govt school in his native

ಬೆಂಗಳೂರು:  ನಗರದ ನಂದಿ ಲಿಂಕ್ ಗ್ರೌಂಡ್ಸ್​ನಲ್ಲಿ ಜುಲೈ 7ರಂದು ಅದ್ಧೂರಿ ವೇದಿಕೆಯಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ರಿಷಬ್‌ ಶೆಟ್ಟಿ (Rishab Shetty). ವಿಶೇಷವೆಂದರೆ ಇದೇ ವೇದಿಕೆ ಮೇಲೆ ರಿಷಬ್​ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ರಿಷಬ್ ಶೆಟ್ಟಿ ಅವರಿಗೆ ಉಡುಗೊರೆಯನ್ನು ನೀಡಿದ್ದರು. ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಸಮಾಜಕ್ಕೆ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದರು. ಅದರಂತೆ ಈಗ ರಿಷಬ್‌ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾವು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ.

`ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್​ಗೆ ಬಹಳ ಇಷ್ಟವಾಗುವ ಕೆಲಸ. ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಹೋಗಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಊರ ಪ್ರಮುಖರು, ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಬ್ ಶೆಟ್ಟಿಯವರನ್ನು ಅಭಿನಂದಿಸಿದರು.

ಕಳೆದ ವರ್ಷ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಮೊದಲ ಭಾಗದ (Kantara Movie) ಮುಹೂರ್ತ ನೆರವೇರಿದೆ. ರಿಷಬ್‌ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ. ಇದೀಗ ಚಿತ್ರತಂಡ ಕಲಾವಿದರ ಹುಡುಕಾಟದಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ: Rishab Shetty: ಪರೋಕ್ಷವಾಗಿ ರಶ್ಮಿಕಾ, ಪ್ರಶಾಂತ್‌ ನೀಲ್‌ಗೆ ತಿರುಗೇಟು ಕೊಟ್ರಾ ರಿಷಬ್‌! ಸ್ಪಷ್ಟನೆ ಏನು?

ಫೆಬ್ರವರಿಯಿಂದ ʼಕಾಂತಾರ-1ʼ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. ವರದಿಗಳ ಪ್ರಕಾರ ಈ ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಇತಿಹಾಸ ಸೃಷ್ಟಿಸಿದ್ದ ʼಕಾಂತಾರʼ
ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಅದು ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿ ಸಾರ್ವಕಾಲಿಕ ಕಲೆಕ್ಷನ್‌ ಮಾಡಿದ ಕನ್ನಡದ ಎರಡನೇ ಚಿತ್ರವಾಗಿ ಹೊರಹೊಮ್ಮಿತ್ತು. ಇದೀಗ ಈ ಚಿತ್ರದ ಪ್ರೀಕ್ವೆಲ್‌ ಆಗಿ ʼಕಾಂತಾರ -1ʼ ತೆರೆಗೆ ಬರಲಿದೆ. ಅಂದರೆ ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Exit mobile version