ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ತನ್ನ ಖದರ್ ತೋರಿಸಿರುವ ‘ಕಾಂತಾರ’ ಸಿನಿಮಾ ಇದೀಗ ಉತ್ತರ ಭಾರತಕ್ಕೂ ಲಗ್ಗೆ ಇಡುತ್ತಿದೆ. ಈ ಮೂಲಕ ಹಿಂದಿ ಪ್ರಾಬಲ್ಯವಿರುವ ಪ್ರದೇಶದಲ್ಲೂ ಸ್ಯಾಂಡಲ್ವುಡ್ ಸಿನಿಮಾ ಘರ್ಜಿಸಲು ಸಜ್ಜಾಗಿದೆ. ಈಗಾಗಲೇ ಹಿಂದಿ ವರ್ಷನ್ ಟ್ರೈಲರ್ ನೋಡಿ ಜನ ಗ್ರೇಟ್ ಅಂತಿದ್ದಾರೆ. ಈ ಸಂದರ್ಭದಲ್ಲೇ ಹಿಂದಿಗೆ ಡಬ್ ಆಗಿರುವ ‘ಕಾಂತಾರ’ (Kantara Hindi) ಸಿನಿಮಾ 2500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ. ಹೀಗೆ ‘ಕಾಂತಾರ’ ಅಬ್ಬರ ಕಂಡು ಬಾಲಿವುಡ್ ಸ್ಟಾರ್ ನಟರು ಬೆಚ್ಚಿಬಿದ್ದಿದ್ದು, ನಾಳೆಯೇ ‘ಕಾಂತಾರ’ ಘರ್ಜನೆ ಶುರುವಾಗಲಿದೆ.
ಈಗಾಗಲೇ ಜೇಮ್ಸ್, ಕೆಜಿಎಫ್-2, 777 ಚಾರ್ಲಿ ಜಗತ್ತಿನಾದ್ಯಂತ ಖದರ್ ತೋರಿಸಿವೆ. ಇದೀಗ ‘ಕಾಂತಾರ’ ಸರದಿ ಬಂದಿದ್ದು, ಬಾಲಿವುಡ್ ಸಿನಿಮಾಗಳಿಗೆ ಸ್ಕ್ರೀನ್ ಸಿಗುತ್ತಿಲ್ಲ. ಕನ್ನಡ ಸಿನಿಮಾ ‘ಕಾಂತಾರ’ ಬಿಡುಗಡೆಯಾಗುತ್ತಿರುವ ದಿನವೇ ಬಾಲಿವುಡ್ನಲ್ಲಿ ಒಟ್ಟು 9 ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ ಬಾಲಿವುಡ್ ಸಿನಿಮಾಗಳಿಗೆ ಥಿಯೇಟರ್ ಸಿಗುವುದು ಅನುಮಾನವಾಗಿದೆ. ಏಕೆಂದರೆ ಈಗಾಗಲೇ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ಕಾಂತಾರ 2,500ಕ್ಕೂ ಹೆಚ್ಚು ಸ್ಕ್ರೀನ್ಗಳನ್ನು ತನ್ನದಾಗಿಸಿಕೊಂಡಿದೆ.
ಬಾಲಿವುಡ್ನಲ್ಲಿ ಸಂಚಲನ
ಹಿಂದೆ ಒಂದು ಕಾಲವಿತ್ತು ಹಿಂದಿ ಅಥವಾ ಬಾಲಿವುಡ್ ಸಿನಿಮಾಗಳಿಗೆ ಕನ್ನಡ ಚಿತ್ರಗಳು ಹೆದರುತ್ತಿದ್ದವು. ಕನ್ನಡ ಸಿನಿಮಾ ನಿರ್ಮಿಸಿದ ನಿರ್ಮಾಪಕರು ಬಾಲಿವುಡ್ ಸಿನಿಮಾಗಳ ಎದುರು ಕನ್ನಡ ಚಿತ್ರಗಳನ್ನು ರಿಲೀಸ್ ಮಾಡಲು ಹೆದರುತ್ತಿದ್ದರು. ಆದರೆ ಈಗ ಸೀನ್ ಚೇಂಜ್ ಆಗಿದ್ದು, ಕನ್ನಡ ಸಿನಿಮಾಗಳನ್ನು ಕಂಡು ಬಾಲಿವುಡ್ ಸ್ಟಾರ್ಗಳು ಬೆಚ್ಚಿಬೀಳುವ ಟೈಂ ಬಂದುಬಿಟ್ಟಿದೆ. ಹಾಕಿದ ಹಣ ವಾಪಸ್ ಬಂದರೆ ಸಾಕು ಎಂಬ ಸ್ಥಿತಿ ಬಾಲಿವುಡ್ ಅಂಗಳದಲ್ಲಿ ನಿರ್ಮಾಣವಾಗಿಬಿಟ್ಟಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ಕಾಂತಾರ’ ಥಿಯೇಟರ್ಗಳ ಒಳಗೂ ಮತ್ತು ಹೊರಗೂ ಭರ್ಜರಿ ಸದ್ದು ಮಾಡುತ್ತಿದೆ. ಕರ್ನಾಟಕ ಮಾತ್ರವಲ್ಲ ದೇಶದ ಮೂಲೆ ಮೂಲೆಯಲ್ಲೂ ಈಗ ‘ಕಾಂತಾರ’ ಅಬ್ಬರ ಜೋರಾಗಿದೆ. ದಸರಾ ಸಂಭ್ರಮದಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದ್ದ ‘ಕಾಂತಾರ’ ಜಗತ್ತಿನಾದ್ಯಂತ ₹85 ಕೋಟಿಗೂ ಹೆಚ್ಚು ಗಳಿಸಿರಬಹುದು ಎನ್ನುತ್ತಿದ್ದಾರೆ ಬಾಕ್ಸ್ ಆಫಿಸ್ ತಜ್ಞರು. ಇದೇ ವೇಳೆ ಭಾರತದ ಬೇರೆ ಬೇರೆ ಭಾಷೆಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದ್ದು, ₹100 ಕೋಟಿ ಕ್ಲಬ್ ಸೇರಿ ಇತಿಹಾಸ ಸೃಷ್ಟಿಸುವುದು ಪಕ್ಕಾ ಎನ್ನಲಾಗುತ್ತಿದೆ.
ಇದನ್ನೂ ಓದಿ: Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ